ಮನೆ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ ‘ಆಮ್ ಆದ್ಮಿ’ ಸಿಎಂ ಕೇಜ್ರಿವಾಲ್!
ಅಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಉತ್ತೇಜಿಸುವ ಭರವಸೆ ನೀಡುತ್ತಿದ್ರು. ಆದರೆ ಆ ಎಲ್ಲ ಭರವಸೆಗಳನ್ನು ಸುಳ್ಳು ಮಾಡಿ ಜನರಿಗೆ ದ್ರೋಹವೆಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ನವದೆಹಲಿ (ಏಪ್ರಿಲ್ 26, 2023): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸವನ್ನು ನವೀಕರಿಸಲು ₹ 45 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ. ಅಲ್ಲದೆ, ಅವರು ಅತಿರಂಜಿತ ಬೂಟಾಟಿಕೆ ಮಾಡುತ್ತಾರೆ ಎಂದೂ ಕಿಡಿ ಕಾರಿದೆ. ಆದರೆ, ಮನೆ ನವೀಕರಣವನ್ನು ಎಎಪಿ ಸಮರ್ಥಿಸಿಕೊಂಡಿದ್ದು, ಶಿಥಿಲಗೊಂಡ ಚಾವಣಿಯನ್ನು ಒಳಗೊಂಡಿರುವ ವಿಡಿಯೋ ಬಿಡುಗಡೆ ಮಾಡಿದೆ.
ಅಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಉತ್ತೇಜಿಸುವ ಭರವಸೆ ನೀಡುತ್ತಿದ್ರು. ಆದರೆ ಆ ಎಲ್ಲ ಭರವಸೆಗಳನ್ನು ಸುಳ್ಳು ಮಾಡಿ ಜನರಿಗೆ ದ್ರೋಹವೆಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಅಲ್ಲದೆ, ದೆಹಲಿ ಸಿಎಂ ಅವರನ್ನು ಮಹಾರಾಜ ಎಂದು ಕರೆದ ಸಂಬಿತ್ ಪಾತ್ರ, ಐಷಾರಾಮಿ ಮತ್ತು ಸೌಕರ್ಯದ ದುರಾಸೆ ಹೊಂದಿದ್ದಾರೆ ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಸಾರ್, ನಿಮಗೆ ಬೇಕಾದುದನ್ನು ಮಾಡಿ, ಆಪ್ ಹೋರಾಟ ನಿಲ್ಸಲ್ಲ; ಸಿಬಿಐ ತನ್ನನ್ನು ಅರೆಸ್ಟ್ ಮಾಡಬಹುದು: ಕೇಜ್ರಿವಾಲ್
ಇನ್ನು, ಈ ಸುದ್ದಿಯನ್ನು ಹತ್ತಿಕ್ಕಲು ಕೇಜ್ರಿವಾಲ್ ಮಾಧ್ಯಮ ಸಂಸ್ಥೆಗಳಿಗೆ ₹ 20 ರಿಂದ 50 ಕೋಟಿ ನೀಡಲು ಮುಂದಾಗಿದ್ದರು. ಆದರೆ, ಮಾಧ್ಯಮದವರು ಆಪ್ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದೂ ಸಂಬಿತ್ ಪಾತ್ರ ಆರೋಪ ಮಾಡಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ವಿಯೆಟ್ನಾಂನಿಂದ ದುಬಾರಿ ಅಮೃತಶಿಲೆ, ಪೂರ್ವ- ನಿರ್ಮಿತ ಮರದ ಗೋಡೆಗಳು ಮತ್ತು ಲಕ್ಷಾಂತರ ರೂಪಾಯಿ ವೆಚ್ಚದ ಕರ್ಟನ್‌ಗಳನ್ನು ಅಳವಡಿಸಲಾಗಿದೆ ಎಂದು ತೋರಿಸುವ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಒಂದು ಪರದೆಗೆ ಬರೋಬ್ಬರಿ ₹ 7.94 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ ಎಂದೂ ಹೇಳಿದರು.
ಅಲ್ಲದೆ, "ಇದು ನಾಚಿಕೆಯಿಲ್ಲದ ರಾಜನ ಕಥೆ" ಎಂದೂ ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಲ್ಲದೆ, ಕೇಜ್ರಿವಾಲ್ ಬೇರೆ ರಾಜಕಾರಣಿಗಳ ಆಡಂಬರದ ಮನೆಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರೇನು ಮಾಡುತ್ತಿದ್ದಾರೆ ಎಂದೂ ಬಿಜೆಪಿ ವಕ್ತಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಶಾಸಕರಿಗೆ ಸ್ಯಾಲರಿ ಹೈಕ್ ಭಾಗ್ಯ..! ಆಮ್ ಆದ್ಮಿ ಸಿಎಂ ಕೇಜ್ರಿವಾಲ್ ಸಂಬಳ ಎಷ್ಟು ನೋಡಿ..
ತಮ್ಮ ಹಿಂದಿನ ಭಾಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಅದ್ದೂರಿ ಖರ್ಚುಗಳನ್ನು ವಿರೋಧಿಸುತ್ತಿದ್ದರು. ರಾಜಕಾರಣಿಗಳು ಆಡಂಬರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಾರ್ವಜನಿಕ ವೆಚ್ಚದಲ್ಲಿ ಇತರ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಎಂದು ಟೀಕಿಸಿದ್ದರು. ಅಲ್ಲದೆ, ತಾನು 4 - 5 ಕೋಣೆಗಳ ಮನೆಯಿಂದ ತೃಪ್ತನಾಗಿದ್ದೇನೆ ಮತ್ತು ದೊಡ್ಡ ಬಂಗೆಲೆ ಬೇಕಾಗಿಲ್ಲ ಎಂದೂ ದೆಹಲಿ ಸಿಎಂ ಹೇಳಿಕೊಂಡಿದ್ದರು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನಗಳನ್ನು ನಿವಾರಿಸಲು ಸುದ್ದಿಗೋಷ್ಠಿ ನಡೆಸುವಂತೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ನವೀಕರಣದ ಕುರಿತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ದೆಹಲಿ ಸಿಎಂ ಅವರನ್ನು ಸಂಬಿತ್ ಪಾತ್ರ ಕೇಳಿದರು. ಕೇಜ್ರಿವಾಲ್ ಈ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಜ್ಯೋತಿ ಜೊತೆ ಪಂಜಾಬ್ ಸಚಿವ ಹರ್ಜೋತ್ ಸಪ್ತಪದಿ: ಮದುವೆಯಾಗಲು ಕ್ಯೂನಲ್ಲಿ ಆಪ್ ಶಾಸಕರು..!
ಅದರೆ, ಆಪ್ ನಾಯಕನಿಗೆ ನೀಡಿರುವ ಮನೆ ಎಷ್ಟು ಕೆಟ್ಟದಾದ ಸ್ಥಿತಿಯಲ್ಲಿದೆ ಎಂದು ಆಪ್ ನಾಯಕಿ ಪ್ರಿಯಾಂಕಾ ಕಕ್ಕರ್ ಹೇಳಿಕೊಂಡಿದ್ದು, ಮನೆಯ ಛಾವಣಿ ಬೀಳುತ್ತಿದೆ ಎಂದಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಅವರಿಗೆ 1942 ರಲ್ಲಿ ನಿರ್ಮಿಸಲಾದ 1 ಎಕರೆಗಿಂತ ಚಿಕ್ಕದಾದ ಬಂಗಲೆಯನ್ನು ಮಂಜೂರು ಮಾಡಲಾಗಿದೆ, ಅದರ ಛಾವಣಿ ಮೂರು ಬಾರಿ ಬಿದ್ದಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.