
ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
ಒಂದು ರಾಜ್ಯ.. ಹಲವು ಜಗತ್ತು ಎನ್ನುವ ಹಿರಿಮೆಯನ್ನು ಕರ್ನಾಟಕ ಹೊಂದಿದೆ. ಕರ್ನಾಟಕದ ಒಂದೊಂದು ಜಿಲ್ಲೆ, ಒಂದೊಂದು ಪ್ರದೇಶವೂ ಒಂದು ಹೊಸ ಜಗತ್ತನ್ನೇ ದರ್ಶನ ಮಾಡಿಸುತ್ತದೆ. ಅದೇ ರೀತಿ, ಒಂದು ದೇಶವೇ ಒಂದು ಖಂಡ ಎನಿಸಿಕೊಳ್ಳುವಷ್ಟು ದೊಡ್ಡದಿದ್ದರೆ..
ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್ ಅವಾರ್ಡ್-2025: ಒಂದು ರಾಜ್ಯ.. ಹಲವು ಜಗತ್ತು ಎನ್ನುವ ಹಿರಿಮೆಯನ್ನು ಕರ್ನಾಟಕ ಹೊಂದಿದೆ. ಕರ್ನಾಟಕದ ಒಂದೊಂದು ಜಿಲ್ಲೆ, ಒಂದೊಂದು ಪ್ರದೇಶವೂ ಒಂದು ಹೊಸ ಜಗತ್ತನ್ನೇ ದರ್ಶನ ಮಾಡಿಸುತ್ತದೆ. ಅದೇ ರೀತಿ, ಒಂದು ದೇಶವೇ ಒಂದು ಖಂಡ ಎನಿಸಿಕೊಳ್ಳುವಷ್ಟು ದೊಡ್ಡದಿದ್ದರೆ.. ಅಷ್ಟೊಂದು ವೈವಿಧ್ಯತೆಯನ್ನು ಹೊಂದಿದ್ದರೆ..? ಅದನ್ನು ಆಸ್ಟ್ರೇಲಿಯಾ ಎನ್ನುತ್ತಾರೆ. ವಿಶ್ವದ 6ನೇ ಅತಿ ದೊಡ್ಡ ದೇಶವಾದ ಆಸ್ಟ್ರೇಲಿಯಾ, ಅತ್ಯಂತ ಬೃಹತ್ ವಿಸ್ತಾರ ಮತ್ತು ಯಾವ ಭೌಗೋಳಿಕ ಸಂಪರ್ಕದಲ್ಲೂ ಇಲ್ಲದ ಕಾರಣಕ್ಕೆ ಇದನ್ನೇ ಪ್ರತ್ಯೇಕ ಖಂಡ ಎಂದು ಕರೆಯಲಾಗಿದೆ. ಅತ್ಯಂತ ಸುಂದರ ಕಡಲ ಕಿನಾರೆಗಳು, ಕಾಂಗರೂ, ಕೋಲಾದಂತಹ ವನ್ಯಜೀವಿಗಳು, ಅತ್ಯುತ್ತಮ ಜೀವನ ಶೈಲಿ ಹಾಗೂ ಶಾಂತ ಪರಿಸರವನ್ನು ಹೊಂದಿರುವ ಈ ದೇಶ ಜಗತ್ತಿನ ನಾನಾ ದೇಶಗಳ ಜನರನ್ನು ಕೈಬೀಸಿ ಕರೆಯುತ್ತದೆ.
ಕ್ಯಾನ್‌ಬೆರಾ ಇದರ ರಾಜಧಾನಿ. ಆದರೆ, ಸಿಡ್ನಿ ಮತ್ತು ಮೆಲ್ಬೋರ್ನ್ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರಗಳು. 5 ರಾಜ್ಯಗಳು ಮತ್ತು 10 ಪ್ರಾಂತ್ಯಗಳನ್ನು ಹೊಂದಿರುವ ಆಸ್ಟ್ರೇಲಿಯಾ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟ ಹವಾಮಾನವನ್ನು ಹೊಂದಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ದೇಶ ಎನಿಸಿಕೊಳ್ಳುವ ಜತೆಗೆ ಅತ್ಯಂತ ಶಾಂತಿಪ್ರಿಯ ರಾಷ್ಟ್ರವೂ ಹೌದು. ಅತ್ಯಂತ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿರುವ ಆಸ್ಟ್ರೇಲಿಯಾ ಅಷ್ಟೇ ವೈವಿದ್ಯತೆಯಿಂದ ಕೂಡಿದ ಸಮಾಜವನ್ನೂ ಸಹ ಸೃಷ್ಟಿಸಿದೆ. ಅತಿ ಹೆಚ್ಚು ವಿದೇಶಿಯರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸರಿ ಸುಮಾರು 27 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶದಲ್ಲಿ ಸುಮಾರು ಶೇ.31ರಷ್ಟು ಜನರು ವಿದೇಶಿ ಮೂಲದವರೇ ಇದ್ದಾರೆ.
ಇಂತಹ ನೆಲದಲ್ಲಿ ಭಾರತೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ಕನ್ನಡಿಗರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ನೂರಾರು ಮಂದಿ ಪೌರತ್ವವನ್ನು ಪಡೆದುಕೊಂಡು ಆಸ್ಟ್ರೇಲಿಯಾದ ಪ್ರಜೆಗಳೇ ಆಗಿಬಿಟ್ಟಿದ್ದಾರೆ. ಆ ದೇಶವನ್ನೇ ತಮ್ಮ ಶಾಶ್ವತ ನೆಲೆ ಮಾಡಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ. ಅಷ್ಟೇ ಅಲ್ಲ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿನ ಪ್ರಜೆಗಳಾಗಿಯೂ ಶಾಶ್ವತ ನೆಲೆಯನ್ನು ಕಂಡುಕೊಂಡಿದ್ದಾರೆ. ಜಗತ್ತಿನ ಅನೇಕ ದೇಶಗಳ ವಿದ್ಯಾರ್ಥಿಗಳ ನೆಚ್ಚಿನ ವಿದ್ಯಾಭ್ಯಾಸದ ತಾಣವಾಗಿಯೂ ಆಸ್ಟ್ರೇಲಿಯಾ ಬೆಳೆದು ನಿಂತಿದೆ. ಇಲ್ಲಿ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿವೆ. ಭಾರತೀಯರು ಮತ್ತು ಕನ್ನಡಿಗ ವಿದ್ಯಾರ್ಥಿಗಳ ಸಂಖ್ಯೆಯೂ ಇಲ್ಲಿ ಗಣನೀಯವಾಗಿದೆ.