
ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ದ್ರಾವಿಡ ಸಿದ್ಧಾಂತದ ಜೊತೆಗೆ ಸಾಫ್ಟ್ ಹಿಂದುತ್ವದ ಅಸ್ತ್ರ ಬಳಸುತ್ತಿರುವ ಅವರು, ದೇವಸ್ಥಾನದ ಹಣವನ್ನು ದುರ್ಬಳಕೆ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡೆ ಡಿಎಂಕೆ, ಎಐಎಡಿಎಂಕೆ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.
45 ದಿನಗಳ ದಳಪತಿ ದರ್ಬಾರ್.. ತಮಿಳುನಾಡಲ್ಲಿ ಭೂಕಂಪ! ಜನರ ದುಡ್ಡು ಮುಟ್ಟಲ್ಲ. ಮುಟ್ಟಲು ಬಿಡಲ್ಲ.. ಮುಟ್ಟಿದವರನ್ನೂ ಬಿಡಲ್ಲ! ದೇವಸ್ಥಾನದ ದುಡ್ಡು ಮುಟ್ಟಂಗಿಲ್ಲ. ಸರ್ಕಾರ್ ಶಾಸನ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ? ತಮಿಳುನಾಡು ರಾಜಕೀಯವೇ ಹೊಸ ದಿಕ್ಕಿಗೆ ಹೊರಳುತ್ತಿದ್ದೆ. ಅದಕ್ಕೆ ಕಾರಣ ದಳಪತಿ ವಿಜಯ್. ನಾವು ಪೆರಿಯಾರ್ ಫಾಲೋವರ್ಸ್ ಅಂತ ಹೇಳಿಕೊಳ್ತಲೇ ಸಾಫ್ಟ್ ಹಿಂದುತ್ವದ ಅಸ್ತ್ರವನ್ನೂ ದಳಪತಿ ಝಳಪಿಸ್ತಾಯಿದ್ದಾರೆ. ದೇವಸ್ಥಾನಗಳ ದುಡ್ಡನ್ನ ಬೇರೆ ಕೆಲಸಗಳಿಗೆ ಮುಟ್ಟಂಗಿಲ್ಲ ಅಂತ ಖಡಕ್ ಆದೇಶವನ್ನೂ ಹೊರಡಿಸಿದ್ದಾರೆ. ಹಾಗಿದ್ರೆ ದ್ರಾಡಿನ ನೆಲದಲ್ಲಿ ದ್ರಾವಿಡ ಸಿದ್ಧಾಂತದ ಜೊತೆಗೆ ಇದೇನಿದು ಸಾಫ್ಟ್ ಹಿಂದುತ್ವ..? ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಎಲ್ಲಾ ಎದುರಾಳಿಗಳಿಗೂ ಒಟ್ಟೊಟ್ಟಿಗೆ ಚೆಕ್ಮೇಟ್ ಹೇಳ್ತಿರೋದು ಹೇಗೆ ದಳಪತಿ ವಿಜಯ್.?
ವಿಜಯ್ಗೆ ರಾಜಕೀಯ ಅನುಭವ ಕಡಿಮೆ ಇರ್ಬೋದು. ಆದ್ರೆ ತಮಿಳುನಾಡಿನಲ್ಲಿ ಅವರಾಡ್ತಿರೋ ರಾಜಕೀಯ ಚದುರಂಗ ಮಾತ್ರ ಎದುರಾಳಿಗಳ ನಿದ್ದೆಗೆಡಿಸಿರೋದು ಸುಳ್ಳಲ್ಲ. ಯಾಕೆಂದ್ರೆ ದ್ರಾವಿಡ ಸಿದ್ಧಾಂತ ಹಾಗೂ ಸಾಫ್ಟ್ ಹಿಂದುತ್ವ ಎರಡನ್ನೂ ಒಟ್ಟಿಗೆ ಬ್ರಹ್ಮಾಸ್ತ್ರದ ರೀತಿ ಬಳಸಿಕೊಳ್ತಿದ್ದಾರೆ ವಿಜಯ್. ತಮಿಳುನಾಡಿನಲ್ಲಿ ಹಿಂದುತ್ವದ ವಿಚಾರವಾಗಿ ವಿಜಯ್ ಬ್ಯಾಲೆನ್ಸಿಂಗ್ ರಾಜಕಾರಣ ನಡೆಸ್ತಾಯಿದ್ದಾರೆ. ಅದೊಂದು ವಿವಾದದಲ್ಲಿ ದಳಪತಿ ತೆಗೆದುಕೊಂಡಿರುವ ನಿಲುವೇ ಇದಕ್ಕೆ ಸಾಕ್ಷಿ.