ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!

ಕರುನಾಡ ಯುದ್ಧಕಾಂಡ.. ಅಧಿನಾಯಕನ ಮಹಾಮೌನ ರಹಸ್ಯ..! ರಾಹುಲ್ ಗಾಂಧಿ ಅಖಾಡಕ್ಕೆ ಚೆಂಡೆಸೆದ್ದೇಕೆ ಗೊತ್ತಾ ಸಿದ್ದು..? ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿಕೆ ಪಟ್ಟ ಭವಿಷ್ಯ..! ಹುಕುಂ ಹಣಾಹಣಿ ರಾಗಾ ಹಿಂದಡಿ.. ಏನದು ಇಂದ್ರಪ್ರಸ್ಥ ಮಿಸ್ಟರಿ..?

Share this Video
  • FB
  • Linkdin
  • Whatsapp

ಕರುನಾಡ ಯುದ್ಧಕಾಂಡ.. ಅಧಿನಾಯಕನ ಮಹಾಮೌನ ರಹಸ್ಯ..! ರಾಹುಲ್ ಗಾಂಧಿ ಅಖಾಡಕ್ಕೆ ಚೆಂಡೆಸೆದ್ದೇಕೆ ಗೊತ್ತಾ ಸಿದ್ದು..? ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿಕೆ ಪಟ್ಟ ಭವಿಷ್ಯ..! ಹುಕುಂ ಹಣಾಹಣಿ ರಾಗಾ ಹಿಂದಡಿ.. ಏನದು ಇಂದ್ರಪ್ರಸ್ಥ ಮಿಸ್ಟರಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಹುಕಾಲ ರಹಸ್ಯ. ಅಗ್ನಿ ಪರೀಕ್ಷೆಯ ಅಡಗತ್ತರಿಯಲ್ಲಿ ‘ಕೈ’ ಅಧಿನಾಯಕ..! ಸಿದ್ದು ಸಿಂಹಾಸನ ರಕ್ಷಿಸುತ್ತಾ ರಾಗಾ ಶಕ್ತಿಯ ನಂಬಿಕೆ.? ಬೆಂಕಿ ಬಂಡೆಗೆ ರಗಡ್ ರಾಹುಲ್ ಮನಗೆಲ್ಲೋ ಅಗ್ನಿಪರೀಕ್ಷೆ.! ಪಟ್ಟದ ಕನಸು ಬೆನ್ನಟ್ಟಿ ಹೊರಟ ಕನಕಾಧಿಪತಿ..! ಬಂಡೆಗೆ ಕೃಪೆ ತೋರುತ್ತಾರಾ ಕಾಂಗ್ರೆಸ್ ಯುವರಾಜ..? ಟಗರು ಮಹಾಬಲಕ್ಕೆ ಮನಸೋತಿರೋದ್ಯಾಕೆ ರಾಹುಲ್ ಗಾಂಧಿ..?

ಇದು ಕರ್ನಾಟಕ ಕುರ್ಚಿ ಕಾಳಗದಲ್ಲಿ ‘ಕೈ’ ಯುವರಾಜನ ಮಹಾಮೌನದ ರಹಸ್ಯ. ಹಾಗಿದ್ರೆ ಟಗರು ಕೊಡ್ತಿರೋ ಆ ಸಂದೇಶ ಏನು..? ಸಿಂಹಾಸನ ಸಮರಕ್ಕೆ ಆ ಸಂದೇಶ ಕೊಡ್ತಿರೋ ಟ್ವಿಸ್ಟ್ ಎಂಥದ್ದು. ಪಟ್ಟ ಯುದ್ಧದಲ್ಲಿ ತಮ್ಮ ಪಟ್ಟನ್ನ ಮತ್ತಷ್ಟು ಬಿಗಿಗೊಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಅದೊಂದು ಕಾರ್ಯಕ್ರಮದ ಉದ್ಘಾಟನೆ ಬಗ್ಗೆ ಮಾತನಾಡೋ ಮೂಲಕ ಈಗಲೂ ನಾನೆ ಸಿಎಂ.. ಮುಂದೆಯೂ ನಾನೇ ಸಿಎಂ ಅನ್ನೋ ಸಂದೇಶವನ್ನ ಮತ್ತೊಮ್ಮೆ ರವಾನಿಸಿದ್ದಾರೆ. ಸಿಂಹಾಸನ ಸಮರ ವಿಕೋಪಕ್ಕೆ ಹೋಗ್ತಿರೋ ಈ ಸಂದರ್ಭದಲ್ಲಿ ಸಿದ್ದು ಹಾಗೂ ಡಿಕೆ ಇಬ್ಬರೂ ತಮ್ಮದೇ ರೀತಿಯಲ್ಲಿ ಕದನಕ್ಕೆ ಸಜ್ಜಾಗ್ತಾಯಿದ್ದಾರೆ. ದಿನಗಳು ಉರುಳುತ್ತಿವೆ.

ಪಟ್ಟದ ಕಾದಾಟ ವಿಕೋಪಕ್ಕೆ ಹೋಗ್ತಿದೆ.. ಬಿಹಾರ ಚುನಾವಣೆ ಬೆನ್ನಲ್ಲೆ ಇದು ಮತ್ತೊಂದು ಹಂತಕ್ಕೆ ಹೋದ್ರು ಅಚ್ಚರಿಯಿಲ್ಲ.. ಹೀಗಾಗಿ ವರುಣಾಧಿಪತಿ ಹಾಗೂ ಕನಕಾಧಿಪತಿ ಮಧ್ಯೆಯ ಸಮರಾಭ್ಯಾಸವೂ ಜೋರಾಗಿದೆ. ಯೆಸ್, ರಾಹುಲ್ ಗಾಂಧಿ ಅಹಿಂದ, ಒಬಿಸಿ ಅಸ್ತ್ರವನ್ನ ರಾಷ್ಟ್ರಾದ್ಯಂತ ಝಳಪಿಸೊ ಲೆಕ್ಕಾಚಾರದಲ್ಲಿದ್ದಾರೆ. ಅದ್ರಲ್ಲಿಯೂ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರೋ ಮೂರು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ಒಬಿಸಿ ಸಮುದಾಯಕ್ಕೆ ಸೇರಿರೋರು. ಹೀಗಾಗಿ ಅವರನ್ನ ಕೆಳಗಿಳಿಸಿ ಡಿಕೆಗೆ ಪಟ್ಟ ಕಟ್ಟಿದ್ರೆ, ರಾಹುಲ್ ಗಾಂಧಿಯವರ ನಡೆಯೇ ಬೇರೆ, ನುಡಿಯೇ ಬೇರೆ ಅನ್ನೋ ರಾಂಗ್ ಮೆಸೇಜ್ ಪಾಸ್ ಆಗುತ್ತೆ. ಆದ್ರೆ ಇಷ್ಟೆಲ್ಲಾ ಆಗ್ತಾಯಿದ್ರು ಛಲಬಿಡದೇ ತಮ್ಮ ಪ್ರಯತ್ನವನ್ನ ಮುಂದುವರೆಸಿದ್ದಾರೆ ಡಿ.ಕೆ.ಶಿವಕುಮಾರ್.

Related Video