ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಯಮಧೂತನಂತೆ ಬೆಟ್ಟದಿಂದ ಹರಿದು ಬಂದ ನೀರು, ವಿಡಿಯೋ ಭಯಾನಕ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಟ್ಟದಿಂದ ಹರಿದು ಬಂದ ನೀರಿಗೆ ಹಲವು ಮನೆಗಳು ನೆಲಸಮವಾಗಿದೆ.
 

Share this Video
  • FB
  • Linkdin
  • Whatsapp

ಹಿಮಾಚಲ ಪ್ರದೇಶದಲ್ಲಿ( Himachal Pradesh) ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಮನೆಗಳು ಕೊಚ್ಚಿ ಹೋಗಿದ್ದು, ರಸ್ತೆ, ಕಾರುಗಳು ಮುಳುಗಿ ಹೋಗಿವೆ. ಯಮಧೂತನಂತೆ ಬೆಟ್ಟದಿಂದ(Hill) ಹರಿದು ಬಂದ ನೀರು ಹಲವು ಮನೆಗಳನ್ನು ನೆಲಸಮ ಮಾಡಿದೆ. ಅಲ್ಲದೇ ಈ ನೀರಿನಲ್ಲಿ ಹಲವು ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿವೆ. ಮಳೆ ಹಿನ್ನೆಲೆ 736 ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಅಲ್ಲದೇ ಇಲ್ಲಿ ತನಕ 20 ಮಂದಿ(People died) ಬಲಿಯಾಗಿದ್ದಾರೆ. ಅಲ್ಲದೇ ಏಳು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌(Red alert) ಘೋಷಣೆ ಮಾಡಲಾಗಿದೆ. ಶಿಮ್ಲಾ ಜಿಲ್ಲೆಯ ಕೊಟಾಗಢ ಎಂಬಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇನ್ನು ಕುಲು ನಗರದಲ್ಲಿ ಮನೆ ಕುಸಿತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದರೇ, ವ್ಯಕ್ತಿಯೊಬ್ಬರು ಮಣ್ಣು ಕುಸಿತದ ಘಟನೆಯಲ್ಲಿ ಭೂಸಮಾಧಿಯಾಗಿದ್ದಾರೆ. ಶಿಮ್ಲಾ ನಗರದ ಹೊರವಲಯದಲ್ಲಿ ಬಾಲಕಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಳೆ.

ಇದನ್ನೂ ವೀಕ್ಷಿಸಿ: ಕಂಡ ಕಂಡಲ್ಲಿ ಬೆಂಕಿ.. ಸುಟ್ಟು ಹೋದ ಬೈಕ್‌ಗಳು..!: ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಂದ ರಾಕ್ಷಸರು..!

Related Video