ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!

ಸಮಂತಾ ಹೈದರಾಬಾದ್​​ನಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ರು. ಹೋಗಿ ವಾಪಸ್ ಹೊರಗೆ ಬರೋ ಅಷ್ಟರಲ್ಲಿ ಒಂದು ರಾಶಿ ಜನ ಸಮಂತಾಗಾಗಿ ಕಾದು ಕುಳಿತಿದ್ರು. ಸಮಂತಾ ಹೊರ ಬಂದಿದ್ದೇ ತಡ. ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಸುತ್ತುವರೆದಿದ್ರು.

Share this Video
  • FB
  • Linkdin
  • Whatsapp

ಸಿನಿಮಾ ನಟಿಯರು ಜನರ ಮಧ್ಯೆ ಸಿಲುಕಿಕೊಂಡ್ರೆ ಅವರ ಕಥೆ ಮುಗಿದೇ ಹೋಯ್ತು. ಅವರಿಂದ ತಪ್ಪಿಸಿಕೊಂಡು ಬರೋ ಅಷ್ಟರಲ್ಲಿ ಮೂರು ಲೋಕ ಕಣ್ಮುಂದೆ ಬಂದು ಹೋಗುತ್ತೆ. ಮೊನ್ನೆ ಮೊನ್ನೆಯಷ್ಟೇ ನಟಿ ನಿಧಿ ಅಗರ್ವಾಲ್​ ಪಟ್ಟ ಪಡಿಪಾಟಲು ಇಡೀ ನೋಡಾಯ್ತು. ಈಗ ಅದೇ ಊರಲ್ಲಿ ನಟಿ ಸಮಂತಾ ಕೂಡ ಜನರ ಮಧ್ಯೆ ಸಿಲುಕಿ ಒದ್ದಾಡಿ ಹೊರ ಬಂದಿದ್ದಾರೆ. ಸಮಂತಾ ರುತ್​ ಪ್ರಭು ಈಗ ಸಂಸಾರಿ.. ನಾಗಚೈತನ್ಯಾ ಜೊತೆ ಡಿವೋರ್ಸ್ ಆದ್ಮೇಲೆ ಸಮಂತಾ ಎಲ್ಲಿ ಸನ್ಯಾಸಿ ಆಗ್ತಾರೋ ಅಂತ ತಲೆ ಕೆಡಿಸಿಕೊಂಡವರೇ ಹೆಚ್ಚು. ಅಷ್ಟೆ ಅಲ್ಲ ಡಿವೋರ್ಸ್ ಬಳಿಕ ಸ್ಯಾಮ್​ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿದೆ. ಆದರೆ ಡೈರೆಕ್ಟರ್ ರಾಜ್ ನಿಡಿಮೋರು ಜೊತೆ ಎರಡನೇ ಮ್ಯಾರೇಜ್ ಮಾಡ್ಕೊಂಡ್ರು ಸಮಂತಾ.

ಹಾಗಂತ ಈ ಬ್ಯೂಟಿಯ ಕ್ರೇಝ್ ಏನು ಕಮ್ಮಿ ಆಗಿಲ್ಲ. ಅದಕ್ಕೆ ಈ ವೀಡಿಯೋನೆ ಸಾಕ್ಷಿ. ನಟಿ ಸಮಂತಾ ಹೈದರಾಬಾದ್​​ನಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ರು. ಹೋಗಿ ವಾಪಸ್ ಹೊರಗೆ ಬರೋ ಅಷ್ಟರಲ್ಲಿ ಒಂದು ರಾಶಿ ಜನ ಸಮಂತಾಗಾಗಿ ಕಾದು ಕುಳಿತಿದ್ರು. ಸಮಂತಾ ಹೊರ ಬಂದಿದ್ದೇ ತಡ. ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಸ್ಯಾಮ್​ರನ್ ಸುತ್ತುವರೆದಿದ್ರು. ಇವರಿಂದ ಸಮಂತಾ ಅಲ್ಲಿಂದ ಪಾರಾಗುವಷ್ಟರಲ್ಲಿ ಹೈರಾಣಾಗಿದ್ರು. ಸಮಂತಾರಂತಹ ಸ್ಟಾರ್ ನಟಿ ಸಾರ್ವಜನಿಕವಾಗಿ ಬರ್ತಾರೆ ಅಂದ್ರೆ ಹೈ ಸೆಕ್ಯೂರಿಟಿ ಇರುತ್ತೆ. ಸುತ್ತ ಮುತ್ತ ಬೌನ್ಸರ್ಸ್ ಭದ್ರಕೋಟೆ ಇರುತ್ತೆ. ಆದ್ರೆ ಅದನ್ನೂ ದಾಟಿ ಸಮಂತಾರನ್ನ ಮುತ್ತಿಕೊಂಡಿದ್ರು. ಸ್ಯಾಮ್​ ಜೊತೆ ಒಂದು ಸೆಲ್ಫಿ ಕ್ಲಿಕಿಸಿಕೊಂಡ್ರೆ ಸಾಕು ಅಂತ ಮಾಡಬಾರದ ಕಸರತ್ತನ್ನೆಲ್ಲಾ ಮಾಡಿದ್ರು.

ತನಗೆ ಎಷ್ಟೇ ಕಷ್ಟ ಆದ್ರು ಸಮಂತಾ ನಗು ನಗುತ್ತಾ ಪರಿಸ್ಥಿತಿಯನ್ನ ಸಂಭಾಳಿ ಅಲ್ಲಿಂದ ಬಂದಿದ್ದಾರೆ. ವಾರದ ಹಿಂದಷ್ಟೇ ನಟಿ ನಿಧಿ ಅಗರ್ವಾಲ್​ ಇಂತದ್ದೇ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ರು. ನಿಧಿ ಜನರ ಮಧ್ಯೆ ಸಿಲುಕಿ ಚೆಟ್ನಿ ಆಗಿದ್ರು. ಸಾಕಪ್ಪಾ ಸಾಕು ಸಾರ್ವಜನಿಕರ ಮಧ್ಯೆ ಬರೋದೇ ಸಾಕು ಅಂತ ಕೈ ಮುಗಿದಿದ್ರು ನಿಧಿ. ಈಕೆ ಬಳಿ ಸೆಲ್ಫಿ ಪಡೆಯೋಕೆ ಮೈಕೈ ಮುಟ್ಟಿ ಎಳೆದಾಡಿದ್ರು ಫ್ಯಾನ್ಸ್​. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ರೆ, ಅಭಿಮಾನಿಗಳು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಯಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.

Related Video