Asianet Suvarna News Asianet Suvarna News

ಪರ್ಯಾಯೋತ್ಸವಕ್ಕೆ ಸಿದ್ಧವಾಗ್ತಿದೆ ಉಡುಪಿ.. ಶ್ರೀ ಕೃಷ್ಣನ ಪೂಜಾಧಿಕಾರ ಹಸ್ತಾಂತರಕ್ಕೆ ದಿನಗಣನೆ..!

ಉಡುಪಿಯಲ್ಲಿ ಮತ್ತೊಮ್ಮೆ ಪರ್ಯಾಯೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಮುಂದಿನ ಪರ್ಯಾಯ ವಿಶ್ವ ಪರ್ಯಾಯ. ಮುಂದಿನ ಪರ್ಯಾಯ ಗೀತಾ ಪರ್ಯಾಯ ಎಂಬ ಘೋಷಣೆ ಮೊಳಗಿಸಲಾಗಿದೆ. ಕೃಷ್ಣಾಪುರ ಮಠದಿಂದ ಪುತ್ತಿಗೆ ಮಠಕ್ಕೆ ಅಧಿಕಾರ ಹಸ್ತಾಂತರ ಆಗಲಿದೆ.

ಅಪರೂಪದ ಪರ್ಯಾಯೋತ್ಸವಕ್ಕೆ(Paryaya mahotsava) ಉಡುಪಿ ಸಿದ್ದವಾಗುತ್ತಿದೆ‌. ಇನ್ನೇನು ಕೆಲವೇ ದಿನಗಳಲ್ಲಿ ಉಡುಪಿ(Udupi) ಶ್ರೀಕೃಷ್ಣನ ಪೂಜಾಧಿಕಾರ ಕೃಷ್ಣಾಪುರ ಮಠದಿಂದ ಪುತ್ತಿಗೆ ಮಠಕ್ಕೆ(Puttige Math) ಹಸ್ತಾಂತರವಾಗಲಿದೆ. ಅನ್ನಬ್ರಹ್ಮನ ಕ್ಷೇತ್ರದಲ್ಲಿ 2 ವರ್ಷ ಅನ್ನ ಪ್ರಸಾದ ವಿತರಣೆಯ ಸಂಕಲ್ಪ ಮಾಡಲಾಗಿದೆ. ಪರ್ಯಾಯದ ವೇಳೆ ಬಳಸಲು ಭತ್ತ ಸಂಗ್ರಹ ಮಾಡುವ ಮುಹೂರ್ತ ಮಠದಲ್ಲಿ ನೆರವೇರಿದೆ. ಭಕ್ತ ತುಂಬಿದ ಮುಡಿಗಳನ್ನು ಪಲ್ಲಕ್ಕಿಯಲ್ಲಿಟ್ಟು.. ತಲೆಮೇಲೆ ಹೊತ್ತು ಮೆರವಣಿಗೆ ಮಾಡಲಾಯಿತು. ಚಂದ್ರಮೌಳೇಶ್ವರ, ಅನಂತೇಶ್ವರ ದೇವಸ್ಥಾನ ಕೃಷ್ಣಮಠದಲ್ಲಿ(Krishnapur Math) ಭತ್ತದ ಮಡಿಗಳಿಗೆ ಪೂಜೆ ಸಲ್ಲಿಕೆ ಮಾಡಲಾಯಿತು. ಪರ್ಯಾಯದ ಪೂರ್ವಭಾವಿಯಾಗಿ 4 ಮಹೂರ್ತಗಳು ನೆರವೇರುತ್ತದೆ. ಈಗಾಗಲೇ ಮಠದಲ್ಲಿ ಬಾಳೆ ಮುಹೂರ್ತ ನೆರವೇರಿದೆ. ಅಕ್ಕಿ ಮಹೂರ್ತದ ಮೂಲಕ ಮಠದಲ್ಲಿ ಅಕ್ಕಿ ಸಂಗ್ರಹ ಈಗಾಗಲೇ ನಡೆಯುತ್ತಿದೆ. ಈಗ ಧಾನ್ಯ ಸಂಗ್ರಹ ಕಾರ್ಯ ಅರಂಭವಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನವಧಾನ್ಯ ಸಂಗ್ರಹಕ್ಕೆ ಚಾಲನೆ ನೀಡಿದರು.ಪುತ್ತಿಗೆ ಮಠದ ಶ್ರೀಗಳು ಲೋಕ ಸಂಚಾರಕ್ಕೆ ಹೊರಡಲಿದ್ದು, ಜನವರಿ ಮೊದಲ ವಾರದಲ್ಲಿ ಉಡುಪಿಗೆ ವಾಪಾಸ್ಸಾಗಲಿದ್ದಾರೆ. ವಿದೇಶದಲ್ಲಿ ಮಠದ 10ಕ್ಕೂ ಹೆಚ್ಚು ಶಾಖೆಗಳಿದ್ದು, ಈ ಬಾರಿಯ ಪರ್ಯಾಯಕ್ಕೆ ವಿದೇಶಿ ಭಕ್ತರೂ ಆಗಮಿಸಲಿದ್ದಾರೆ ಎನ್ನಲಾಗ್ತಿದೆ. ಪುತ್ತಿಗೆ ಮಠದ ಶ್ರೀಗಳು ಶಿಷ್ಯನ ಜತೆಗೂಡಿ ತಮ್ಮ ನಾಲ್ಕನೇ ಪರ್ಯಾಯವನ್ನು ನೆರವೇರಿಸಲಿದ್ದಾರೆ. ಜನವರಿ 17 ಮಧ್ಯರಾತ್ರಿ ಪರ್ಯಾಯ ಮೆರವಣಿಗೆ ನಡೆಯಲಿದೆ. ಜನವರಿ 18ರ ಪ್ರಾತಃಕಾಲದಲ್ಲಿ ಶ್ರೀಗಳ ಪರ್ಯಾಯ ಪೀಠಾರೋಹಣ ನಡೆಯಲಿದ್ದು, ಈಗಾಗಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ. 

ಇದನ್ನೂ ವೀಕ್ಷಿಸಿ:  ವಿಶ್ವದ ಗಮನ ಸೆಳೆದ ಕೋಲಾರದ ಬಾಲಕ.. ಭಾರತದ ಕೀರ್ತಿ ಪತಾಕೆ ಹಾರಿಸಿದ ಪೋರ !

Video Top Stories