Asianet Suvarna News Asianet Suvarna News

ಬ್ರೇಕಪ್ ಅನೌನ್ಸ್ ಮಾಡಿದ ಬಳಿಕವೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ರಾಕೇಶ್-ಶಮಿತಾ ಶಟ್ಟಿ

ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಾಯ್ ಫ್ರೆಂಡ್, ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದರು. ಬಿಗ್ ಬಾಸ್ ಒಟಿಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ಶಮಿತಾ ಡೇಟಿಂಗ್ ಮಾಡುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿರುವುದಾಗಿ ಬಹಿರಂಗ ಪಡಿಸಿದ್ದರು. ನಾನು ಮತ್ತು ರಾಕೇಶ್ ಇಬ್ಬರು ಜೊತೆಯಲ್ಲಿಲ್ಲ ಎಂದು ಶಮಿತಾ ಬಹಿರಂಗ ಪಡಿಸಿದ್ದರು. ಆದರೂ ಇಬ್ಬರು ಮತ್ತೆ ಒಟ್ಟೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರೇಕಪ್ ಮಾಡಿಕೊಂಡ ಜೋಡಿ ಒಟ್ಟೊಟ್ಟಿಗೆ ಓಡಾಡುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

Aug 9, 2022, 1:53 PM IST


ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಾಯ್ ಫ್ರೆಂಡ್, ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದರು. ಬಿಗ್ ಬಾಸ್ ಒಟಿಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ಶಮಿತಾ ಡೇಟಿಂಗ್ ಮಾಡುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿರುವುದಾಗಿ ಬಹಿರಂಗ ಪಡಿಸಿದ್ದರು. ನಾನು ಮತ್ತು ರಾಕೇಶ್ ಇಬ್ಬರು ಜೊತೆಯಲ್ಲಿಲ್ಲ ಎಂದು ಶಮಿತಾ ಬಹಿರಂಗ ಪಡಿಸಿದ್ದರು. ಆದರೂ ಇಬ್ಬರು ಮತ್ತೆ ಒಟ್ಟೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರೇಕಪ್ ಮಾಡಿಕೊಂಡ ಜೋಡಿ ಒಟ್ಟೊಟ್ಟಿಗೆ ಓಡಾಡುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಕಾರಣ, ಮ್ಯೂಸಿಕ್ ವಿಡಿಯೋ. ಹೌದು, ಇಬ್ಬರು ಸಂಗೀತ ಆಲ್ಬಮ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಡಿನ ಪ್ರಮೋಶನ್ ಮಾಡುತ್ತಿದ್ದಾರೆ ರಾಕೇಶ್ ಮತ್ತು ಶಮಿತಾ. ಈ ಸಂಗೀತ ವಿಡಿಯೋ ವಿಚಾರವಾಗಿ ಇಬ್ಬರು ಟಿ ಸಿರೀಸ್ ಆಫೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಮರಾ ಮುಂದೆ ಸಖತ್ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

Video Top Stories