ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..?

Share this Video
  • FB
  • Linkdin
  • Whatsapp

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಊಟ ಕೂಟ ಚದುರಂಗದಾಟ. ಒಟ್ಟಾಗಿ ಬ್ರೇಕ್​ಫಾಸ್ಟ್ ಮಾಡಿ ಒಗ್ಗಟ್ಟಿನ ಸಂದೇಶ ರವಾನಿಸಿದ್ರು ಸಿದ್ದು-ಡಿಕೆ.. ಇದೀಗ ಅವರಿಬ್ಬರೇ ತಮ್ಮ ತಮ್ಮ ಪಡೆ ಕಟ್ಕೊಂಡು ಪ್ರತ್ಯೇಕ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕೂಡ ಊಟದ ನೆಪದಲ್ಲಿ ತಮ್ಮ ಸೇನೆಯನ್ನ ಒಟ್ಟುಗೂಡಿಸಿದ್ದಾರೆ.

ಹಾಗಿದ್ರೆ ಈ ಡಿನ್ನರ್ ಮೀಟಿಂಗ್ ಮೂಲಕ ತಮ್ಮ ಆಪ್ತರಿಗೆ, ಪಕ್ಷದ ಹೈಕಮಾಂಡ್​ಗೆ ಹಾಗೇನೆ ಎದುರಾಳಿಗಳಿಗೆ ಡಿಕೆ ಕೊಟ್ಟ ಸಂದೇಶವೇನು..? ಊಟದ ನೆಪದಲ್ಲಿ ಕನಕಾಧಿಪತಿ ಉರುಳಿಸಿರೋ ದಾಳ ಎಂಥದ್ದು.? ಕೈ ಸಾಮ್ರಾಜ್ಯದ ಸಿಂಹಾಸನ ಸಂಘರ್ಷವು ಮತ್ತೆ ಮತ್ತೆ ವಿಪಕ್ಷಕ್ಕೆ ಅಸ್ತ್ರವಾಗ್ತಿದೆ. ಇದೀಗ ಡಿನ್ನರ್ ಮೀಟಿಂಗ್ ವಿಚಾರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬಿದ್ದಿದೆ ಕಮಲ ಪಡೆ. ಒಂದು ಕಡೆ ಸದನ ನಡೆಯುತ್ತಿದ್ರೆ, ಇನ್ನೊಂದು ಕಡೆ ಕೈ ಸಾಮ್ರಾಜ್ಯದಲ್ಲಿ ಸಿಂಹಾಸನ ಕದನವು ಮುಂದುವರೆದಿದೆ. ಇದುವೇ ಈಗ ವಿಪಕ್ಷದಲ್ಲಿ ಕೂತಿರೋ ಕಮಲ ಪಡೆಗೆ ಅಸ್ತ್ರವಾಗಿರೋದು.

ಇದೇ ಅಸ್ತ್ರವನ್ನೇ ಹಿಡಿದು ಸರ್ಕಾರದ ವಿರುದ್ಧ ಮತ್ತೆ ಮತ್ತೆ ಝಳಪಿಸ್ತಾಯಿರೋದು. ಕುರ್ಚಿ ಕದನವನ್ನ ಕಂಪ್ಲೀಟ್ ಆಗಿ ಮುಗಿಸೋಕೆ ಹೈಕಮಾಂಡ್ ಒಂದು ಮುಹೂರ್ತ ಫಿಕ್ಸ್ ಮಾಡಿದೆ ಎನ್ನಲಾಗ್ತಿದೆ. ಆದ್ರೆ ಆ ಮುಹೂರ್ತದ ಬಗ್ಗೆ ಕೇಳಿದ್ರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇ ಬೇರೆ.. ಹಾಗಿದ್ರೆ ಈ ಬಗ್ಗೆ ಸಿದ್ದು ಹೇಳಿದ್ದೇನು. ಕರುನಾಡಿನ ಸಿಂಹಾಸನ ಸಮರವನ್ನ ಸಮಾಪ್ತಿಗೊಳಿಸೋಕೆ ಪಕ್ಷದ ಹೈಕಮಾಂಡ್ ಅಲರ್ಟ್​ ಆಗಿದೆ. ಇದಕ್ಕೊಂದು ಮುಹೂರ್ತ ಕೂಡ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಿದ್ರೆ ಅದಕ್ಕವರು ಕೊಟ್ಟ ಉತ್ತರವೇ ಬೇರೆ.

Related Video