ಸಚಿವ ಪ್ರಿಯಾಂಕ್ ಖರ್ಗೆಯೇ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ:ಮಣಿಕಂಠ ರಾಠೋಡ್ ಆರೋಪ

ನನ್ನ ಕೊಲೆ ಮಾಡಿಸುವ ಉದ್ದೇಶದಿಂದ ದಾಳಿ ಮಾಡಿಸಿದ್ದಾರೆ. ಇದಕ್ಕೆಲ್ಲಾ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಕಾರಣ ಎಂದು ಮಣಿಕಂಠ ರಾಠೋಡ್ ಆರೋಪ ಮಾಡಿದ್ದಾರೆ
 

First Published Nov 19, 2023, 1:07 PM IST | Last Updated Nov 19, 2023, 1:07 PM IST

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ನಡೆದಿದ್ದು, ಚಿಕಿತ್ಸೆ ನಂತರ ಅವರು ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಗಾಯಾಳು ಮಣಿಕಂಠ ರಾಠೋಡ್ ಮಾತನಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಾಗಿಯೇ ನನ್ನ ಮೇಲೆ ದಾಳಿ ನಡೆದಿದೆ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣವಾಗಿದ್ದಾರೆ. ಇತ್ತೀಚೆಗೆ ನಾನು ಅವರ ವಿರುದ್ದ ಬೆಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ನನ್ನ ಕೊಲೆ ಮಾಡಿಸುವ ಉದ್ದೇಶದಿಂದ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ. ನನಗೆ ಜೀವ ಬೆದರಿಕೆ ಇದ್ರೂ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನನ್ನ ಗನ್ ಮ್ಯಾನ್ ಸೌಲಭ್ಯ ಕಿತ್ತುಕೊಂಡಿದೆ. ನಾನು ನನ್ನ ಫಾರ್ಮಹೌಸ್‌ನಿಂದ ಕಲಬುರಗಿಗೆ ಬರುವಾಗ ವಾಹನ ಅಡ್ಡಗಟ್ಟಿ ಬೈಕ್ ಮೇಲೆ ಬಂದ ದುರ್ಷ್ಕಮಿಗಳು ಏಕಾ ಏಕಿ ದಾಳಿ ಮಾಡಿದ್ದಾರೆ. ನ್ನ ಕಾರ್ ಮೇಲೆ ಕಲ್ಲು ತೂರಿದ್ದಾರೆ.ರಾಡ್ ನಿಂದ ಕಾರ್ ವಿಂಡೋ ಒಡೆದಿದ್ದಾರೆ. ನಂತರ ನನ್ನ ಮೇಲೆ ಬಾಟಲ್‌ಗಳಿಂದ ಮಾಡಿದ್ದಾರೆ. ನಾನು ಕೈ ಅಡ್ಡ ತಂದ ಪರಿಣಾಮ ತೀವ್ರ ಗಾಯವಾಗಿದೆ. ಕಿವಿ ಹಾಗೂ ತಲೆಗೂ ಬಾಟಲ್ ಚುಚ್ಚಿದ ಪರಿಣಾಮ ಗಾಯಗಳಾಗಿವೆ ಎಂದು ಮಣಿಕಂಠ ರಾಠೋಡ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ತಾಯಿ ಮನೆ ಸೇರಬೇಕಾದವಳು ಸಾವಿನ ಮನೆ ಸೇರಿದಳು..ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, 9 ತಿಂಗಳ ಮಗು ಸಾವು

Video Top Stories