
ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇವತ್ತು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನಾಯಕ ಜೈಲಿನಲ್ಲಿರೋವಾಗ ತೆರೆಗೆ ಬಂದಿರೋ ಡೆವಿಲ್ ಗೆ ಅಭಿಮಾನಿಗಳಿಂದ ಭರ್ಜರಿ ಓಪನಿಂಗ್ ಸಿಕ್ಕಿದೆ.
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇವತ್ತು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನಾಯಕ ಜೈಲಿನಲ್ಲಿರೋವಾಗ ತೆರೆಗೆ ಬಂದಿರೋ ಡೆವಿಲ್ ಗೆ ಅಭಿಮಾನಿಗಳಿಂದ ಭರ್ಜರಿ ಓಪನಿಂಗ್ ಸಿಕ್ಕಿದೆ. ಇತ್ತ ಫ್ಯಾನ್ಸ್ ಥಿಯೇಟರ್ ಅಂಗಳಲ್ಲಿ ಸೆಲೆಬ್ರೇಷನ್ ಮಾಡ್ತಾ ಇದ್ರೆ, ಅತ್ತ ಜೈಲಿನಲ್ಲಿ ಟಿವಿ ಪಡೆದುಕೊಂಡಿರೋ ದಾಸನಿಗೆ ಅದನ್ನ ನೋಡೋ ಚಾನ್ಸ್ ಕೂಡ ಸಿಕ್ಕಿದೆ. ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಡೆವಿಲ್ ರಿಲೀಸ್ ಆಗಿದ್ದು, ದಾಸನ ಫ್ಯಾನ್ಸ್ ಹಬ್ಬ ಮಾಡ್ತಾ ಇದ್ದಾರೆ. ಚಿತ್ರಮಂದಿರಗಳ ಎದುರು ದರ್ಶನ್ ಕಟೌಟ್ಗಳು ರಾಜಾಜಿಸ್ತಾ ಇವೆ. ದರ್ಶನ್ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲ್ನಲ್ಲೊರೋದು ಗೊತ್ತೇ ಇದೆ.
ದರ್ಶನ್ ಇಲ್ಲ ಅಂತ ಅಭಿಮಾನಿಗಳ ಸಂಭ್ರಮ ಏನೂ ಕಮ್ಮಿಯಾಗಿಲ್ಲ. ರಾಜ್ಯಾದ್ಯಂತ ಅಭಿಮಾನಿ ಬಳಗ ದೊಡ್ಡ ಸೆಲೆಬ್ರೇಷನ್ನೊಂದಿಗೆ ಡೆವಿಲ್ನ ಬರಮಾಡಿಕೊಂಡಿದೆ. ಬೆಳಿಗ್ಗೆ 6 ರಿಂದಲೇ ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಶೋಗಳು ಶುರುವಾಗಿವೆ. ಅಡ್ವಾನ್ಸ್ ಬುಕ್ಕಿಂಗ್ನಿಂದಲೇ 6 ಕೋಟಿಗೂ ಅಧಿಕ ಬಿಜಿನೆಸ್ ಮಾಡಿದ್ದ ಡೆವಿಲ್ ಮೊದಲ ವಾರಾಂತ್ಯದ ವೇಳೆಗೆ ಭರ್ಜರಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಹೌದು ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಲ್ಲಿ ಇದ್ರು. ನಾಯಕನಟನ ಅನುಪಸ್ಥಿತಿಯಲ್ಲಿ ಬಂದ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಗಿತ್ತು. ಅಭಿಮಾನಿಗಳು ಸಾರಥಿಯನ್ನ ಗೆಲ್ಲಿಸಿದ್ರು. ಇದೀಗ ದಿ ಡೆವಿಲ್ಗೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡ್ತಾ ಇದ್ದಾರೆ. ದಿ ಡೆವಿಲ್ ಕೂಡ ಸಾರಥಿಯಂತೆ ದೊಡ್ಡ ಸಕ್ಸಸ್ ಆಗುತ್ತಾ..?
ದರ್ಶನ್ ಒಳಗಿರೋವಾಗ, ಹೊರಗೆ ಈ ಸಿನಿಮಾ ಜಯಭೇರಿ ಬಾರಿಸುತ್ತಾ ಕಾದುನೋಡಬೇಕಿದೆ. ಹೌದು ದರ್ಶನ್ ಌಂಡ್ ಗ್ಯಾಂಗ್ ಕೆಲ ದಿನಗಳ ಹಿಂದೆ ತಮಗೆ ಬ್ಯಾರಕ್ನಲ್ಲಿ ಟಿವಿ ಕೊಡುವಂತೆ ಮನವಿ ಮಾಡಿತ್ತು. ಕೋರ್ಟ್ ಕೂಡ ಅದಕ್ಕೆ ಅಸ್ತು ಅಂದಿತ್ತು. ಡೆವಿಲ್ ರಿಲೀಸ್ ಮುನ್ನಾದಿನವೇ ದರ್ಶನ್ಗೆ ಟಿವಿ ಭಾಗ್ಯ ಸಿಕ್ಕಿದೆ. ಸೋ ಜೈಲ್ನಲ್ಲೇ ದಾಸನಿಗೆ ಡೆವಿಲ್ ಸಂಭ್ರಮ ನೋಡೋ ಚಾನ್ಸ್ ಸಿಕ್ಕಿದೆ. ಮಿಲನ ಪ್ರಕಾಆಶ್ ಡೈರೆಕ್ಟ್ ಮಾಡಿರೋ ಡೆವಿಲ್ ಸಿನಿಮಾದ ಅವಧಿ 2 ಗಂಟೆ 49 ಸಿನಿಷ ಇದೆ. ಈಗಾಗ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್ ರಿವಿವ್ಸ್ ಬರ್ತಾ ಇವೆ. ದಾಸನ ಅವತಾರ ಸೂಪರ್ ಅಂತಿದ್ದಾರೆ ಫ್ಯಾನ್ಸ್. ಒಟ್ಟಾರೆ ದರ್ಶನ್ ಜೈಲಿನಲ್ಲಿದ್ರೂ ಡೆವಿಲ್ ಜಾತ್ರೆ ಮಾತ್ರ ಜೋರಾಗಿದೆ.