'UI' ರಿಲೀಸ್‌ಗೆ ಫಿಕ್ಸ್ ಆಯ್ತಾ ದಿನಾಂಕ..? ಆ ದಿನದ ಮೇಲೆ ಕಣ್ಣಿಟ್ಟಿದ್ದಾರಾ ಉಪೇಂದ್ರ..?

ರಿಯಲ್ ಸ್ಟಾರ್ ಉಪೇಂದ್ರ ನಿದ್ದೆ ಮಾಡುತ್ತಿಲ್ಲ. ದಿನಕ್ಕೆ ಎರಡು ಮೂರು ಗಂಟೆ ರೆಸ್ಟ್ ಮಾಡಿದ್ರೆ ಹೆಚ್ಚು. ರಿಯಲ್ ಸ್ಟಾರ್ ಉಪ್ಪಿಯ ಯುಐ ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳಿದ್ದ ಮಾತು. ಯಾಕಂದ್ರೆ ಯುಐ ಸಿನಿಮಾದ ಕೆಲಸ ಅಷ್ಟೊಂದು ಫಾಸ್ಟ್ ಅಗಿ ನಡೀತಿದೆಯಂತೆ.

First Published Jul 19, 2024, 10:40 AM IST | Last Updated Jul 19, 2024, 10:40 AM IST

ಯುಐ ಸಿನಿಮಾ ಹಲವು ಸಪ್ಪ್ರೈಸ್‌ಗಳ ಹೂರಣ. ಒಂದೊಂದೇ ಸರ್ಪ್ರೈಸ್‌ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಟೀಸರ್(Teaser) ಕೊಟ್ಟ ಬಳಿಕ ಹಾಡು ಬಿಡುಗಡೆ ಮಾಡಿದ್ರು. ಹಾಡುಗಳು ಹಿಟ್ ಆಗಿವೆ. ಟ್ರೋಲ್ ಟ್ರೆಂಡ್ ಆಗ್ತಿವೆ. ಈ ಹೊತ್ತಲ್ಲಿ ಯುಐ ಬಿಡುಗಡೆ ಬಗ್ಗೆಯೂ ಟಾಕ್ ಎದ್ದಿದೆ. ಯುಐ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ ಅಂತ ಹೇಳಲಾಗ್ತಿದೆ. ಆ ದಿನದ ಮೇಲೆ ಉಪ್ಪಿ ಕಣ್ಣಿಟ್ಟಿದ್ದಾರಂತೆ. ಯಾವ್ದು ಆ ದಿನ ಅಂತ ಕೇಳಿದ್ರೆ, ಅದೇ ಉಪೇಂದ್ರ (Upendra) ಹುಟ್ಟುಹಬ್ಬದ ದಿನ. ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾವನ್ನ(UI movie) ಸೆಪ್ಟೆಂಬರ್‌ನಲ್ಲೇ ಬಿಡುಗಡೆ ಮಾಡೋ  ಆಲೋಚನೆ ಚಿತ್ರತಂಡಕ್ಕೆ ಬಂದಿದೆ. ಯಾಕಂದ್ರೆ ಸೆಪ್ಟೆಂಬರ್ 18 ಉಪೇಂದ್ರ ಹುಟ್ಟುಹಬ್ಬ(Birthday). ಹೀಗಾಗಿ, ಇದಕ್ಕೂ ಕೆಲವು ದಿನ ಮೊದಲು ಸಿನಿಮಾನ ರಿಲೀಸ್ ಮಾಡೋ ಆಲೋಚನೆ ಮಾಡಿದ್ದು, ಸದ್ಯದ ಪ್ಲ್ಯಾನ್ ಪ್ರಕಾರ ಸೆಪ್ಟೆಂಬರ್ 9ರಂದು ಯುಐ ರಿಲೀಸ್ ಆಗಲಿದೆ ಅಂತ ಹೇಳಲಾಗ್ತಿದೆ. ಆದ್ರೆ ಅಫೀಷಿಯಲ್ ಆಗಿ ಇನ್ನೂ ಅನೌನ್ಸ್ ಮಾಡಿಲ್ಲ. ಯುಐನಲ್ಲಿ ಹಲವು ಸರ್ಪ್ರೈಸ್ ಇದೆ. ಕಲ್ಕಿ ಸಿನಿಮಾದಂತೆ ಈ ಸಿನಿಮಾದಲ್ಲೂ ಕಲ್ಕಿಕ ಅವತಾರದ ಸ್ಟೋರಿ ಇರಲಿದೆ ಅಂತ ಹೇಳಲಾಗ್ತಿದೆ. ಅಷ್ಟೆ ಅಲ್ಲ ಗಂಡ್ ಹೈಕ್ಳ ಮನದನ್ನೆ ಸನ್ನಿ ಲಿಯೋನ್ ಯುಐ ಗೆ ಎಂಟ್ರಿ ಕೊಟ್ಟಿದ್ದಾರೆ. ಕೆಪಿ ಶ್ರೀಕಾಂತ್ ಹಾಗು ಲಹರಿ ಸಂಸ್ಥೆ ಜಂಟಿಯಾಗಿ ನಿರ್ಮಿಸಿರೋ ಯುಐ ಟೀಸರ್ ರಿಲೀಸ್ ಆಗಿದ್ದು ಟೀಸರ್ ನೋಡುತ್ತಿದ್ರೆ ಉಪೇಂದ್ರ ಈ ಭಾರಿ ಫ್ಯಾಂಟಸಿ ಜಗತ್ತಿಗೆ ಎಂಟ್ರಿ ಕೊಟ್ಟಂತೆ ಕಾಣ್ತಿದೆ. ಯುಐ ಲೋಕಕ್ಕೆ ಜಿಗಿದ ಪ್ರೇಕ್ಷಕರು ವಾವ್ಹ್ ಎನ್ನುತ್ತಾರೆ. ಮೇಕಿಂಗ್ ಬಿಜಿಎಂ ಮೂಲಕ ಕಣ್ಮನ ಸೆಳೆಯೋ ಯುಐ ಡಾರ್ಕ್ ಥೀಮ್ ನಲ್ಲಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗುತ್ತೆ. ಹಾಗೇನಾದ್ರು ಸೆಪ್ಟೆಂಬರ್ನಲ್ಲಿ ಉಪ್ಪಿಯ ಯುಐ ಬಂದ್ರೆ ಫ್ಯಾನ್ಸ್ ಡಬಲ್ ಹಬ್ಬ ಮಾಡುತ್ತಾರೆ. ಒಂದು ಸಿನಿಮಾ ಹಬ್ಬ ಇನ್ನೊಂದು ಉಪ್ಪಿ ಹುಟ್ಟುಹಬ್ಬ.

ಇದನ್ನೂ ವೀಕ್ಷಿಸಿ:  'ಮಾರ್ಟಿನ್'ನಲ್ಲಿ ಬಹು ದೊಡ್ಡ ಸ್ಟಾರ್ ಕಾಸ್ಟ್..! ಈ ಸಿನಿಮಾದಲ್ಲಿ ಧ್ರುವ ಹೀರೋನಾ..? ವಿಲನ್ನಾ..?

Video Top Stories