ಸೆಲೆಬ್ರೆಟಿ ಬ್ರೇಕಪ್ ಲಿಸ್ಟ್‌ಗೆ ಮತ್ತೊಂದು ಜೋಡಿ ಸೇರ್ಪಡೆ? ವಿಚ್ಛೇದನ ಪಡೆಯುವ ಆತಂಕದಲ್ಲಿ ಮತ್ತೊಂದು ಸ್ಟಾರ್ ದಂಪತಿ..?

ಸೆಲೆಬ್ರೆಟಿಗಳ ಲೈಫ್‌ನಲ್ಲಿ ಇತ್ತೀಚೆಗೆ ಬ್ರೇಕಪ್ಸ್ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಇಲ್ಲೊಂದು ಸಮೀಕ್ಷೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೆ ಈ ಆರು ತಿಂಗಳಲ್ಲಿ ಬೆಸ್ಟ್ ಕಪಲ್ ಎನ್ನಿಸಿಕೊಂಡವರೇ ಬ್ರೇಕಪ್ ಮಾಡಿಕೊಂಡಿದ್ದು ನಿಜಕ್ಕೂ ಅಚ್ಚರಿಯ ವಿಚಾರವಾಗಿದೆ.

Share this Video
  • FB
  • Linkdin
  • Whatsapp

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಇಬ್ಬರೂ ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಈ ದಂಪತಿಗೆ ಅಗಸ್ತ್ಯ ಹೆಸರಿನ ಮಗ ಇದ್ದಾನೆ. ಈ ದಂಪತಿ ಕಳೆದ ಕೆಲ ತಿಂಗಳಿಂದ ದೂರವೇ ಇದ್ದರು. ಇವರು ವಿಚ್ಛೇದನಕ್ಕೆ(Divorce) ಕಾರಣ ರಿವೀಲ್ ಮಾಡಿಲ್ಲ. ಮೂರು ಬಾರಿ ಹಿಂದೂ, ಕ್ರಿಸ್ಚಇಯನ್ ಮತ್ತು ಮತ್ತೆ ಮಗ ಹುಟ್ಟಿದ ಮೇಲೂ ವಿವಾಹವಾಗಿದ್ದರು ಅದ್ಯಾಕೋ ಇಬ್ಬರ ನಡುವೆ ಬ್ರೇಕಪ್ (Break up) ಬಿರುಗಾಳೀ ಬೀಸಿದೆ. ನಿವೇದಿತಾ ಗೌಡ (Nivedita Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಬಿಗ್ ಬಾಸ್‌ನಲ್ಲಿ ಪರಸ್ಪರ ಭೇಟಿ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಕೋವಿಡ್ ಸಂದರ್ಭದಲ್ಲಿ ಇವರು ಮದುವೆ ಆಗಿದ್ದರು. ಕೆಲವೇ ವರ್ಷಗಳಲ್ಲಿ ಇವರು ವಿಚ್ಛೇದನ ಪಡೆದಿದ್ದಾರೆ. ಇವರ ಡಿವೋರ್ಸ್‌ಗೆ ಕಾರಣವನ್ನು ಇವರು ರಿವೀಲ್ ಮಾಡಿದ್ದಾರೆ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಾಗದೆ ಇರುವುದೇ ಇದಕ್ಕೆಲ್ಲ ಕಾರಣ. ಎಂದಿದ್ದಾರೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೋರ್ಟ್ ಇವರಿಗೆ ಇನ್ನೂ ಡಿವೋರ್ಸ್ ನೀಡಿಲ್ಲ. ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಇವರಿಬ್ಬರೂ ವಿಚ್ಛೇದನ ಪಡೆಯೋದು ಖಚಿತವಾಗಿದೆ.

ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಪಂಚೆ ಟ್ರೆಂಡ್ ಹುಟ್ಟುಹಾಕಿದ್ದೆ ಅಣ್ಣಾವ್ರು! ದಿಗಜ್ಜರು ಸಿನಿಮಾದ ಈ ಪಂಚೆ ಸೀನ್ ಮರೆಯುವಂತಿಲ್ಲ!

Related Video