ಕಂಡ ಕಂಡಲ್ಲಿ ಬೆಂಕಿ.. ಸುಟ್ಟು ಹೋದ ಬೈಕ್‌ಗಳು..!: ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಂದ ರಾಕ್ಷಸರು..!

ಮತಗಟ್ಟೆಯ ಬಳಿಯೇ ಗುಂಡಿನ ಮೊರೆತಕ್ಕೆ ಬೆಚ್ಚಿ ಬಿದ್ದ ಬಂಗಾಳ..!
ಮತಗಟ್ಟೆಗಳ ಮುಂದೆಯೆ ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ ಕಿರಾತಕರು..!
ಪಂಚಾಯತ್ ಪಟ್ಟಕ್ಕಾಗಿ ನೆತ್ತರೋಕುಳಿ, ದಂಗೆಯ ಹಿಂದಿದೆ ರಕ್ತ ಚರಿತ್ರೆ..!

Share this Video
  • FB
  • Linkdin
  • Whatsapp

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ(panchayat polls) ವೇಳೆ ನಿರೀಕ್ಷೆಯಂತೆಯೇ ಭಾರಿ ಹಿಂಸಾಚಾರಗಳು ನಡೆಯುತ್ತಿವೆ. ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ(Voting) ಆರಂಭವಾದ ನಂತರ ಅನೇಕ ಕಡೆ ಗಲಭೆಗಳು ನಡೆದಿವೆ. ಇದೂವರೆಗೂ 20ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಹಿಂಸಾಚಾರಗಳಲ್ಲಿ ಮೃತಪಟ್ಟವರಲ್ಲಿ ಐವರು ಟಿಎಂಸಿ ಕಾರ್ಯಕರ್ತರಿದ್ದಾರೆ. ಬಿಜೆಪಿ, ಎಡಪಕ್ಷ ಹಾಗೂ ಕಾಂಗ್ರೆಸ್‌ನ(Congress) ತಲಾ ಒಬ್ಬರು ಕಾರ್ಯಕರ್ತರು ಸೇರಿದ್ದಾರೆ. ಇನ್ನೊಬ್ಬ ಬಲಿಪಶು ಪಕ್ಷೇತರ ಅಭ್ಯರ್ಥಿಯ ಬೆಂಬಲಿಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೂಗ್ಲಿಯ ತಾರಕೇಶ್ವರದಲ್ಲಿ ಪಕ್ಷೇತರ ಅಭ್ಯರ್ಥಿಯ ಮಗಳ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಭಯಾನಕ ಘಟನೆ ಕೂಡ ವರದಿಯಾಗಿದೆ. ಟಿಎಂಸಿ (TMC) ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ವೀಕ್ಷಿಸಿ: ಲೋಕಸಮರಕ್ಕೆ ಮೋದಿಯ ಪ್ರಾದೇಶಿಕಾಸ್ತ್ರ: ಜುಲೈ 18ಕ್ಕೆ ಮೀಟಿಂಗ್ ಕರೆದ ಪ್ರಧಾನಿ

Related Video