Asianet Suvarna News Asianet Suvarna News

ಪ್ರಥಮ್ ಅಭಿನಯದ 'ನಟ ಭಯಂಕರ' ಸಿನಿಮಾ ರಿಲೀಸ್: ಚಿತ್ರದ ಬಗ್ಗೆ ಸ್ಯಾಂಡಲ್ವುಡ್ ಸ್ಟಾರ್ಸ್ ಹೇಳಿದ್ದೇನು?

ಬಿಗ್‌ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿರುವಂತ ಚೊಚ್ಚಲ ಸಿನಿಮಾವೇ 'ನಟ ಭಯಂಕರ'. ಈ ಚಿತ್ರವು ಈ ವಾರ ಬಿಡುಗಡೆಯಾಗಿದ್ದು, ಸಿನಿಮಾವನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಮೊದಲ ಭಾಗ ಕಾಮಿಡಿಯಾಗಿದ್ದು, ಎರಡನೇ ಭಾಗ ಎಮೋಷನಲ್‌ ಆಗಿದೆ ಎಂದು ಸಿನಿಮಾ ನೋಡಿದ ಅಭಿಮಾನಿಗಳು ತಿಳಿಸಿದ್ದಾರೆ.

ಬಿಗ್‌ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿರುವಂತ ಚೊಚ್ಚಲ ಸಿನಿಮಾವೇ 'ನಟ ಭಯಂಕರ'. ಈ ಚಿತ್ರವು ಈ ವಾರ ಬಿಡುಗಡೆಯಾಗಿದ್ದು, ಸಿನಿಮಾವನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಮೊದಲ ಭಾಗ ಕಾಮಿಡಿಯಾಗಿದ್ದು, ಎರಡನೇ ಭಾಗ ಎಮೋಷನಲ್‌ ಆಗಿದೆ ಎಂದು ಸಿನಿಮಾ ನೋಡಿದ ಅಭಿಮಾನಿಗಳು ತಿಳಿಸಿದ್ದಾರೆ. ಜೊತೆಗೆ ಸ್ಯಾಂಡಲ್ವುಡ್ ಸ್ಟಾರ್ಸ್‌ಗಳು ಸಹ ಪ್ರಥಮ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಎರಡು ಕತೆಗಳಿದ್ದು, ತುಂಬಾ ಅಹಂಕಾರ ಇರುವ ಒಬ್ಬ ವ್ಯಕ್ತಿ ಒಬ್ಬರಿಗೆ ಮಾತು ಕೊಟ್ಟ ಮೇಲೆ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಒಂದು ಕತೆಯಾದರೆ, ಇನ್ನೊಂದು ಸ್ಟುಪಿಡ್‌ ಸೂಪರ್‌ ಸ್ಟಾರ್‌ ಹಾಗೂ ಕುರಿಡಿ ದೆವ್ವದ ನಡುವೆ ನಡೆಯುವ ಪ್ರೇಮ ಕತೆ. ಇವೆರಡನ್ನೂ ಒಟ್ಟಿಗೆ ತೆರೆ ಮೇಲೆ ನೋಡಬಹುದಾಗಿದೆ. ಸಿನಿಮಾದಲ್ಲಿ ಪ್ರಥಮ್‌ಗೆ ನಾಯಕಿಯಾಗಿ ಫ್ರಾನ್ಸ್‌ನ ನಿವಾಸಿ ನಿಹಾರಿಕಾ ನಟಿಸಿದ್ದಾರೆ. ಹಾಗೆಯೇ ಚಂದನಾ ಪ್ರಮುಖ ಪಾತ್ರ ಮಾಡಿದ್ದಾರೆ. 

Nawazuddin Siddiqui: ಪತ್ನಿಗೆ ಊಟ ಕೊಡದೆ ಚಿತ್ರಹಿಂಸೆ ಕೊಟ್ಟ ಬಾಲಿವುಡ್ ಸ್ಟಾರ್ ಹೀರೋ!