'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?

ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಆಗಲಿಕ್ಕೆ ಇನ್ನೂ ಜಸ್ಟ್ 9 ದಿನ ಬಾಕಿ ಇವೆ. ರಿಲೀಸ್ ಗೂ ಮುನ್ನ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದ್ದು, ಅದನ್ನ ಖುದ್ದು ದರ್ಶನ್ ವಾಯ್ಸ್ ನಲ್ಲಿ ಅನೌನ್ಸ್ ಮಾಡಲಾಗಿದೆ. ‘ನಾನ್ ಬರ್ತಿದ್ದೀನಿ ಚಿನ್ನಾ' ಅಂತ ದರ್ಶನ್ ಹೇಳಿರೋದು ಹೊಸ ಅರ್ಥ ಕೊಡ್ತಾ ಇದೆ.’

Share this Video
  • FB
  • Linkdin
  • Whatsapp

ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಆಗಲಿಕ್ಕೆ ಇನ್ನೂ ಜಸ್ಟ್ 9 ದಿನ ಬಾಕಿ ಇವೆ. ರಿಲೀಸ್ ಗೂ ಮುನ್ನ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದ್ದು, ಅದನ್ನ ಖುದ್ದು ದರ್ಶನ್ ವಾಯ್ಸ್ ನಲ್ಲಿ ಅನೌನ್ಸ್ ಮಾಡಲಾಗಿದೆ. ನಾನ್ ಬರ್ತಿದ್ದೀನಿ ಚಿನ್ನಾ ಅಂತ ದರ್ಶನ್ ಹೇಳಿರೋದು ಹೊಸ ಅರ್ಥ ಕೊಡ್ತಾ ಇದೆ.

‘ನಾನ್ ಬರ್ತಿದ್ದೀನಿ ಚಿನ್ನಾ..’ ದಾಸನ ಸಂದೇಶ
ಯೆಸ್ ದರ್ಶನ್ ಕಡೆಯಿಂದ ಫ್ಯಾನ್ಸ್​​ಗೆ ಒಂದು ಸಂದೇಶ ಬಂದಿದೆ. ಅದನ್ನ ಕೇಳಿ ಫ್ಯಾನ್ಸ್ ಕುಣಿದಾಡೋದೊಂದೇ ಬಾಕಿ. ಅಂಥಾ ಖುಷ್ ಖಬರ್ ದಾಸ ಕೊಟ್ಟಾಗಿದೆ. 'ನಾನ್ ಬರ್ತಿದ್ದೀನಿ ಚಿನ್ನಾ' ಅಂತ ದರ್ಶನ್ ವಾಯ್ಸ್ ಕೇಳಿ ಫ್ಯಾನ್ಸ್​ಗೆ ನಿಜಕ್ಕೂ ಸಂತಸವಾಗಿದೆ.

‘ದಿ ಡೆವಿಲ್’ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್
ಹೌದು ದರ್ಶನ್ ಬರ್ತಾ ಇರೋದು, ಜೈಲಿನಿಂದ ಹೊರಗಲ್ಲ. ಬದಲಾಗಿ ಬಿಗ್ ಸ್ಕ್ರೀನ್ ಮೇಲೆ. ದರ್ಶನ್ ಕಂಬಿ ಹಿಂದೆ ಇದ್ದರೇನಂತೆ ಬಿಗ್​ಸ್ಕ್ರೀನ್ ಮೇಲೆ ಕಲಾವಿದನಾಗಿ ರಂಜಿಸೋದಕ್ಕೆ ಬರ್ತಾ ಇದ್ದಾರೆ. ದಿ ಡೆವಿಲ್ ಮೂವಿ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಾ ಇದೆ. ಅದಕ್ಕೂ ಮುನ್ನ ಡಿಸೆಂಬರ್ 5ರಂದು ದಿ ಡೆವಿಲ್ ಟ್ರೈಲರ್ ಬರಲಿದೆ. ಅದನ್ನ ಖುದ್ದು ದಾಸನ ವಾಯ್ಸ್​​ ನಲ್ಲಿ ಅನೌನ್ಸ್ ಮಾಡಲಾಗಿದೆ.

ಹೇಗಿರುತ್ತೆ ಡೆವಿಲ್.. ಹಿಂಟ್ ಕೊಡಲಿದೆ ಟ್ರೈಲರ್
ಇದೂವರೆಗೂ ಬಂದಿರೋ ಡೆವಿಲ್ ಮೂವಿಯ ಟೀಸರ್, ಸಾಂಗ್ ಗಳ ಮೂಲಕ ಸಿನಿಮಾ ಹೇಗಿರಬಹುದು ಅನ್ನೋ ಸೂಚನೆ ಸಿಕ್ಕಿದೆ. ಇದೊಂದು ಪಕ್ಕಾ ಮಾಸ್ ಮಸಾಲ ಸಿನಿಮಾ ಅಂದಿದ್ದಾರೆ ನಿರ್ದೇಶಕ ಪ್ರಕಾಶ್.

ಆದ್ರೆ ಟೀಸರ್, ಸಾಂಗ್​ನಲ್ಲಿ ಕಥೆಯ ಗುಟ್ಟು ಮಾತ್ರ ಬಯಲಾಗಿಲ್ಲ. ಇದೀಗ ಟ್ರೈಲರ್ ಮೂಲಕ ಆ ಗುಟ್ಟು ರಟ್ಟಾಗ್ತಾ ಇದೆ. ದಾಸನ ಡೆವಿಲ್ ಅವತಾರ ಹೇಗಿರುತ್ತೆ ಅನ್ನೋದರ ಸೂಚನೆ ಸಿಗಲಿದೆ.

ದಿ ಡೆವಿಲ್​ಗೆ ಸುಧಾಕರ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಈ ಹಿಂದೆ ದರ್ಶನ್ ಜೊತೆಗೆ ತಾರಕ್ ಚಿತ್ರವನ್ನ ಮಾಡಿದ್ದ ಪ್ರಕಾಶ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಚನಾ ರೈ ದರ್ಶನ್ ಜೊತೆ ನಾಯಕಿಯಾಗಿ ಮಿಂಚಿದ್ದಾರೆ. ಮಹೇಶ್ ಮಾಂಜ್ರೆಕರ್, ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್ ಡೆವಿಲ್ ತಾರಾಗಣದಲ್ಲಿದ್ದಾರೆ. ಡೆವಿಲ್ ಇನ್ನೂ ಏನೇನಿದೆ ಗಮ್ಮತ್ತು ಅನ್ನೋದು 5ನೇ ತಾರೀಖು ಟ್ರೈಲರ್ ಮೂಲಕ ರಿವೀಲ್ ಆಗಲಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

Related Video