
ಚೀನಾ ಮಸಲತ್ತು.. ಪಾಕ್ ದೌಲತ್ತು.. ಯಾರಿಗೆ ವಿಪತ್ತು..?: ಭಾರತಕ್ಕೆ ನಾಲ್ಕು ದಿಕ್ಕಿನಿಂದ ಎದುರಾಗಿದೆ ಕಂಟಕ!
ಭೀಕಾರಿ ಪಾಕಿಸ್ತಾನಕ್ಕೆ ಚೀನಾ ಹಣ ಹಂಚಿಕೆ!
ಭಾರತದ ವಿರುದ್ಧ ಕತ್ತಿ ಮಸೆಯೋಕೆ ಪಾಕ್ ರೆಡಿ!
ಹಳೆ ಶತ್ರುಗಳ ಹೊಸ ವ್ಯೂಹ ಅದೆಷ್ಟು ವಿಚಿತ್ರ!
ಭಾರತದ ವಿರುದ್ಧ ಒಂದು ದೊಡ್ಡ ಷಡ್ಯಂತ್ರವೇ ನಡೀತಿದೆ. ಒಂದು ಕಡೆ ಚೀನಾ ಮಸಲತ್ತು ಮಾಡ್ತಾ ಇದ್ರೆ, ಇನ್ನೊಂದು ಕಡೆ ಪಾಕ್ ದೌಲತ್ತು ತೋರಿಸ್ತಾ ಇದೆ. ಇಬ್ಬರೂ ಸೇರಿ, ಭಾರತದ ಬಾರ್ಡರ್ನಲ್ಲಿ ನೀಚ ರಣತಂತ್ರ ರೂಪಿಸ್ತಿದ್ದಾರೆ ಅನ್ನೋ ಮಾತಿದೆ. ಅದೂ ಅಲ್ಲದೆ, LTTE ಅನ್ನೋ ವಿಷ ಸರ್ಪ ಮತ್ತೆ ಭುಸುಗುಟ್ಟೋಕೆ ನೋಡ್ತಾ ಇದೆ. ಡಿ-ಕಂಪನಿ ವಿಪತ್ತು ತರೋ ಸುಳಿವು ಸಿಕ್ತಾ ಇದೆ. ಇದಿಷ್ಟು ಸಾಲದು ಅಂತ, ನಮ್ಮೊಳಗೆ, ಹಿಂಸಾಚಾರ.. ದಂಗೆ ಭುಗಿಲೆದ್ದಿದೆ. ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚು ನಡೀತಿದೆ ಅನ್ನೋ ಸಂಗತಿ, ನಮಗ್ಯಾರಿಗೂ ಹೊಸದಲ್ಲ. ಆದ್ರೆ ಈಗ ಅದರ ನೆಕ್ಸ್ಟ್ ವರ್ಷನ್ ನೋಡೋ ಸಮಯ ಬಂದಿದೆ. ಭಾರತ ಇನ್ಮುಂದೆ ಮತ್ತಷ್ಟು ಅಲರ್ಟ್ ಆಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಕೀರ್ತಿ ಹೆಚ್ಚಾದಷ್ಟೂ ಅಪಾಯ ಕೂಡ ದೊಡ್ಡದಾಗ್ತಾ ಇದೆ. ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರದಲ್ಲಿ, ಈಗ ಶಾಂತಿ ತಾಂಡವವಾಡೋ ಸಮಯ. ಆದ್ರೆ ಕಾಶ್ಮೀರ ತಣ್ಣಗಿದ್ರೆ, ಪಾಕಿಸ್ತಾದ ಹೊಟ್ಟೆಗೆ ಬೆಂಕಿ ಬೀಳದೇ ಇರುತ್ತಾ..? ಭಾರತ ನೆಮ್ಮದಿಯಾಗಿದ್ರೆ, ಚೀನಾಗೆ ತಿಂದ ಅನ್ನ ಜೀರ್ಣವಾದ್ರೂ ಆಗುತ್ತಾ? ಇಲ್ವೇ ಇಲ್ಲ.. ಅದಕ್ಕೇನೇ, ಈ ಎರಡು ನೀಚ ದೇಶಗಳೂ ಸೇರ್ಕೊಂಡು, ಈಗ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲೇ ಮಸಲತ್ತು ಮಾಡ್ತಿದ್ದಾವೆ.
ಇದನ್ನೂ ವೀಕ್ಷಿಸಿ: ನಾಯಕರ ಮಧ್ಯೆ ಅಂತರ್ಯುದ್ಧ, ಕಾಲೆಳೆಯುವ ಕಾಳಗ: ಬಿಜೆಪಿ ದಂಗೆಗೆ "ಬಾಂಬೆ ಬಾಯ್ಸ್" ಕಾರಣ ಅಂದ್ರು ಈಶ್ವರಪ್ಪ..!