ನಡು ರಸ್ತೆಯಲ್ಲೇ ಕರುವಿಗೆ ಹಾಲುಣಿಸಿದ ಗೋವು : ವಾಹನಗಳ ಹಾರ್ನ್‌ಗೆ ಜಗ್ಗದೆ ಮಾತೃಹೃದಯಕ್ಕೆ ಸಾಕ್ಷಿಯಾದ ಆಕಳು !

ವಿಜಯಪುರ ನಗರದ ಮನಗೂಳಿ ರಸ್ತೆಯ ಮರಾಠಿ ವಿದ್ಯಾಲಯದ ಬಳಿ ಗೋವು ನಡು ರಸ್ತೆಯಲ್ಲಿ ನಿಂತು ತನ್ನ ಕರುವಿಗೆ ಹಾಲುಣಿಸಿದೆ. 

First Published May 22, 2023, 12:27 PM IST | Last Updated May 22, 2023, 12:27 PM IST

ವಿಜಯಪುರ: ನಡುರಸ್ತೆಯಲ್ಲಿಯೇ ವಾಹನಗಳನ್ನು ಲೆಕ್ಕಿಸದೇ ಗೋವೊಂದು ತನ್ನ‌ ಕರುವಿಗೆ ಹಾಲು‌ ಕುಡಿಸಿದ ಅಪರೂಪದ ದೃಶ್ಯವೊಂದು ಎಲ್ಲೆಡೆ ವೈರಲ್ ಆಗಿದೆ. ವಿಜಯಪುರ ನಗರದ ಮನಗೂಳಿ ರಸ್ತೆಯ ಮರಾಠಿ ವಿದ್ಯಾಲಯದ ಬಳಿ ಗೋವು ನಡು ರಸ್ತೆಯಲ್ಲಿ ನಿಂತು ತನ್ನ ಕರುವಿಗೆ ಹಾಲುಣಿಸಿದೆ. ಅಕ್ಕ ಪಕ್ಕದಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದರು ಲೆಕ್ಕಿಸದೆ ತಾಯಿ ಪ್ರೇಮ ಮರೆದಿದೆ. 15ನಿಮಿಷಗಳ ಕಾಲ ಕರು ಹಾಲು ಕುಡಿಯುತ್ತಿದ್ದರು, ಆಕಳು ಕದಲದೆ ರಸ್ತೆಯಲ್ಲಿ ನಿಂತಿದ್ದು ವಿಶೇಷವಾಗಿತ್ತು. ಗೋವಿನ ತಾಯಿ ಪ್ರೀತಿಯನ್ನ ಸೆರೆ ಹಿಡಿದ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ‌. ವಾಹನಗಳು ಹಸುವಿನ ಅಕ್ಕಪಕ್ಕವೇ ಹೋದರೂ ಸಹ ಅದರ ಬಗ್ಗೆ ಯಾವುದೇ ಭಯವಿಲ್ಲದೇ ತನ್ನ ಕರುವಿಗೆ ಹಾಲು‌ಕುಡಿಸುವುದನ್ನು ಅರ್ಧಕ್ಕೆ ನಿಲ್ಲಿಸಿಲ್ಲ. ವಾಹನಗಳ ಹಾರ್ನ್ ಹೊಡೆದರು ಸರಿಯದೇ ಅಲ್ಲಿಯೇ ನಿಂತು ತನ್ನ ಮಾತೃಹೃದಯವನ್ನು ಪ್ರದರ್ಶಿಸಿತು.

ಇದನ್ನೂ ವೀಕ್ಷಿಸಿ: ಜಿ7 ಶೃಂಗಸಭೆಯಲ್ಲಿ ಪಾಕ್-ಚೀನಾಗೆ ಮೋದಿ ಖಡಕ್ ವಾರ್ನಿಂಗ್: ಉಕ್ರೇನ್ನೊಂದಿಗೆ ಮಾತುಕತೆ.. ಬೇಸರಗೊಂಡಿದೆಯಾ ರಷ್ಯಾ..?

Video Top Stories