
ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
ಪೃಥ್ವಿ ಅಂಬಾರ್ ಮತ್ತು ಧನ್ಯಾ ರಾಮ್‌ಕುಮಾರ್ ನಟನೆಯ 'ಚೌಕಿದಾರ್' ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ನವಿರಾದ ಪ್ರೇಮಕಥೆಯ ಜೊತೆಗೆ ತಂದೆಯ ಬಾಂಧವ್ಯದ ಭಾವನಾತ್ಮಕ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದು, ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಕೂಡ ಕಾಣಿಸಿಕೊಂಡಿದ್ದಾರೆ.
ಚೌಕಿದಾರ್ ಇವತ್ತು ರಾಜ್ಯಾದ್ಯಂತ ತೆರೆಗೆ ಬಂದಿರೋ ಸಿನಿಮಾ. ಪೃಥ್ವಿ ಅಂಬಾರ್, ‘ದೊಡ್ಮನೆ’ ಕುಡಿ ಧನ್ಯಾ ರಾಮ್‌ಕುಮಾರ್ ನಾಯಕ ನಾಯಕಿ ಆಗಿರೋ ಈ ಚಿತ್ರದಲ್ಲಿ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇವರೆಲ್ಲರ ಜೊತೆ ಗಿಲ್ಲಿ ನಟ ಕೂಡ ಚೌಕಿದಾರ್ ಜೊತೆ ಬರ್ತಾ ಇದ್ದಾನೆ. ತನ್ನ ಟ್ರೈಲರ್, ಸಾಂಗ್ಸ್ ಮೂಲಕ ಸದ್ದು ಮಾಡಿರೋ ಚೌಕಿದಾರ್ ಇವತ್ತು ಸಿನಿಪ್ರಿಯರ ಮುಂದೆ ಬಂದಿದ್ದಾನೆ. ಪೃಥ್ವಿ ಅಂಬಾರ್ ಮತ್ತು ಧನ್ಯಾ ರಾಮ್‌ಕುಮಾರ್ ನಾಯಕ ನಾಯಕಿಯರಾಗಿ ಮಿಂಚಿರೋ ಸಿನಿಮಾ ಇದು.
ನವಿರಾದ ಲವ್ ಸ್ಟೋರಿ ಜೊತೆಗೆ ಇಲ್ಲಿ ತಂದೆಯ ಸಂಬಂಧದ ಕುರಿತ ಭಾವನಾತ್ಮಕ ಎಳೆ ಕೂಡ ಇದೆ. ಸಾಯಿಕುಮಾರ್ ತಂದೆಯ ಪಾತ್ರ ಮಾಡಿದ್ದಾರೆ. ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಇನ್ನೂ ಚೌಕಿದಾರ್ ಸಿನಿಮಾದ ಮತ್ತೊಂದು ಆಕರ್ಷಣೆ ಅಂದ್ರೆ ಗಿಲ್ಲಿ ನಟ. ಹೌದು ಬಿಗ್ ಬಾಸ್ ವಿಜೇತ ಗಿಲ್ಲಿ, ಈ ಚಿತ್ರದ ಕಾಮಿಡಿ ಟ್ರ್ಯಾಕ್ ನಲ್ಲಿದ್ದಾನೆ.
ಬಿಗ್ ಬಾಸ್ನಿಂದ ಮನೆಮಾತಾದ ಗಿಲ್ಲಿಯನ್ನ ಈ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ಮೇಲೆ ನೋಡೋ ಚಾನ್ಸ್ ಸಿಕ್ತಾ ಇದೆ. ಗಿಲ್ಲಿಯ ಬಿಗ್ ಬಾಸ್ ಫೇಮ್ ಚೌಕಿದಾರ್ಗೆ ಪ್ಲಸ್ ಆಗುತ್ತಾ ಕಾದುನೋಡಬೇಕು.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.