"ಡಿಸಿಎಂ ಬೇಡ.. ನಮ್ಮ ಟಾರ್ಗೆಟ್ ಸಿಎಂ ಕುರ್ಚಿ" ಎಂದ ಶಾಮನೂರು..!
ಕಾಂಗ್ರೆಸ್‌ನಲ್ಲಿ “ಲಿಂಗಾಯತ ದಂಗಲ್” ಸಿದ್ದುಗೆ ಹೊಸ ಸವಾಲ್..!
ಲಿಂಗಾಯತ ಶಾಸಕರ ಅಸಹನೆ..ಆಕ್ರೋಶ..ಏನಿದರ ಗುಟ್ಟು..?
ಸಿದ್ದರಾಮಯ್ಯ ಬೆನ್ನಿಗೆ ನಿಂತು ಶಾಮನೂರುಗೆ ಕುಟುಕಿದ ಹಳ್ಳಿಹಕ್ಕಿ..!
ಕಾವೇರಿ ಜಲ ಸಂಘರ್ಷದ ಚಕ್ರವ್ಯೂಹದಲ್ಲಿ ಸಿಲುಕಿರೋ ಕಾಂಗ್ರೆಸ್ (Congress) ಸರ್ಕಾರಕ್ಕೆ ಮತ್ತೊಂದು ಚಕ್ರವ್ಯೂಹ. ಇದು ಪಕ್ಕಾ ಪೊಲಿಟಿಕಲ್ ಚಕ್ರವ್ಯೂಹ. ಸರ್ಕಾರದ ಬುಡದಲ್ಲೇ ಎದ್ದು ನಿಂತಿರೋ ಲಿಂಗಾಯತ(Lingayat) ಚಕ್ರವ್ಯೂಹ. ಆ ವ್ಯೂಹದ ಗುರಿ ಸಿಎಂ ಪಟ್ಟ. ವೀರಶೈವ-ಲಿಂಗಾಯತರಿಗೆ ಮುಖ್ಯಮಂತ್ರಿ ಪಟ್ಟ ಕೊಡ್ಬೇಕು ಅಂತ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ(Shamanur Shivashankarappa) ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಅಂದಿದ್ದಾರೆ. ಡಿಸಿಎಂ ದಂಗಲ್ ಆಯ್ತು..ಈಗ ಸಿಎಂ ಪಟ್ಟಕ್ಕೇ ಫೈಟ್. ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಂದು ರಗಳೆ, ಸಿದ್ದರಾಮಯ್ಯನವರಿಗೆ ದಿನಕ್ಕೊಂದು ಟೆನ್ಷನ್. ತ್ರಿವಳಿ ಡಿಸಿಎಂ ಹುದ್ದೆಗಾಗಿ ಕೂಗು ಎದ್ದು ಆ ಬಿಸಿ ತಣ್ಣಗಾದ ಬೆನ್ನಲ್ಲೇ ಈಗ ಅಂತರ್ಯುದ್ಧದ ನೇರ ಟಾರ್ಗೆಟ್ ಮುಖ್ಯಮಂತ್ರಿ ಪಟ್ಟ. ರಾಜ್ಯ ಕಾಂಗ್ರೆಸ್‌ಗೆ ಅಂತರ್ಯುದ್ಧ ಹೊಸತೂ ಅಲ್ಲ, ಅದ್ಕೆ ಕೊನೆಯೂ ಇಲ್ಲ. ಅಂತರ್ಯುದ್ಧ, ಅಂತಃಕಲಹ ಅಂತ ಬಂದ್ರೆ ಕಾಂಗ್ರೆಸ್‌ನಲ್ಲಿ ಅದಕ್ಕೊಂದು ದೊಡ್ಡ ಚರಿತ್ರೆಯೇ ಇದೆ. ಕಾಲ ಕಾಲಕ್ಕೆ ಕಾಂಗ್ರೆಸ್‌ನಲ್ಲಿ ಈ ಆಂತರಿಕ ಗುದ್ದಾಟ, ಕಚ್ಚಾಟ, ಕಾಲೆಳೆಯುವ ಪರಿಪಾಠ ಮುಂದುವರಿದುಕೊಂಡೇ ಬಂದಿದೆ. ನಾವಿವತ್ತು ಹೇಳ್ತಾ ಇರೋದು ಅದರ ಮುಂದುವರಿದ ಅಧ್ಯಾಯ. ಮೊನ್ನೆ ಮೊನ್ನೆಯಷ್ಟೇ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿಎಂ ದಂಗಲ್ ದೊಡ್ಡ ಸದ್ದು ಮಾಡಿತ್ತು. ಆ ದಂಗಲ್"ಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ ಬೆನ್ನಲ್ಲೇ ಈಗ ಸಿಎಂ ಪಟ್ಟದ ದಂಗಲ್ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಬರ್ಲಿನ್ ಕನ್ನಡ ಬಳಗದಿಂದ ಜರ್ಮನಿಯಲ್ಲಿ ಕನ್ನಡಿಗರ ಕ್ರೀಡಾ ಸ್ಪೂರ್ತಿ !