Asianet Suvarna News Asianet Suvarna News

ಜಿ7 ಶೃಂಗಸಭೆಯಲ್ಲಿ ಪಾಕ್-ಚೀನಾಗೆ ಮೋದಿ ಖಡಕ್ ವಾರ್ನಿಂಗ್: ಉಕ್ರೇನ್ನೊಂದಿಗೆ ಮಾತುಕತೆ.. ಬೇಸರಗೊಂಡಿದೆಯಾ ರಷ್ಯಾ..?

ಜಪಾನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಒಂದು ಮಹತ್ವದ ಬೆಳವಣೆಗೆ ಆಗಿದೆ. ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷನ್ ಝೆಲೆನ್ಸ್ಕಿವೊಟ್ಟಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸದ್ಯ ಜಪಾನ್ನಲ್ಲಿದ್ದಾರೆ. ಜಪಾನ್‌ನ ಹಿರೋಷಿಮಾದಲ್ಲಿ ಜಿ-7 ಶೃಂಗಸಭೆ ನಡೆಯುತ್ತಿದೆ. ಈ ಸಭೆಗೆಂದು ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ತೆರಳಿದ್ದಾರೆ. ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಸವಾಲುಗಳ ಕುರಿತು ಮಾತನಾಡಿದ್ದಾರೆ. ಪಾಕ್-ಚೀನಾ ದೇಶಗಳ ಕೆಟ್ಟ ಮನಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆನೇ ರಷ್ಯಾದೊಂದಿಗೆ ಯುದ್ಧದಲ್ಲಿ ತೊಡಗಿರುವ ಉಕ್ರೇನ್ನೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಈ ಎಲ್ಲ ಪ್ರಮುಖಾಂಶಗಳ ಕುರಿತು ಮಾತನಾಡಿದ್ದಾರೆ. ಅವರ ಈ ಮಾತುಗಳು ಜಿ7 ದೇಶಗಳಿಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿವೆ ಎಂದು ಹೇಳಲಾಗುತ್ತಿದೆ. ಹಾಗೆನೇ ಇಲ್ಲಿ ಇನ್ನೊಂದು ಪ್ರಮುಖಾಂಶವೇನೆಂದ್ರೆ, ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆ ವೇಳೆ ಉಕ್ರೇನ್ ದೇಶದೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ಮೋದಿ ನಡೆಸಿದರು.

ಇದನ್ನೂ ವೀಕ್ಷಿಸಿ: ಲೋಕಾರ್ಪಣೆಯಾಗಲಿದೆ ಮೋದಿ ಕಟ್ಟಿಸಿದ ಸೆಂಟ್ರಲ್ ವಿಸ್ತಾ: ಹಳೆ ಸಂಸತ್ತಿಗೂ.. ಹೊಸ ವಿಸ್ತಾಗೂ.. ಏನೇನು ವ್ಯತ್ಯಾಸ..?

Video Top Stories