Asianet Suvarna News Asianet Suvarna News

ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

ಮೂಕ ಪ್ರೇಮ ಹಕ್ಕಿಗಳ ನೆರವಿಗೆ ನಿಂತ ಸುವರ್ಣನ್ಯೂಸ್..!
ಮೂರು ವರುಷಗಳ ಹಿಂದೆ ಮದುವೆಯಾಗಿದ್ದ ಜೋಡಿ..!
ಮೂಕ ಪಕ್ಷಿಗಳ ಪ್ರೇಮ ಕಥೆಗೆ ಕೊನೆಗೂ ಸಿಕ್ಕ ಸುಖಾಂತ್ಯ..!

ಇದು ಹಿಂದೆಂದೂ ಕಂಡು ಕೇಳರಿಯದ ಅಪರೂಪದ ಪ್ರೇಮ ಕಥೆ. ಇಲ್ಲಿ ಕಥಾ ನಾಯಕನೂ ಇದ್ದಾನೆ.. ನಾಯಕಿಯೂ ಇದ್ದಾಳೆ. ಆದರೆ ಇವರಿಬ್ಬರ ಪ್ರೇಮ ಕಥೆಗೆ ಸಂಭಾಷಣೆಯೇ ಇಲ್ಲ. ಇದು ಕೇವಲ ಮೌನಪ್ರೇಮ ಕಥೆ ಅಷ್ಟೆ. ಇದೇ ಕಥೆಯಲ್ಲಿ ಒಂದು ಇಂಟ್ರಸ್ಟಿಂಗ್ ಆ್ಯಂಗಲ್ ಇದೆ. ನಿಷ್ಕಲ್ಮಶವಾಗಿ ಪ್ರೀತಿಸಿದ ತಪ್ಪಿಗೆ, ಸಿಕ್ಕ ಉಡುಗೊರೆ ಏನು ಅಂತ ನೀವೆ ನೋಡಿ. ಪ್ರೀತಿಸಿದ ತಪ್ಪಿಗೆ ಈ ಪ್ರೇಮಿಗಳಿಗೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಊರಿಂದ ಬಹಿಷ್ಕಾರ. ಕೈ-ಕೈ ಹಿಡಿದು, ಬೀದಿ ಬೀದಿಗಳಲ್ಲಿ ಓಡಾಡಿ ಕೊನೆಗೆ ಕೈ ಕೊಡೋ ಪ್ರೇಮಿಗಳನ್ನ ನೋಡಿಯೇ ಉಪ್ಪಿ ಅಂದು ಒಂದು ಡೈಲಾಗ್ ಹೇಳಿದ್ರು. ಇಂದಿಗೂ ಈ ಡೈಲಾಗ್ ಮೋಸ ಮಾಡೋ ಪ್ರೇಮಿಗಳಿಗೆ ಅನ್ವಯಿಸುತ್ತೆ. ಆದರೆ ಕೆಲ ಪ್ರೇಮಿಗಳು ಈ ಮಾತಿಗೆ ತಧ್ವಿರುದ್ಧವಾಗಿರ್ತಾರೆ. ಕೆಲವರಿಗೆ ಪ್ರೀತಿ-ಪ್ರೇಮವೇ ಸರ್ವಸ್ವ, ಅದೇ ಜೀವನ ಆಗಿರುತ್ತೆ. ಈ ಜೋಡಿಗೂ ತಮ್ಮ ಪ್ರೀತಿಯೇ ಎಲ್ಲವೂ ಆಗಿತ್ತು. ಅದೇ ಕಾರಣಕ್ಕೆ ಅವರು ಲೋಕದ ಚಿಂತೆಯನ್ನೂ ಮಾಡದೇ ಒಬ್ಬರಿಗೊಬ್ಬರು ಜೀವನ ಸಂಗಾತಿ ಆಗೋದಕ್ಕೆ ನಿರ್ಧಾರ ಮಾಡಿದ್ದರು. ಮದುವೆಯೂ ಆದರೂ ಆದರೆ ಸಿಕ್ಕಿದ್ದು ಗ್ರಾಮಸ್ಥರ ಬಹಿಷ್ಕಾರದ ಸ್ಪೆಷಲ್ ಗಿಫ್ಟ್. ಗ್ರಾಮದ ಜನರು ಮಧ್ಯದಲ್ಲಿ ಕುಳ್ಳರಸಿ ಹೇಗೆ ಇವರಿಬ್ಬರನ್ನ ತರಾಟೆಗೆ ತೆಗೆದುಕೊಂಡಿದ್ದರು. ಇವರೆಲ್ಲರೂ ಇಷ್ಟು ಕೂಗಾಡ್ತಿದ್ರೂ.. ಒದರಾಡ್ತಿದ್ರೂ.. ಇವರಿಬ್ಬರು ಮಾತ್ರ, ಲೋಕವೇ ತಲೆ ಮೇಲೆ ಕಳಚಿ ಬಿದ್ದ ಹಾಗೆ ಕುಳಿತಿದ್ದರು. ಇವರಿಬ್ಬರ ಮೌನವೇ, ಇವರ ಅಸಹಾಯಕತೆಯನ್ನ ಒತ್ತಿ-ಒತ್ತಿ ಹೇಳುತ್ತಿತ್ತು. 

ಇದನ್ನೂ ವೀಕ್ಷಿಸಿ:  "ಡಿಸಿಎಂ ಬೇಡ.. ನಮ್ಮ ಟಾರ್ಗೆಟ್ ಸಿಎಂ ಕುರ್ಚಿ" ಎಂದ ಶಾಮನೂರು..!

Video Top Stories