ಡಿವೋರ್ಸ್ ಪೋಸ್ಟ್‌ಗೆ ಅಭಿಷೇಕ್ ಬಚ್ಚನ್ ಲೈಕ್ಸ್..! ಐಶ್ವರ್ಯಗೆ ವಿಚ್ಛೇಧನ ಕೊಡೋಕೆ ರೆಡಿಯಾದ್ರಾ ಅಭಿಷೇಕ್..?

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ವಿಚಾರಕ್ಕೆ ಭಾರೀ ಸುದ್ದಿ ಆಗ್ತಿದ್ದಾರೆ. ಬಚ್ಚನ್ ಫ್ಯಾಮಿಲಿಯಲ್ಲಿ ಏನೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇದೆಲ್ಲದರ ನಡುವೆ ಡಿವೋರ್ಸ್ ಪೋಸ್ಟ್‌ಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

First Published Jul 19, 2024, 10:52 AM IST | Last Updated Jul 19, 2024, 10:52 AM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಐಶ್ವರ್ಯಾ (Aishwarya Rai) ತಮ್ಮ ಮಗಳು ಆರಾಧ್ಯ ಅವರೊಂದಿಗೆ ಏಕಾಂಗಿಯಾಗಿ ಕಾಣಿಸಿಕೊಂಡಿದ್ರು. ಅನಂತ್ ಅಂಬಾನಿ ಮದುವೆಯಲ್ಲಿ (Ambani house wedding) ಎಲ್ಲರೂ ತಮ್ಮ ತಮ್ಮ ಫ್ಯಾಮಿಲಿ ಜೊತೆ ಫೋಟೋಗೆ ಪೋಸ್ ಕೊಟ್ರೆ ಐಶ್ವರ್ಯ ರೈ ಮಾತ್ರ ಪತಿ ಅಭಿಷೇಕ್, ಅಮಿತಾ ಬಚ್ಚನ್, ಅತ್ತೆ ಜಯಾ ಬಚ್ಚನ್‌ರನ್ನ ಬಿಟ್ಟು ಮಗಳು ಆರಾಧ್ಯ ಜೊತೆ ಮಾತ್ರ ಬಂದು ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಆ ಬಳಿಕ ಬಚ್ಚನ್ ಫ್ಯಾಮಿಲಿಯಲ್ಲಿ ಗೊಂದಲ ಗಲಾಟೆಯಾಗಿರುವುದು ಪಕ್ಕಾ ಎನ್ನಲಾಗ್ತಿದೆ. ಇದರ ನಡುವೆ ಮತ್ತೆ ಐಶ್-ಅಭಿಷೇಕ್ (Abhishek Bachchan) ವಿಚ್ಛೇದನ (Divorce) ವಿಚಾರ ಚರ್ಚೆ ಆಗ್ತಿದೆ. ಅಂಬಾನಿ ಮನೆ ಮದುವೆ ಸಂಭ್ರಮದ ಬಳಿಕ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ಮತ್ತು ಮಗಳೊಂದಿಗೆ ವಿದೇಶಕ್ಕೆ ಹಾರಿದ್ರು. ಈ ವೇಳೆ ಕೂಡ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳಲಿಲ್ಲ. ಐಶ್ವರ್ಯಾ ಮನೆಯಿಂದ ಹೊರಗಿರುವ ಸಮಯದಲ್ಲಿ ಅಭಿಷೇಕ್ ಬಚ್ಚನ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಲೈಕ್ ಮಾಡುವ ಮೂಲಕ ಎಲ್ಲರ ಗಮನ ತನ್ನಕಡೆ ತಿರುಗುವಂತೆ ಮಾಡಿದ್ದಾರೆ. ಈ ಪೋಸ್ಟ್ ವಿಚ್ಛೇದನದ ತೊಂದರೆಗಳು ಮತ್ತು ಹೆಚ್ಚುತ್ತಿರುವ ‘ಗ್ರೇ ಡೈವೋರ್ಸ್’ ಟ್ರೆಂಡ್ ಕುರಿತದ್ದಾಗಿದೆ. ಅಭಿಶೇಕ್ ಈ ಪೋಸ್ಟ್‌ಗೆ ಲೈಕ್ ಕೊಟ್ಟಿದ್ದಾರೆ. ಅಭಿಷೇಕ್ ಬಚ್ಚನ್ ಲೈಕ್ ನೋಡಿದ ನೆಟ್ಟಿಗರು ಇದು ಅಭಿಷೇಕ್ ವೈಯಕ್ತಿಕ ಜೀವನಕ್ಕೆ ಹತ್ತಿರವಾದಂತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಲೇಖಕಿ ಹೀನಾ ಖಂಡೇವಾಲ ಹಾಕಿರೋ ಈ ಪೋಸ್ಟ್ ಡಿವೋರ್ಸ್‌ ಸಂಬಂಧಿಸಿದೆ. ಇದಕ್ಕೆ ಅವರು ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಡಿವೋರ್ಸ್ ಯಾರಿಗೂ ಸುಲಭ ಅಲ್ಲ. ಕೆಲವೊಮ್ಮೆ ನಾವು ನಿರೀಕ್ಷಿಸಿದಂತೆ ಜೀವನ ತೆರೆದುಕೊಳ್ಳುವುದಿಲ್ಲ.

ಇದನ್ನೂ ವೀಕ್ಷಿಸಿ:  'UI' ರಿಲೀಸ್‌ಗೆ ಫಿಕ್ಸ್ ಆಯ್ತಾ ದಿನಾಂಕ..? ಆ ದಿನದ ಮೇಲೆ ಕಣ್ಣಿಟ್ಟಿದ್ದಾರಾ ಉಪೇಂದ್ರ..?

Video Top Stories