ಹಾಡಹಗಲಲ್ಲೇ KSRTC ಡ್ರೈವರ್‌ ಕೊಲೆ: ಹವಾ ಮೇಂಟೇನ್ ಮಾಡಲು ಅಮಾಯಕನನ್ನ ಕೊಂದರು !

ಕಲಬುರಗಿಯಲ್ಲಿ ರೌಡಿಗಳು ಬಸ್ ಡ್ರೈವರ ನಾಗಯ್ಯ ಸ್ವಾಮಿಯನ್ನು ಕೊಂದು ಹಾಕಿದ್ದಾರೆ. ಅದು ಕೂಡ ಹವಾ ಮೇಂಟೇನ್‌ ಮಾಡೋಕೆ ಎಂಬುದು ದುಃಖಕರ ಸಂಗತಿಯಾಗಿದೆ.

Share this Video
  • FB
  • Linkdin
  • Whatsapp

KSRTC ಡ್ರೈವರ್‌ ಅವನ ಬಸ್ ರೂಟ್ ಕಲಬುರಗಿ ಸಿಟಿಯಿಂದ ಮಿಣಜಗಿ. ಪ್ರತೀ ನಿತ್ಯ ತನ್ನ ಕೆಲಸವಾಯ್ತು. ತನ್ನ ಮನೆಯಾಯ್ತು ಅಂತ ಇದ್ದವನು. ಆದ್ರೆ ಅವತ್ತು ಊಟಕ್ಕೆ ಅಂತ ಬಸ್ ನಿಲ್ಲಿಸಿದವನು ಮತ್ತೆ ಆ ಬಸ್‌ನ ಸ್ಟಾರ್ಟ್ ಮಾಡಲೇ ಇಲ್ಲ. ಅವನನ್ನ ಹಂತಕರು ಕೊಂದು ಹಾಕಿದ್ರು. ಮಟಮಟ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೆಳಗಿಳಿದು ಹೋಗುತ್ತಿದ್ದವನನ್ನ ಗುಂಪೊಂದು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಕಿತ್ತು. ಇನ್ನೂ ಇದೇ ಕೇಸ್ನ ತನಿಖೆಗಿಳಿದ ಪೊಲೀಸರಿಗೆ ಅವನನ್ನ ಕೊಂದವರು ಯಾರು? ಯಾತಕ್ಕಾಗಿ ಕೊಂದರು ಅನ್ನೋದನ್ನ ಪತ್ತೆ ಹಚ್ಚೋದೇ ಕಷ್ಟವಾಗಿಬಿಟ್ಟಿತ್ತು. ಬಳಿಕ ಹಂತಕರೇನೋ ಸಿಕ್ಕಿದ್ರು, ಅವರನ್ನೆಲ್ಲಾ ಎತ್ತಾಕೊಂಡು ಬಂದು ಪೊಲೀಸರು ವರ್ಕ್ ಕೂಡ ಮಾಡಿದ್ರು. ಯಾಕ್ರೋ ಬಸ್ ಡ್ರೈವರ್‌ನ ಕೊಂದ್ರಿ ಅಂತ ಕೇಳಿದ್ದಾರೆ. ಅದಕ್ಕೆ ಅವರು ಹೇಳಿರುವುದು ಹವಾ ಮೇಂಟೇನ್ ಮಾಡೋಕೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಕರ್ನಾಟಕ ಗದ್ದುಗೆ ಗೆದ್ದ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ: ಮೋದಿ ಕಟ್ಟಿ ಹಾಕಲು ಪಂಚಾಶ್ವಮೇಧ ಪ್ರಯೋಗ!

Related Video