News Hour: ಪ್ರಮಾಣವಚನ ಸ್ವೀಕರಿಸಿದ ಸಚಿವರು, ಟ್ರಬಲ್‌ ತಂದ ಹಿರಿಯರು!

ಕರ್ನಾಟಕದಲ್ಲಿ ಕೊನೆಗೂ ಸಂಪುಟ ಸರ್ಕಸ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅದರ ನಡುವೆ ಪಕ್ಷದ ಹಿರಿಯ ನಾಯಕರು ತಮಗೆ ಸಚಿವ ಸ್ಥಾನ ಸಿಗದೇ ಇರೋದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಬಿಕೆ ಹರಿಪ್ರಸಾದ್‌, ಪುಟ್ಟರಂಗಶೆಟ್ಟಿ ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.27): ಕರ್ನಾಟಕದ ನೂತನ ಸರ್ಕಾರದ ಕ್ಯಾಬಿನೆಟ್‌ ವಿಸ್ತರಣೆ ಪ್ರಕ್ರಿಯೆ ಯಾವುದೇ ಅಡ್ಡಿಗಳಿಲ್ಲದೆ ನೆರವೇರಿದೆ. ಶನಿವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 24 ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದರು.

ಒಂದೆಡೆ ಸಿದ್ಧರಾಮಯ್ಯ ಸರ್ಕಾರ ಸಂಪುಟ ವಿಸ್ತರಣೆಯನ್ನು ಮುಗಿಸಿದ ಸಮಾಧಾನದಲ್ಲಿದ್ದರೆ, ಇನ್ನೊಂದೆಡೆ ಪಕ್ಷದ ಕೆಲ ಹಿರಿಯ ನಾಯಕರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಅದರಲ್ಲೂ ಬಿಕೆ ಹರಿಪ್ರಸಾದ್, ಪುಟ್ಟರಂಗಶೆಟ್ಟಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ.

Praveen Nettaru Wife Job: ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕಕ್ಕೆ ಆದೇಶ

ರಾಜ್ಯ ರಾಜಕೀಯದ ನಡುವೆ, ಕೇವಲ 30 ತಿಂಗಳ ಅಂತರದಲ್ಲಿಯೇ ನಿರ್ಮಾಣವಾಗಿರುವ ಭವ್ಯ ನೂತನ ಸಂಸತ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Related Video