ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.
 

Share this Video
  • FB
  • Linkdin
  • Whatsapp

ಕಲಬುರಗಿ(ಜು.31): ಆಕೆ 68 ವರ್ಷದ ಅಜ್ಜಿ... ತನ್ನವರು ಅಂತ ಯಾರೂ ಇಲ್ಲ.. ಆದ್ರೂ ತನ್ನ ಏರಿಯದಲ್ಲಿರೋರಿಗೆಲ್ಲಾ ಬಡ್ಡಿಗೆ ದುಡ್ಡು ಕೊಡ್ತಿದ್ದಳು.. ಕಷ್ಟ ಅಂತ ಬಂದ್ರೆ ಹಿಂದೆ ಮುಂದೆ ನೋಡದೇ ಸಾಲ ಕೊಡ್ತಿದ್ದಳು. ಅಂಥಹ ಅಜ್ಜಿ ಆವತ್ತು ಇದ್ದಕ್ಕಿದ್ದಂತೆ ಮಿಸ್ಸಿಂಗ್​​​​.. ಎಲ್ಲಿ ಹುಡುಕಿದ್ರೂ ಅವಳ ಸುಳಿವು ಸಿಕ್ಕಿರಲಿಲ್ಲ.. ಪರಿಸ್ಥಿತಿ ಹೀಗಿರವಾಗ್ಲೇ ಆಕೆಯ ಸಾವಿನ ಸುದ್ದಿ ಬಂದಿತ್ತು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಬೆಂಕಿ ಹಾಕಿ ಸುಟ್ಟುಬಿಟ್ಟಿದ್ದ.. ಒಂದೇ ಒಂದು ಕ್ಲೂ ಆ ಮರ್ಡರ್​ ಕೇಸ್​ನಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ.. ಆದ್ರೆ ಛಲಬಿಡದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಅಜ್ಜಿಯನ್ನ ಕೊಂದಿದ್ಯಾರು..? ಬಡ್ಡಿ ಬಸ್ಸಮ್ಮಳ ಕೊಲೆಯ ಹಿಂದಿನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಊರಿನವಿರಿಗೆಲ್ಲಾ ಬಡ್ಡಿಗೆ ದುಡ್ಡು ಕೊಟ್ರೂ.. ಈಕೆ ಮಾತ್ರ ಬೀದಿಯಲ್ಲಿ ಜೀವನ ಮಾಡ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕಿದ್ದಾಗೆ ಬಸಮ್ಮ ಹೆಣವಾಗಿ ಬಿಡ್ತಾಳೆ.. ಹಂತಕ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್​ ಹಾಕಿ ಸುಟ್ಟುಬಿಟ್ಟಿರುತ್ತಾನೆ.

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ಬಡ್ಡಿಗೆ ದುಡ್ಡು ಕೊಡ್ತಿದ್ದ ಬಸಮ್ಮ ಅವನೊಬ್ಬನಿಗೆ ತನ್ನ ಬಳಿ ಇದ್ದ ಒಡವೆಯನ್ನೇ ಕೊಟ್ಟು ಬಿಟ್ಟಿದ್ಲು.. ಆತ ಆಕೆಯ ಒಡವೆಗಳನ್ನೆಲ್ಲಾ ಡವಿಟ್ಟು ಲಕ್ಷ ಲಕ್ಷ ಣ ಪಡೆದಿದ್ದ.. ಆದ್ರೆ ನಾಲ್ಕು ತಿಂಗಳ ನಂತರ ಬಸಮ್ಮ ತನ್ನ ಒಡವೆಯನ್ನ ವಾಪಸ್​​ ಕೇಳ್ತಾಳೆ.. ಆದ್ರೆ ಈತನಿಗೆ ಮಾತ್ರ ವಾಪಸ್​ ಕೊಡೋದಕ್ಕೆ ಮನಸ್ಸಾಗೋದಿಲ್ಲ.. ಆಕೆಯನ್ನೇ ಮುಗಿಸಿಬಿಟ್ರೆ ಒಡವೆಯೂ ಉಳಿಯುತ್ತೆ. ಆಕೆಯ ಕಾಟವೂ ಇರೋದಿಲ್ಲ ಅಂತ ತಿಳಿದು ಆಕೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿಕೊಂಡು ದೇವಸ್ಥಾನಕ್ಕೆ ಹೋಗೋಣ ಅಂತ ಹೇಳಿ ಆಕೆಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಹೋಗ್ತಾನೆ.. ಹೋಗುವಾಗ ಪೆಟ್ರೋಲ್​​ ಕೂಡ ಖರೀದಿಸಿ ತೆಗೆದುಕೊಂಡು ಹೋಗ್ತಾನೆ.. ಇವನನ್ನ ನಂಬಿ ಹೋದ ಬಸಮ್ಮ ಹೆಣವಾಗಿ ಹೋಗ್ತಾಳೆ.

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.

Related Video