ಕಾರು ಚಾಲಕನಿಗೆ ಮಹಿಳೆಯಿಂದ ಚಪ್ಪಲಿ ಸೇವೆ: ವಿಡಿಯೋ ವೈರಲ್‌

ಮಧ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಎರಡು ಅಟೋ ಹಾಗೂ ಒಂದು ಬೈಕ್ ಗೆ ಡಿಕ್ಕಿ ಹೊಡೆಸಿದ ಕಾರು ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿದ್ದಾರೆ. 
 

Share this Video
  • FB
  • Linkdin
  • Whatsapp

ವಿಜಯಪುರ: ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಅಪಘಾತ ಮಾಡಿದ ಕಾರು ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ಘಟನೆ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಾರು ಚಾಲಕ ಮಧ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಎರಡು ಅಟೋ ಹಾಗೂ ಒಂದು ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ಆಟೋ ಪಲ್ಟಿಯಾಗಿದೆ. ಈ ಆಟೋದಲ್ಲಿದ್ದ ಮಹಿಳೆ ಕಾರ್ ಚಾಲಕನಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ. ಬೇಜವಾಬ್ದಾರಿಯಾಗಿ ಹಾಗೂ ಮದ್ಯ ಸೇವಿಸಿ ಕಾರ್ ಚಾಲನೆ ಮಾಡಿ ಅಪಘಾತ ಮಾಡಿದ್ದಕ್ಕೆ ಆಕ್ರೋಶಗೊಂಡ ಮಹಿಳೆ, ಚಪ್ಪಲಿಯಿಂದ ಕಾರು ಚಾಲಕನಿಗೆ ಹೊಡೆದಿದ್ದಾಳೆ. ಸದ್ಯ ಮಹಿಳೆ ಕಾರು ಚಾಲಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ: ಮೈಸೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಹೋಳಿಗೆ ಊಟ !

Related Video