ಎಂಬಿಬಿಎಸ್ ವಿದ್ಯಾರ್ಥಿಗಳ ಇನ್‌ಸ್ಟಾಗ್ರಾಮ್ ಹುಚ್ಚಾಟ: ಕಿಮ್ಸ್ ಆಸ್ಪತ್ರೆ ನರ್ಸ್‌ಗಳ ಬಗ್ಗೆ ರೀಲ್ಸ್‌

ಹುಬ್ಬಳ್ಳಿ ಕಿಮ್ಸ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್‌ಗಳನ್ನು ಗುರಿಯಾಗಿಸಿಕೊಂಡು ಇನ್ಸ್ಟಾಗ್ರಾಮ್ ರೀಲ್ಸ್‌ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು(MBBS students) ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಹುಚ್ಚಾಟ ಮೆರೆದಿದ್ದಾರೆ. ಕಿಮ್ಸ್ ಆಸ್ಪತ್ರೆಯ ನರ್ಸ್‌ಗಳನ್ನು ಗುರಿಯಾಗಿಟ್ಟುಕೊಂಡು ವೈದ್ಯಕೀಯ ವಿದ್ಯಾರ್ಥಿಗಳು ಇನ್ಸ್ಟಾ ರಿಲ್ಸ್ ಮಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಚಿತ್ರದ ನಂಬೇಡ ನಂಬೇಡ ಹುಡುಗಿಯರನ್ನು ನಂಬೇಡ ಅನ್ನೋ ಹಾಡಿಗೆ ವಿದ್ಯಾರ್ಥಿಗಳು ನೃತ್ಯ(dance) ಮಾಡಿದ್ದಾರೆ. ಹಾಡಿನಲ್ಲಿ ಬರುವ ನಂಬೇಡ ನಂಬೇಡ ನರ್ಸ್‌ಗಳನ್ನು ನಂಬೇಡ ಹಂತ ವಿದ್ಯಾರ್ಥಿಗಳು ಕುಣಿದಿದ್ದಾರೆ. ಮಹೇಶ್ ರೆಡ್ಡಿ ಎನ್ನುವ ವಿದ್ಯಾರ್ಥಿ ಅಕೌಂಟ್‌ನಿಂದ ವಿಡಿಯೋ(Video) ಪೋಸ್ಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆದ ಹಿನ್ನೆಲೆ ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಕಿಮ್ಸ್ ಆಸ್ಪತ್ರೆ ನರ್ಸ್‌ಗಳು ಕೆಂಡಾಮಂಡಲರಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ವರ್ತನೆಯಿಂದ ಬೇಸತ್ತು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘದಿಂದ ಪತ್ರ ಬರೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

Related Video