
Central Jail Expose: ಸಹ ಕೈದಿಗಳನ್ನು ನಗ್ನಗೊಳಿಸಿ ಥಳಿಸಿದರೂ ಅಧಿಕಾರಿಗಳು ಗಪ್‌ಚುಪ್!
ಪರಪ್ಪನ ಅಗ್ರಹಾರದ (Central Jail) ಕರ್ಮಕಾಂಡ ಇಲ್ಲಿಗೇ ಮುಗಿದಿಲ್ಲ. ಜೈಲಲ್ಲಿ ಕೈದಿಗಳು ಆಡಿದ್ದೇ ಆಟ, ಮಾಡಿದ್ಧೇ ರೂಲ್ಸ್ ಆಗಿದೆ. ಗಾಂಜಾ ಕೇಸಲ್ಲಿ ಜೈಲು ಸೇರಿದ ಡಿಜೆ ಹಳ್ಳಿಯ ಮುಬಾರಕ್ ತಂಡ ಸಹಕೈದಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ರೂ ಪೊಲೀಸರು ಗಪ್‌ಚುಪ್ ಆಗಿದ್ದಾರೆ.
ಬೆಂಗಳೂರು (ಜ. 31): ಪರಪ್ಪನ ಅಗ್ರಹಾರ (Central Jail) ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಕುರಿತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ನಿರಂತರವಾಗಿ ಸುದ್ದಿಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು, ಈಗ ಹಿರಿಯ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ವಿಚಾರಣಾ ಸಮಿತಿ ರಚಿಸಿದೆ. ವರದಿ ಬಳಿಕ ಕಾನೂನು ಕ್ರಮ ಜರುಗಿಸುವುದಾಗಿ ಸಹ ಸರ್ಕಾರ ಹೇಳಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Asianet Suvarnanews Impact ಪರಪ್ಪನ ಅಗ್ರಹಾರ ಕರ್ಮಕಾಂಡ ಬಯಲಿಗೆ, ಜೈಲಿನ ಅಕ್ರಮ ತನಿಖೆಗೆ
ಪರಪ್ಪನ ಅಗ್ರಹಾರದ (Central Jail) ಕರ್ಮಕಾಂಡ ಇಲ್ಲಿಗೇ ಮುಗಿದಿಲ್ಲ. ಜೈಲಲ್ಲಿ ಕೈದಿಗಳು ಆಡಿದ್ದೇ ಆಟ, ಮಾಡಿದ್ಧೇ ರೂಲ್ಸ್ ಆಗಿದೆ. ಗಾಂಜಾ ಕೇಸಲ್ಲಿ ಜೈಲು ಸೇರಿದ ಡಿಜೆ ಹಳ್ಳಿಯ ಮುಬಾರಕ್ ತಂಡ ಸಹಕೈದಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ರೂ ಪೊಲೀಸರು ಗಪ್‌ಚುಪ್ ಆಗಿದ್ದಾರೆ. ಎಕ್ಸ್‌ಕ್ಲೂಸಿವ್ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.