ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

ಬ್ಯಾಕಾಂಕ್ ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರಲೇ ಇಲ್ಲ!
ಬ್ಯಾಂಕಾಕ್‌ನಲ್ಲಿ ಏನಾಯ್ತು..? ಹೇಗಿತ್ತು ಆ ಸಂದರ್ಭ..? 
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ..!

Bindushree N  | Published: Aug 8, 2023, 2:47 PM IST

ಅದು ಚಿನ್ನದಂಥಾ ಜೋಡಿ.. ಅವರದು ಮುತ್ತಿನಂಥಾ ಕುಟುಂಬ.. ಕನ್ನಡ ಜನ ಅವರನ್ನ ತಮ್ಮ ಕುಟುಂಬದವರು ಅಂತಲೇ ಅವರನ್ನ ನೋಡ್ತಾ ಇತ್ತು. ಅದೇ ಕಾರಣಕ್ಕೇ, ಇವತ್ತು ಕರುನಾಡಡು ಸೂತಕದ ಮನೆಯಾಗಿರೋದು. ಪ್ರವಾಸಕ್ಕೆ ಅಂತ ಬ್ಯಾಕಾಂಕ್‌ಗೆ(Bangkok) ಹೋಗಿದ್ದವರು, ಮರಳಿ ಬರಲೇ ಇಲ್ಲ.. ಬಂದದ್ದು ಭರಸಿಡಿಲಿನಂಥಾ ಶಾಕಿಂಗ್ ನ್ಯೂಸ್ ಮಾತ್ರ. ಸೋಮವಾರ ಬೆಳಗ್ಗೆಯೇ ಕರ್ನಾಟಕಕ್ಕೆ ಕೆಟ್ಟಸುದ್ದಿಯೊಂದು ಕೇಳಿಸಿತ್ತು. ನಟ ವಿಜಯ ರಾಘವೇಂದ್ರ(Vijay raghavendra) ಅವರ ಪತ್ನಿ, ಸ್ಪಂದನಾ(spandana) ಅವರು ನಿಧನರಾಗಿದ್ದಾರೆ ಅನ್ನೋ ಆಘಾತಕಾರಿ ಸಂಗತಿ, ರಾಜ್ಯಕ್ಕೆ ಶೋಕವುಂಟು ಮಾಡಿತ್ತು. ಮುದ್ದಾದ ಜೋಡಿನಾ ನೋಡಿ ದೃಷ್ಟಿ ತೆಗೆದಿದ್ದ ಜನರೆಲ್ಲಾ, ಈ ಸುದ್ದಿ ಕೇಳ್ತಿದ್ದ ಹಾಗೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ರು. ವಿಜಯ ರಾಘವೇಂದ್ರ ಅವರು, ತಮ್ಮ ಪತ್ನಿನಾ ಅದೆಷ್ಟು ಹಚ್ಚಿಕೊಂಡಿದ್ರು, ಪ್ರೀತಿಸ್ತಾ ಇದ್ರು ಅಂದ್ರೆ, ಒಂದೇ ಜೀವ ಎರಡು ದೇಹ ಅಂತಾರಲ್ಲಾ, ಆ ಮಾತಿಗೆ  ಸಾಕ್ಷಿಭೂತವಾಗಿದ್ರು. ಈಗ ಸ್ಪಂದನ ಅವರ ಅಗಲಿಕೆ, ರಾಜ್ಯಕ್ಕೇ ಆಘಾತ ನೀಡಿದೆ. ಇನ್ನು ವಿಜಯ್ ರಾಘವೇಂದ್ರ ಅವರ ಬಗ್ಗೆ ನಮಗೆ ಯೋಚಿಸೋದಕ್ಕಾದ್ರೂ ಸಾಧ್ಯವಾಗುತ್ತಾ. ಖಂಡಿತಾ ಇಲ್ಲ. ವಿಜಯ ರಾಘವೇಂದ್ರ ಅವರನ್ನ ಕರ್ನಾಟಕದ ಜನ ಕರೆಯೋದೇ ಚಿನ್ನಾರಿ ಮುತ್ತಾ ಅಂತ. ಕನ್ನಡಿಗರು ವಿಜಯ್ ರಾಘವೇಂದ್ರ ಅವರನ್ನ ಸಿನಿಮಾಗಳಲ್ಲಿ ಹೀರೋ ಆಗಿ ನೋಡೋ ಮುಂಚೆ, ಬಾಲನಟನಾಗಿ ಅಭಿನಯಿಸಿದ್ದನ್ನ ಮೆಚ್ಚಿಕೊಂಡಿದ್ರು. ಹಾಗಾಗಿನೇ, ಕರ್ನಾಟಕದ ಮನೆ ಮಗ ಅನ್ನೋ ಹಾಗೆ ವಿಜಯ ರಾಘವೇಂದ್ರ ಗುರ್ತಿಸಿಕೊಂಡಿದ್ರು. ಹಿರಿಯ ನಟರಾದ ಮೇಲೂ ಖ್ಯಾತಿ ಉಳಿಸಿಕೊಂಡ ಆರ್ಟಿಸ್ಟ್‌ಗಳ ಲಿಸ್ಟ್ ರೆಡಿ ಮಾಡಿದ್ರೆ, ಅಲ್ಲಿ ಸಿಗೋ ಕೆಲವೇ ಕೆಲವು ಹೆಸರುಗಳಲ್ಲಿ, ವಿಜಯ ರಾಘವೇಂದ್ರ ಅವರ ಹೆಸರೂ ಇರುತ್ತೆ.

ಇದನ್ನೂ ವೀಕ್ಷಿಸಿ:  ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

Read More...