ನಿಜವಾಗುತ್ತಾ ಕೋಡಿಶ್ರೀಗಳ ಭವಿಷ್ಯವಾಣಿ..? ಭೂಪಟದಿಂದ ಅಳಿಸಿ ಹೋಗುವ ದೇಶ ಯಾವುದು..?

ಭೂಪಟದಿಂದ ಡಿಲೀಟ್ ಆಗುತ್ತಾ ಯುದ್ಧಕ್ಕೆ ನರಳಿದ ದೇಶಗಳು..?
ಯಾವ ದೇಶ ನಿರ್ನಾಮವಾಗುತ್ತೆ..? ಉಕ್ರೇನ್..? ಪ್ಯಾಲೆಸ್ತೀನ್..?
ಯುದ್ಧದಲ್ಲಿ ಬಲಿಷ್ಠ ಇಸ್ರೇಲ್‌ಗೆ ಬಲಿಯಾಗುತ್ತಾ ಪ್ಯಾಲೆಸ್ತೀನ್..?

Share this Video
  • FB
  • Linkdin
  • Whatsapp

ಈ ಹಿಂದೆ ಕೋಡಿಶ್ರೀಗಳು ಭವಿಷ್ಯವಾಣಿಯೊಂದನ್ನು ನುಡಿದಿದ್ದರು. ಜಗತ್ತಿನ ಭೂಪಟದಲ್ಲಿರುವ ಒಂದು ದೇಶ ಸರ್ವನಾಶವಾಗುತ್ತೆ ಎಂಬ ಭವಿಷ್ಯವನ್ನು ಹೇಳಿದ್ದರು. ಈಗ ಆ ಭವಿಷ್ಯ ನಿಜವಾಗುತ್ತಾ ಎಂದೆನಿಸುತ್ತಿದೆ. ಕೋಡಿಶ್ರೀಗಳು(Kodi Shree) ಭವಿಷ್ಯ ನುಡಿದ್ರೆ ಅದಕ್ಕೊಂದು ಗಾಂಭಿರ್ಯವಿರುತ್ತೆ. ತೂಕವಿರುತ್ತೆ. ಯಾಕೆಂದ್ರೆ ಈ ಹಿಂದೆ ಅವರು ನುಡಿದ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಕೋಡಿಶ್ರೀಗಳು ಯಾವುದೇ ವ್ಯಕ್ತಿ ಕುರಿತು, ಯಾವುದೇ ಪಕ್ಷದ ಕುರಿತು ಭವಿಷ್ಯ ನುಡಿಯೋದಿಲ್ಲ. ಕೋಡಿ ಶ್ರೀಗಳು, ಮಳೆ-ಬೆಳೆ, ಆರೋಗ್ಯ, ಶಾಂತಿ ಸೇರಿದಂತೆ ಜಗತ್ತಿನಲ್ಲಿ ಸಂಭವಿಸಬಹುದಾಗ ಪ್ರಕೃತಿ ವಿಕೋಪ ಮತ್ತು ಯುದ್ಧ ಸಂದರ್ಭಗಳ ಕುರಿತು ಭವಿಷ್ಯ ನುಡಿಯುತ್ತಾರೆ. ಈ ಹಿಂದೆ ಅವರು ನುಡಿದ ಹಲವಾರು ನಿಜವಾಗಿವೆ. ಈಗ ಕೋಡಿ ಶ್ರೀಗಳು ಕಳೆದ ಕೆಲ ದಿನಗಳ ಹಿಂದೆ ನುಡಿದಿದ್ದ ಭವಿಷ್ಯವೊಂದು ನಿಜವಾಗಬಹುದಾದ ಮುನ್ಸೂಚನೆ ಸಿಕ್ಕಿದೆ. ಕಳೆದ ಕೆಲದ ದಿನಗಳ ಹಿಂದೆ ಕೋಡ್ರೀ ಶ್ರೀಗಳು ಜಗತ್ತಿನಲ್ಲಿರುವ ದೇಶವೊಂದು(Nation) ನಾಶವಾಗಲಿದೆ ಅನ್ನೋ ಅರ್ಥದಲ್ಲಿ ಭವಿಷ್ಯ ನುಡಿದಿದ್ದರು. ಜಗತ್ತಿನ ಭೂಪಟದಲ್ಲಿ ಒಂದು ದೇಶ ನಾಶವಾಗಲಿದೆ. ಇನ್ನಿಲ್ಲದಂತೆ ಅಳಿಸಿ ಹೋಗಲಿದೆ ಎಂಬ ಭವಿಷ್ಯವಾಣಿಯನ್ನು ಕೋಡಿಶ್ರೀಗಳು ನುಡಿದಿದ್ದರು. ಈಗ ಆ ಭವಿಷ್ಯ ನಿಜವಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಕೋಡಿ ಶ್ರೀಗಳ ಭವಿಷ್ಯವಾಣಿಯಂತೆ ಭೂಪಟದಿಂದ ಮಾಯವಾಗುವ ದೇಶ ಯಾವುದು? ಸದ್ಯಕ್ಕೆ ಈ ಪಟ್ಟಿಯಲ್ಲಿ ಮೂರು ದೇಶಗಳಿವೆ. ಈ ದೇಶಗಳಲ್ಲಿ ಯಾವ ಒಂದು ದೇಶ ಅಳಿಸಿ ಹೋಗುವುದು ಅನ್ನೋ ಪ್ರಶ್ನೆ ಸದ್ಯಕ್ಕೆ ಕಾಡುತ್ತಿದೆ. ಆ ಮೂರು ದೇಶಗಳು ಯಾವೆಂದು ನೋಡೋದಾದ್ರೆ, ಉಕ್ರೇನ್(Ukraine), ಇಸ್ರೇಲ್(Israel) ಮತ್ತು ಫ್ಯಾಲೆಸ್ತೀನ್(Palestine). ಇಷ್ಟು ದೇಶಗಳಲ್ಲಿ ಯಾವ ದೇಶ ಭೂಪಟದಿಂದ ಮಾಯವಾಗಲಿದೆ ಅನ್ನೋದು ಗೊತ್ತಿಲ್ಲ. ಯಾಕೆಂದ್ರೆ ಸದ್ಯಕ್ಕೆ ಈ ಮೂರು ದೇಶಗಳು ದೊಡ್ಡ ಸಂಕಷ್ಟದಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Today Horoscope: ಇಂದು ಘಾತ ಚತುರ್ದಶಿ ಇದ್ದು, ಅಸಹಜವಾಗಿ ಸಾವಿಗೀಡಾದವರಿಗೆ ಗೌರವ ಸೂಚಿಸಿ

Related Video