ನಾಯಕರ ಮಧ್ಯೆ ಅಂತರ್ಯುದ್ಧ, ಕಾಲೆಳೆಯುವ ಕಾಳಗ: ಬಿಜೆಪಿ ದಂಗೆಗೆ "ಬಾಂಬೆ ಬಾಯ್ಸ್" ಕಾರಣ ಅಂದ್ರು ಈಶ್ವರಪ್ಪ..!

ಒಂದೇ ಸೋಲಿಗೆ ಮನೆಯೊಂದು ಮೂರು ಬಾಗಿಲು..!
ಬಿಜೆಪಿ Vs ಬಿಜೆಪಿ..ಭುಗಿಲೆದ್ದು ನಿಂತದ್ದೇಕೆ ಜ್ವಾಲಾಗ್ನಿ..?
ರಾಜಧಾನಿಯಲ್ಲಿ ಬಿಎಸ್‌ವೈ  ಮುಂದೆಯೇ ಆಕ್ರೋಶ ಸ್ಫೋಟ..!
 

Share this Video
  • FB
  • Linkdin
  • Whatsapp

ಶಿಸ್ತಿನ ಪಕ್ಷದಲ್ಲಿ ಆಂತರಿಕ ದಂಗೆ, ಅಂತರ್ಯುದ್ಧ ಶುರುವಾಗಿದೆ.ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಸೋಲಿನ ಕಿಚ್ಚು ಧಗಧಗಿಸ್ತಾ ಇದೆ. ನಾಯಕರ ಆಕ್ರೋಶ, ಕಾರ್ಯಕರ್ತರ ರೋಷಾವೇಶ. ಕೇಸರಿ ಕೋಟೆಯೊಳಗೆ ಜ್ವಾಲಾಮುಖಿ ಸ್ಫೋಟ. ಇದಕ್ಕೆಲ್ಲಾ ಬಾಂಬೆ ಬಾಯ್ಸ್ ಕಾರಣ ಅಂದ್ರು ಕಟ್ಟರ್ ಕೇಸರಿ ಕಲಿ.ಗೆದ್ದಾಗ ಎಲ್ಲವೂ ಸರಿಯಿರತ್ತೆ. ಸೋತಾಗ್ಲೇ ಹೊರಗ್ ಬರೋದು ಅಸಲಿ ಬಂಡವಾಳ. ರಾಜ್ಯ ಬಿಜೆಪಿ ಪಾಳೆಯದಲ್ಲಿ ಈಗ ಆಗ್ತಿರೋದು ಇದೇ. ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ, ಲೋಕಸಭಾ ಚುನಾವಣೆಗೆ ರೆಡಿಯಾಗ್ತಿರೋ ಕೇಸರಿ ಕೋಟೆಯೊಳಗೆ ಧಗಧಗ ದಂಗೆಯ ಆಂತರಿಕ ಕಿಚ್ಚಿನ ಜ್ವಾಲಾಗ್ನಿ ಧಗಧಗಿಸ್ತಾ ಇದೆ.ಬಿಜೆಪಿ ಅಂದ್ರೆ ಶಿಸ್ತಿನ ಪಕ್ಷ... ಅಲ್ಲಿ ಏನೇ ನಡೆದ್ರೂ ಶಿಸ್ತಿನ ಚೌಕಟ್ಟಿನೊಳಗೇ ನಡೆಯತ್ತೆ ಅಂತ ಹೇಳಲಾಗತ್ತೆ. ಆದ್ರೆ ರಾಜ್ಯ ಕೇಸರಿ ಕೋಟೆಯೊಳಗೆ ನಡೀತಾ ಇರೋ ಘಟನೆಗಳೆಲ್ಲಾ ಇದಕ್ಕೆ ತದ್ವಿರುದ್ಧವಾಗಿವೆ.

ಇದನ್ನೂ ವೀಕ್ಷಿಸಿ: ಕವರ್‌ ಸ್ಟೋರಿ ಬಿಗ್‌ ಇಂಪ್ಯಾಕ್ಟ್‌: ಬಬಲಾದಿಯ ಅಕ್ರಮ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಅಧಿಕಾರಿಗಳ ರೇಡ್‌

Related Video