News Hour: ಪ್ರಭು ಜಗನ್ನಾಥನೇ ಮೋದಿ ಭಕ್ತ ಎಂದ ಬಿಜೆಪಿ ಅಭ್ಯರ್ಥಿ, ಶುರುವಾಯ್ತು ವಿವಾದ

ಪ್ರಭು ಜಗನ್ನಾಥನೇ ಮೋದಿ ಭಕ್ತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಂಬಿತ್‌ ಪಾತ್ರಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು ಪ್ರಾಯಶ್ಚಿತ ಎನ್ನುವಂತೆ ಉಪವಾಸ ವೃತ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ (ಮೇ.21): ಓಡಿಶಾದಲ್ಲಿ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪ್ರಭು ಜಗನ್ನಾಥನೇ ಮೋದಿ ಭಕ್ತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ವಿಪಕ್ಷಗಳ ಆಕ್ರೋಶದ ಬೆನ್ನಲ್ಲೇ ಭಕ್ತರಲ್ಲಿ ಕ್ಷಮೆಯಾಚನೆ ಮಾಡಿದ್ದು, ಪ್ರಾಯಶ್ಚಿತ ಎನ್ನುವಂತೆ ಉಪವಾಸ ವೃತ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಬಿಜೆಪಿ ಲೀಡರ್‌ ವಿವಾದ ಸೃಷ್ಟಿಸಿದ್ದರು. ‘ಪುರಿಯಲ್ಲಿ ಮೋದಿ ರೋಡ್​ಷೋ’ ವೇಳೆ ಮಾತಿನ ಯಡವಟ್ಟು ಮಾಡಿದ್ದರು. ಮೋದಿ ರೋಡ್ ​ಷೋ ಜನಸಾಗರ ನೋಡಿ ಪಾತ್ರಾ ಈ ಮಾತು ಹೇಳಿದ್ದರು.

ಮನೆ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ ‘ಆಮ್‌ ಆದ್ಮಿ’ ಸಿಎಂ ಕೇಜ್ರಿವಾಲ್‌!

ಇನ್ನು ಸಂಬಿತ್ ಪಾತ್ರಾ ಹೇಳಿಕೆಗೆ ಬಿಜೆಡಿ & ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ. ಮೋದಿ 24 ಗಂಟೆಯಲ್ಲಿ ಕ್ಷಮೆಯಾಚಿಸಲಿ ಎಂದು ವಾಗ್ದಾಳಿ ಮಾಡಿದೆ. ವಿಪಕ್ಷಗಳ ಆಕ್ರೋಶದ ಬೆನ್ನಲ್ಲೇ ತಮ್ಮ ಮಾತಿಗೆ ಅವರು ಕ್ಷಮೆ ಯಾಚಿಸಿದ್ದಾರೆ.

Related Video