ಕರೆಂಟ್‌ ಬಿಲ್‌ ಕಟ್ಟಿ ಅನ್ನೋದೆ ತಪ್ಪಾ ?: ಜೆಸ್ಕಾಂ ಲೈನ್‌ಮ್ಯಾನ್ ಮೇಲೆ ಚಪ್ಪಲಿಯಿಂದ ಹಲ್ಲೆ- ವಿಡಿಯೋ ವೈರಲ್‌

ಕರೆಂಟ್‌ ಬಿಲ್‌ ಕಟ್ಟಿ ಎಂದ ಲೈನ್‌ಮ್ಯಾನ್‌ ಶಾಮೀದ್ ಅಲಿ ಮಾತಿಗೆ ವಿರೋಧ ವ್ಯಕ್ತಪಡಿಸಿ ಚಂದ್ರಶೇಖರ್ ಎಂಬುವವರು ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

Share this Video
  • FB
  • Linkdin
  • Whatsapp

ಕೊಪ್ಪಳ: ಬಾಕಿ ವಿದ್ಯುತ್ ಬಿಲ್ ಪಾವತಿಸಲು ಹೇಳಿದ ಹಿನ್ನೆಲೆ ಜೆಸ್ಕಾಂ ಲೈನ್‌ಮ್ಯಾನ್‌ಗೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಲೈನಮ್ಯಾನ್ ಶಾಮೀದ್ ಅಲಿ ಮೇಲೆ ಚಂದ್ರಶೇಖರ್ ಹಿರೇಮಠ ಎಂಬುವವರು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಚಂದ್ರಶೇಖರ್ ಹಿರೇಮಠ ಅವರದ್ದು, 9,990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಬಾಕಿ ತುಂಬುವಂತೆ ಲೈನಮ್ಯಾಮ್ ಶಾಮೀದ್ ಅಲಿ ಬಂದಿದ್ದರು. ಈ ವೇಳೆ ನಾನು ಬಾಕಿ ತುಂಬಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ. ಅದಕ್ಕೆ ಲೈನ್‌ಮ್ಯಾನ್ ಶಾಮೀದ್ ಅಲಿ ಬಾಕಿ ತುಂಬಲೇಬೇಕೆಂದು ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಜೆಸ್ಕಾಂ ಸಿಬ್ಬಂದಿ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಹಾಡಹಗಲಲ್ಲೇ KSRTC ಡ್ರೈವರ್‌ ಕೊಲೆ: ಹವಾ ಮೇಂಟೇನ್ ಮಾಡಲು ಅಮಾಯಕನನ್ನ ಕೊಂದರು !

Related Video