ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?

Krishi Thapanda: ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್​​​​ ! - ಗೆಳತಿ ಮನೆಯಲ್ಲಿ ವೈಶಾಖ್​​ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್​.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ..

Share this Video
  • FB
  • Linkdin
  • Whatsapp

ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್​​​​ ! - ಗೆಳತಿ ಮನೆಯಲ್ಲಿ ವೈಶಾಖ್​​ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್​.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ.. ಅಂತ್ಯಕ್ರಿಯೆ ಮಿಸ್​​​.. ತಲೆ ಚಚ್ಚಿಕೊಂಡ ತಾಪಂಡ ! - ಇದೇ ಈ ಹೊತ್ತಿನ ವಿಶೇಷ ಸೂಸೈಡ್​​ ಸುತ್ತ ಕೃಷಿ ತಾಪಂಡ. ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಕಳೆದ ಎರಡ್ಮೂರು ವರ್ಷಗಳಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ತಾನೆ ಇದ್ದಾರೆ.. ಇದೀಗ ಗೆಳೆಯನ ಆತ್ಮ*ಹ*ತ್ಯೆ ಪ್ರಕರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಕೃಷಿಯ ಮಾಜಿ ಸ್ನೇಹಿತ ಅರವಿಂದ್​​​ ರೆಡ್ಡಿ ಬೆದರಿಕೆ ಕೇಸ್​​ನಲ್ಲಿ ಜೈಲು ಸೇರಿದ್ದ ವೈಶಾಖ್​​ ಇದೀಗ ಆತ್ಮ*ಹ*ತ್ಯೆ ಮಾಡ್ಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದು ಕೂಡ ಕೃಷಿ ತಾಪಂಡ ಮನೆಯಲ್ಲಿ.. ಈ ಆತ್ಮ*ಹ*ತ್ಯೆ ಹಿಂದಿನ ರಿಯಲ್​ ಸ್ಟೋರಿಗಳು ಏನೇನು? ಹೌದು, ಕೃಷಿ ವೈಶಾಖ್​​ ಇಬ್ಬರ ಸ್ನೇಹ ಮುಂದ್ವರೆದಿದ್ರೆ ಯಾರಿಗೂ ಅಭ್ಯಂತರವಿರಲಿಲ್ಲ.. ಆದ್ರೆ, ಈ ಸ್ನೇಹದ ಗಾಢ ಎಷ್ಟಿತ್ತು ಅಂದ್ರೆ.. ರೆಡ್ಡಿಗೆ ವಾರ್ನಿಂಗ್​​ ಮಾಡುವವರೆಗೂ ಬೆಳೆಯಿತು. ಕೃಷಿ ತಾಪಂಡ - ವೈಶಾಖ್​​ ಸ್ನೇಹ ಜಗತ್ತಿಗೆ ಗೊತ್ತಾಗಿದ್ದೆ ಅರವಿಂದ್​ ರೆಡ್ಡಿಗೆ ಬಂದ ಆ ಒಂದು ಬೆದರಿಕೆಯಿಂದಾಗಿ.. ಅದಾಗಲೇ ರೆಡ್ಡಿ ವಿಚಾರಕ್ಕೆ ವಿವಾದ ಮಾಡ್ಕೊಂಡಿದ್ದ ತಾಪಂಡ ಮತ್ತೊಂದು ವಿವಾದವನ್ನು ಮೈಮೇಲೆ ಎಳ್ಕೊಂಡಿದ್ದಳು.. ಇದ್ರಿಂದಾಗಿ ವೈಶಾಖ್​​​​ ವೈಯಕ್ತಿಕ ಬದುಕ ಮೂರಾಬಟ್ಟೆಯಾಗಿದ್ದು ಮಾತ್ರವಲ್ಲ.

ಆತ್ಮ*ಹ*ತ್ಯೆವರೆಗೂ ಬಂದು ನಿಲ್ತು. ಕೃಷಿ ತಾಪಂಡ ಬುದುಕು ಈಗ ಹೇಗಾಗಿದೆ ನೋಡಿ.. ಆದ್ರೆ, ಆಕೆಯ ಬದುಕು ಎಷ್ಟು ಸಂದರವಾಗಿತ್ತು.. ಏನೆಲ್ಲಾ ಇತ್ತು ಏನೆಲ್ಲಾ ಕಳ್ಕೊಂಡಿದ್ದಾಳೆ. ಕೃಷಿ ತಾಪಂಡ.. ಸ್ಯಾಂಡಲ್​​ವುಡ್​​ ಗ್ಲಾಮರಸ್​​​ ನಟಿ.. ವೃತ್ತಿ ಬದುಕಿನಲ್ಲಿ ಎತ್ತರಕ್ಕೆ ಬೆಳೆಯುತ್ತಿರುವಾಗಲೇ ಮಾಡಬಾರದ್ದನ್ನ ಮಾಡ್ಕೊಂಡು ಮೂಲೆಗುಂಪಾಗುವಂತೆ ಆಗೋಗಿದೆ.. ಇದೀಗ ಸ್ನೇಹಿತನ ಆತ್ಮ*ಹ*ತ್ಯೆ ಪ್ರಕರಣವೂ ಆಕೆಯ ಸುತ್ತಲೆ ಸುತ್ತುತ್ತಿದೆ.. ಆದ್ರೆ, ಆಕೆಯ ಸ್ಯಾಂಡಲ್​​ವುಡ್​​ ಬದುಕು ಹೇಗಿತ್ತು ಅನ್ನೋದನ್ನ ಈ ಸಂದರ್ಭದಲ್ಲಿ ನೀವು ನೋಡಲೇಬೇಕಿದೆ.

Related Video