ಸ್ಯಾಂಡಲ್‌ವುಡ್‌ನಲ್ಲಿ ಪಂಚೆ ಟ್ರೆಂಡ್ ಹುಟ್ಟುಹಾಕಿದ್ದೆ ಅಣ್ಣಾವ್ರು! ದಿಗಜ್ಜರು ಸಿನಿಮಾದ ಈ ಪಂಚೆ ಸೀನ್ ಮರೆಯುವಂತಿಲ್ಲ!

ಅಂಬಾನಿ ಮಗನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೌತ್ ಸ್ಟಾರ್ ನಟರೇ ಪಂಚೆಯಲ್ಲಿ ಮಿಂಚಿದ್ದರು. ರಜಿನಿಕಾಂತ್,ಸೂರ್ಯ, ನಯನತಾರಾ ಪತಿ ಸೇರಿದಂತ ಎಲ್ಲರೂ ಪಂಚೆಯಲ್ಲಿ ಮಿಂಚಿದ್ದರು. ಆದರೆ ಇಲ್ಲಿ ಬೆಂಗಳೂರಿನ ಜಿಟಿ ಮಾಲ್‌ಗೆ ಪಂಚೆಯಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

First Published Jul 20, 2024, 11:45 AM IST | Last Updated Jul 20, 2024, 11:45 AM IST

ಎಲ್ಲಿ ಹೋದರೂ ಬಂದರೂ ಅಣ್ಣಾವ್ರು(Rajkumar) ರಿಯಲ್ ಲೈಫ್‌ನಲ್ಲಿ ಯಾವತ್ತೂ ಬಹಳ ಸರಳ . ಸರಳತೆಯ ಪ್ರತೀಕ ಪಂಚೆಯಾಗಿತ್ತು. ಸಿನಿಮಾಗಳಲ್ಲಷ್ಟೆ ಪ್ಯಾಂಟ್ ಧರಿಸುತ್ತಿದ್ದ ಅಣ್ಣಾವ್ರು ರಿಯಲ್ ಲೈಫ್‌ನಲ್ಲಿ ಯಾವಾಗಲೂ ಪ್ಯಾಂಟ್ ಧರಿಸುತ್ತಿರಲಿಲ್ಲ. ಪಂಚೆಯೇ ಉಡುತ್ತಿದ್ದರು. ಹಲವು ಸಿನಿಮಾಗಳಲ್ಲೂ ಅಣ್ಣಾವ್ರು ಪಂಚೆಯಲ್ಲೇ(Dhoti) ಕಾಣಿಸಿಕೊಂಡಿದ್ದರು. ಇನ್ನು ತಲೈವ ರಜಿನಿಕಾಂತ್(Rajinikanth) ಎಲ್ಲೆ ಹೋದರೂ ಬಂದರೂ ಪಂಚೆನೆ. ಅಂಬಾನಿ ಮದುವೆಯಲ್ಲೂ ಪಂಚೆಯಲ್ಲಿ ಮಿಂಚಿದ್ದರು ಸೂಪರ್‌ಸ್ಟಾರ್. ಸಿನಿಮಾಗಳಲ್ಲೂ ರಜಿನಿ ಪಂಚೆ  ಗತ್ತು ಗಮ್ಮತ್ತಿನಿಂದ ಕೂಡಿರುತ್ತದೆ. ಪಂಚೆ ಉಟ್ಟು ಸ್ಟೈಲಾಗಿ ರಜಿನಿ ನಡೆದು ಬರೋದೆ ಮಜವಾಗಿರುತ್ತದೆ. ಸಿನಿಮಾ ಪ್ರಮೋಷನ್‌ಗಳಲ್ಲಿ ಸಾಕಷ್ಟು ಬಾರಿ ಪಂಚೆ ಧರಿಸುವ ಮೂಲಕ ನಟ ರಿಷಬ್ ಶೆಟ್ಟಿಯವರು ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನನ್ನು ವಿಭಿನ್ನವಾಗಿಸಿದ್ದರಲ್ಲದೇ, ತಮ್ಮದೇ ಆದ ಸ್ಟೈಲ್‌ನನ್ನು ಹುಟ್ಟುಹಾಕಿ, ಟ್ರೆಂಡ್ ಸೆಟ್ ಮಾಡಿದ್ದಾರೆ. ಕಾಂತಾರ ಸಿನಿಮಾ ಪ್ರಚಾರವನ್ನೆಲ್ಲ ರಿಷಬ್ ಪಂಚೆಯಲ್ಲೆ ಮಾಡಿದ್ದು ವಿಶೇಷ. 

ಇದನ್ನೂ ವೀಕ್ಷಿಸಿ:  ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೈಲು ಕಹಾನಿ! ಜೈಲಿನಲ್ಲಿ ಪ್ರಜ್ವಲ್-ದರ್ಶನ್ ದೋಸ್ತಿ ಮಾತುಕತೆ!

Video Top Stories