ಅವನ ಹೆಣ ಹಾಕಿದ್ದು ಅಣ್ಣ-ತಮ್ಮಂದಿರು..! ಜಮೀನಿಗಾಗಿ ಅಣ್ಣನನ್ನೇ ಕೊಂದು ಬಿಟ್ಟರಾ..?

ನಮಾಜ್ ಮುಗಿಸಿ ಹೋಗುತ್ತಿದ್ದವನಿಗೆ ಮಚ್ಚಿನೇಟು..!
ಅವನ ಆಸ್ತಿಯನ್ನು ಅವನು ಪಡೆದಿದ್ದೇ ತಪ್ಪಾಯ್ತು..!
ನಡು ರಸ್ತೆಯಲ್ಲೇ ಹೆಣವಾದ KEB ಬಿಲ್ ಕಲೆಕ್ಟರ್

Share this Video
  • FB
  • Linkdin
  • Whatsapp


ಅವನು KEBಯಲ್ಲಿ ಬಿಲ್ ಕಲೆಕ್ಟರ್. ತಾನು ಕೆಲಸ ಮಾಡ್ತಿದ್ದ ಗ್ರಾಮದಲ್ಲಿ ಕರೆಂಟ್ ಬಿಲ್ ಕಲೆಕ್ಟ್ ಮಾಡೋದು ಸಂಜೆಯಾಗ್ತಿದ್ದಂತೆ ಹಣವನ್ನ ತೆಗೆದುಕೊಂಡು ಹೋಗಿ ಆಫೀಸ್‌ನಲ್ಲಿ ಅದನ್ನ ಕಟ್ಟೋದು. ಇದೇ ಅವನ ಕಾಯಕ. ಆದ್ರೆ ಆವತ್ತೊಂದು ದಿನ ಇದೇ ಬಿಲ್ ಕಲೆಕ್ಟರ್ (Bill collector)ಹಣವನ್ನ ತನ್ನ ಕಚೇರಿಗೆ ಜಮೆ ಮಾಡಿ ವಾಪಸ್ ಆಗುತ್ತಿದ್ದಾಗಲೇ ಆತ ನಾಪತ್ತೆಯಾಗಿದ್ದ. ಎಲ್ಲಿ ಹೋದ ಅಂತ ಹುಡುಕುವಾಗ್ಲೇ ಆತನ ಡೆಡ್ ಬಾಡಿ ತನ್ನ ಗ್ರಾಮದ ಪಕ್ಕದಲ್ಲೇ ಸಿಕ್ಕಿತ್ತು. ಮೊದಲು ಅದು ಆ್ಯಕ್ಸಿಡೆಂಟ್(Accident) ಅಂತ ಬಾವಿಸಲಾಗಿತ್ತು. ಆದ್ರೆ ನಂತರ ಗೊತ್ತಾಗಿದ್ದು ಅದು ಡೆಡ್ಲಿ ಮರ್ಡರ್. ರಜಾಕ್ ಸಹೋದರ ಬಂದು ನಾಲ್ಕು ಹೆಸರು ಹೇಳ್ತಿದ್ದಂತೆ ಪೊಲೀಸರು ಆಕ್ಟೀವ್ ಆದ್ರು. ಅವರನ್ನ ಅರೆಸ್ಟ್ ಮಾಡಲು ಮುಂದಾದ್ರು ಅದ್ರೆ ಅವರು ಎಸ್ಕೇಪ್ ಆಗಿದ್ರು. ಅವರು ಎಸ್ಕೇಪ್ ಆಗಿದ್ದಾರೆ ಅಂದ ಮೇಲೆ ಅವರೇ ರಜಾಕ್‌ನ ಕಥೆ ಮುಗಿಸಿದ್ದಾರೆ ಅನ್ನೋ ನಿರ್ದಾರಕ್ಕೆ ಬಂದ ಪೊಲೀಸರು(police) ಆ ನಾಲ್ವರಿಗೆ ಬಲೆ ಬೀಸಿದ್ರು. ಆದ್ರೆ ರಜಾಕ್‌ನ ಸಹೋದರನೇ ಪೊಲೀಸರಿಗೆ ಒಂದು ಸುಳಿವು ಕೊಟ್ಟಿದ್ದ. 7 ಎಕರೆ ಜಮೀನಿನ ಕಥೆ ಹೇಳಿದ್ದ. ಇನ್ನೂ ಆತ ಹೇಳಿದ ಆ್ಯಂಗಲ್‌ನಲ್ಲೇ ತನಿಖೆ ನಡೆಸಿದ ಪೊಲೀಸರಿಗೆ ಹಂತಕರ ಸುಳಿವು ಸಿಕ್ಕಿತ್ತು. ಅಷ್ಟೇ ಅಲ್ಲ ಆವತ್ತು ರಾತ್ರಿ ಬ್ರಿಡ್ಜ್ ಮೇಲೆ ನಡೆದ ಕೊಲೆಯನ್ನ ಕಣ್ಣಾರೆ ಕಂಡಿದ್ದ ಕೆಲವರೂ ಸಾಕ್ಷಿ ಹೆಳೋದಕ್ಕೆ ರೆಡಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಗಾಜಾ ಗಡಿಯಲ್ಲಿ ಯಾವ ಪರಿಸ್ಥಿತಿ ಇದೆ ? ಲೆಬನಾನ್‌ ಗಡಿಯಲ್ಲಿ ಇಸ್ರೇಲಿಗರ ಸ್ಥಿತಿ ಹೇಗಿದೆ ?

Related Video