Asianet Suvarna News Asianet Suvarna News

ರಿಯಲ್ ಕಥೆಯನ್ನು ರೀಲ್‌ನಲ್ಲಿ ತೋರಿಸಿದ್ದಾರೆ: 'ತನುಜಾ' ಚಿತ್ರದ ಬಗ್ಗೆ ಪ್ರೇಕ್ಷಕರು ಹೇಳಿದ್ದೇನು?

ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ಕಷ್ಟದಲ್ಲಿ ನೀಟ್‌ ಪರೀಕ್ಷೆ ಬರೆದ ಸಾಧಕಿ ಕುರಿತಾದ ‘ತನುಜಾ’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರವನ್ನು ನೋಡಿದ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ಕಷ್ಟದಲ್ಲಿ ನೀಟ್‌ ಪರೀಕ್ಷೆ ಬರೆದ ಸಾಧಕಿ ಕುರಿತಾದ ‘ತನುಜಾ’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರವನ್ನು ನೋಡಿದ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಪ್ರತಿಕ್ಷಣವು ನಮ್ಮನ್ನ ಸೀಟಿನ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ರಿಯಲ್ ಕಥೆಯನ್ನು ರೀಲ್‌ನಲ್ಲಿ ತೋರಿಸಿದ್ದಾರೆ. ಡೈರೆಕ್ಷನ್ ಚೆನ್ನಾಗಿತ್ತು. ಈ ಸಿನಿಮಾವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳ್ಳೆಯದಾಗುವಂತಹ ಸಿನಿಮಾ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಹಿರಿಯ ಪತ್ರಕರ್ತರಾದ ವಿಶ್ವೇಶ್ವರಭಟ್‌ ಬಣ್ಣ ಹಚ್ಚಿದ್ದು, ಸಪ್ತಾ ಕಾವೂರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಥಮ್ ಅಭಿನಯದ 'ನಟ ಭಯಂಕರ' ಸಿನಿಮಾ ರಿಲೀಸ್: ಚಿತ್ರದ ಬಗ್ಗೆ ಸ್ಯಾಂಡಲ್ವುಡ್ ಸ್ಟಾರ್ಸ್ ಹೇಳಿದ್ದೇನು?