Asianet Suvarna News Asianet Suvarna News

ಪೊಲೀಸ್‌ ಠಾಣೆ ಎದುರೇ ಮಂತ್ರ ಘೋಷ..ಮಾಂಗಲ್ಯ ಧಾರಣೆ: ಹಿಂದೂ ಯುವಕ-ಮುಸ್ಲಿಂ ಯುವತಿ ಮದುವೆ !

ಮನೆಯವರ ವಿರೋಧದ ಮಧ್ಯೆ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮದುವೆ ಆಗಿದ್ದಾರೆ. ಈ ಘಟನೆ ಧಾರವಾಡದ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದಿದೆ.

ಹಿಂದೂ-ಮುಸ್ಲಿಂ ಯುವಕ ಯುವತಿ ಓಡಾಡಿದ್ರೇನೆ ತಪ್ಪು ಅಂತಾ ಹಲ್ಲೆ ಮಾಡೋ ಜನರ ಮಧ್ಯೆ ಧಾರವಾಡದಲ್ಲೊಂದು(Dharwad) ಅಪರೂಪದ ಘಟನೆ ನಡೆದಿದೆ. ಬಜರಂಗದಳ(Bajrang Dal) ಕಾರ್ಯಕರ್ತರೇ ಮುಂದೆ ನಿಂತು ಹಿಂದೂ(Hindu) ಯುವಕ ಹಾಗೂ ಮುಸ್ಲಿಂ(Muslim) ಯುವತಿ ಮದುವೆ ಮಾಡಿಸಿದ್ದಾರೆ. ಮಂಜುನಾಥ್ ಹಾಗೂ ಉಮೇದ್ ಕಳೆದ ಆರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ (Love) ಯುವತಿಯ ಮನೆಯವರ ತೀವ್ರ ವಿರೋಧವಿತ್ತು. ಅದಕ್ಕೆ ಕಾರಣ ಅವರಿಬ್ಬರ ಧರ್ಮ. ಆದರೆ ಈ ಪ್ರೇಮಿಗಳು ಧರ್ಮವನ್ನೂ ಮೀರಿ ಪ್ರೀತಿಸಿದ್ದು, ಕೊನೆಗೆ ಪೊಲೀಸ್ ಠಾಣೆಯಲ್ಲಿ ಮದುವೆಯಾಗುವ (Marriage) ಮೂಲಕ ಒಂದಾಗಿದ್ದಾರೆ. ಮೊದಲು ಅವರು ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದು, ಆಗ ಯುವತಿ ಪೋಷಕರು ಯುವಕನ ವಿರುದ್ಧ ಕಿಡ್ನ್ಯಾಪ್‌ ಕೇಸ್‌ ದಾಖಲಿಸಿದ್ದರು. 

ಇದನ್ನೂ ವೀಕ್ಷಿಸಿ:  ಪರ್ಯಾಯೋತ್ಸವಕ್ಕೆ ಸಿದ್ಧವಾಗ್ತಿದೆ ಉಡುಪಿ.. ಶ್ರೀ ಕೃಷ್ಣನ ಪೂಜಾಧಿಕಾರ ಹಸ್ತಾಂತರಕ್ಕೆ ದಿನಗಣನೆ..!

Video Top Stories