ಎಮಿನೆಂಟ್‌ ಇಂಜಿನಿಯರ್‌ ಅವಾರ್ಡ್‌ ಕಾರ್ಯಕ್ರಮ: ಸಾಧನೆಗೈದ 25 ಇಂಜಿನಿಯರ್‌ಗಳಿಗೆ ಗೌರವ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ವತಿಯಿಂದ ಇಂಜಿನಿಯರ್‌ಗಳಿಗೆ ಎಮಿನೆಂಟ್‌ ಇಂಜಿನಿಯರ್‌ ಅವಾರ್ಡ್‌ ನೀಡಲಾಯಿತು. 
 

Share this Video
  • FB
  • Linkdin
  • Whatsapp

ಇಂಜಿನಿಯರ್‌ಗಳು ಆಧುನಿಕ ಸಮಾಜದ ಬೆನ್ನೆಲುಬಾಗಿದ್ದಾರೆ. ಹಾಗಾಗಿ ಅವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet Suvarna News) ಮತ್ತು ಕನ್ನಡಪ್ರಭ(Kannada Prabha) ಮಾಡುತ್ತಿದೆ. ಎಮಿನೆಂಟ್‌ ಇಂಜಿನಿಯರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ(Ravi Hegde) ಮಾತನಾಡಿದರು. ಯಾವುದೇ ಸರ್ಕಾರ, ಕಂಪನಿ, ಉದ್ಯಮದ ಯಶಸ್ಸು ಸಾಧಿಸಿದಾಗ ಕಣ್ಣ ಮುಂದೆ ಕಾಣಿಸುವವರು ಸರ್ಕಾರದ ಮುಖ್ಯಸ್ಥರು, ಕಂಪನಿ ಸಿಇಒಗಳು, ಮಾಲೀಕರು ಮಾತ್ರ. ಆದರೆ ಆ ಯಶಸ್ಸಿನ ಹಿಂದೆ ಇರುವವರು ಇಂಜಿನಿಯರ್‌ಗಳು. ಅಂತಹ ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಎಮಿನೆಂಟ್ ಇಂಜಿನಿಯರ್‌ ಕಾರ್ಯಕ್ರಮವನ್ನು ಕನ್ನಡ ಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಮಾಡುತ್ತಿದೆ ಎಂದು ಅವರು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಮೀಟಿಂಗ್, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ವಾರ್ನಿಂಗ್!

Related Video