ಬಿಜೆಪಿ ತೊರೆದ ನಿಮಗೆ ಕಾಂಗ್ರೆಸ್ ಕೊಟ್ಟಿದ್ದೇನು? ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕಾ? ಈ ಬಗ್ಗೆ ಸವದಿ ಹೇಳಿದ್ದೇನು ?

ಲಕ್ಷ್ಮಣ್ ಸವದಿ ಯಾರ ಬಣ? ಜಾರಕಿಹೊಳಿ ಜೊತೆ ಅದೇನು ಜಗಳ? ಸೇರಿದಂತೆ ಇತರ ಹಲವು ಪ್ರಶ್ನೆಗಳಿಗೆ ನ್ಯೂಸ್ ಅವರ್ ಸ್ಪೆಷಲ್‌ನಲ್ಲಿ ಲಕ್ಷ್ಮಣ ಸವದಿ ಉತ್ತರವನ್ನು ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ..
 

First Published Nov 19, 2023, 3:30 PM IST | Last Updated Nov 19, 2023, 3:30 PM IST

ನಾನು ಮೂಲತಃ ರಾಮಕೃಷ್ಣ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನನಗೆ ಬಿಜೆಪಿಯಿಂದ(BJP) ಕಾಂಗ್ರೆಸ್‌ಗೆ (congress)ಬಂದ ಮೇಲೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ರಾಜಕಾರಣದಲ್ಲಿ ಆಸೆಗಳಿಗೆ ಕೊನೆ ಎಂಬುದು ಇರುವುದಿಲ್ಲ. ನಾನು ಸ್ವಾಭಿಮಾನಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದೆ. ಬಹಳಷ್ಟು ಜನರಿಗೆ ಲಕ್ಷ್ಮಣ ಸವದಿಗೆ(Lakshmana Savadi) ಟಿಕೆಟ್‌ ಕೊಡಿಸಬಾರದು ಎಂದಿತ್ತು, ಅದಕ್ಕೆ ಕೇಂದ್ರ ನಾಯಕರು ಬಲಿಯಾದ್ರು ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಹೇಳುತ್ತಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೇಳುತ್ತೇನೆ. ನಾನೇ ಅಭ್ಯರ್ಥಿ ಎಂದು ಹೇಳಿದ್ರು. ಅವರು ಈ ಮಾತನ್ನು ಹೇಳಿಲ್ಲ ಅಂದ್ರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಸವದಿ ಸವಾಲು ಹಾಕಿದ್ದಾರೆ. ನಾನು ಪಕ್ಷಕ್ಕೆ ದ್ರೋಹ ಮಾಡುವ ಕೆಲಸವನ್ನು ಮಾಡಿಲ್ಲ. ಅತ್ಯಂತ ಗೌರವ, ಆತ್ಮೀಯವಾಗಿ ನನ್ನನ್ನು ಕರೆಸಿಕೊಂಡಿದ್ದರಿಂದ ನಾನು ಕಾಂಗ್ರೆಸ್‌ಗೆ ಹೋದೆ ಎಂದು ಲಕ್ಷ್ಮಣ ಸವದಿ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  ಸಚಿವ ಪ್ರಿಯಾಂಕ್ ಖರ್ಗೆಯೇ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ:ಮಣಿಕಂಠ ರಾಠೋಡ್ ಆರೋಪ

Video Top Stories