ಇನ್‌ಸ್ಟಾದಲ್ಲಿ ಪರಿಚಯವಾಗಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಯಿತು. ಇಬ್ಬರದ್ದೂ ಒಂದೇ ಊರು. ಹೀಗಾಗಿ ಬೇಗನೆ ಆತ್ಮೀಯರಾಗಿದ್ದಾರೆ. 6 ತಿಂಗಳಿನಿಂದ ಒಟ್ಟಿಗೆ ವಾಸವಿದ್ದಾರೆ. ಇದೀಗ 20ರ ಹರೆಯದ ಯುವತಿಯನ್ನು ಕೊಲೆ ಮಾಡಲಾಗಿದೆ.
- Home
- News
- State
- Karnataka News Live ರಾಜ್ಯದಲ್ಲಿ ಈವರೆಗೆ ಶೇ.21ರಷ್ಟು ಭಾರೀ ಮುಂಗಾರು ಕೊರತೆ: ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್
Karnataka News Live ರಾಜ್ಯದಲ್ಲಿ ಈವರೆಗೆ ಶೇ.21ರಷ್ಟು ಭಾರೀ ಮುಂಗಾರು ಕೊರತೆ: ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಶೇ.21ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಕೂಡ ಕಡಿಮೆ ಬಿದ್ದಿರುವುದರಿಂದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಕಡಿಮೆಯಿರುವುದು ಆತಂಕ ಮೂಡಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.36ರಷ್ಟು ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಕರಾವಳಿಯಲ್ಲೂ ಶೇ.41ರಷ್ಟು ಕಡಿಮೆ ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಕ್ರಮವಾಗಿ ಶೇ.2 ಮತ್ತು ಶೇ.1ರಷ್ಟು ಕಡಿಮೆ ಮಳೆಯಾಗಿದೆ.
Karnataka News Live 16 June 2026ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್
Karnataka News Live 16 June 2026Chanakya Niti - ಸ್ಮಶಾನ ಮಾತ್ರವಲ್ಲ, ಈ ಸ್ಥಳಗಳಿಂದ ವಾಪಸ್ ಬರುವಾಗ ತಿರುಗಿ ನೋಡಲೇಬಾರದು ಅಂತಾರೆ ಚಾಣಕ್ಯ!
Chanakya Wisdom: ಚಾಣಕ್ಯ ನೀತಿಯ ಪ್ರಕಾರ, ಕೆಲವು ಸ್ಥಳಗಳಿಗೆ ಭೇಟಿ ನೀಡಿ ಹಿಂತಿರುಗುವಾಗ ನಾವು ಮತ್ತೆ ತಿರುಗಿ ನೋಡಬಾರದು. ಹಾಗೆ ನೋಡಿದರೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಆ ಸ್ಥಳಗಳು ಯಾವುವು ಎಂದು ಈಗ ನೋಡೋಣ…
Karnataka News Live 16 June 2026Escalator Facts - ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಯಾಕಿರುತ್ತೆ? ಖಂಡಿತ ಧೂಳು ಒರೆಸೋಕೆ ಅಲ್ಲ!
Escalator Safety: ಎಸ್ಕಲೇಟರ್‌ನಲ್ಲಿ ಹೋಗುವಾಗ ಅದರ ಬದಿಯಲ್ಲಿರುವ ಬ್ರಷ್‌ಗಳನ್ನು ನೀವು ನೋಡಿರಬಹುದು. ಹೆಚ್ಚಿನವರು ಇದನ್ನು ಶೂ ಕ್ಲೀನ್ ಮಾಡಲು ಅಥವಾ ಧೂಳು ತೆಗೆಯಲು ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ.
Karnataka News Live 16 June 2026ಮಳೆ ಕೊರತೆ - ಕರಾವಳಿ ರೈತರಿಗೆ ಆತಂಕ, ಭತ್ತ ಉತ್ಪಾದನೆ ಕುಸಿತ ಭೀತಿ, ಮುಗಿಲು ನೋಡುತ್ತಾ ಕುಳಿತ ರೈತ!
Karnataka News Live 16 June 2026ಬ್ಯಾಲೆನ್ಸ್ ಕಳೆದುಕೊಂಡ Rapido Bike Pink ಲೇಡಿ ರೈಡರ್, ಪ್ರಾಣ ಕಳೆದುಕೊಂಡ ಹಿಂಬದಿ ಕುಳಿತಿದ್ದ ಟೀಚರ್!
Karnataka News Live 16 June 2026Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!
Darshan Case: ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ.
Karnataka News Live 16 June 2026CM ಡಿಕೆಶಿ ಸರ್ಕಾರದ ಮೊದಲ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ? ರಾಜಧಾನಿಯಾಚೆ ಆಡಳಿತ
Karnataka News Live 16 June 2026ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆಗೆ ದಿನಾಂಕ ಫಿಕ್ಸ್
Karnataka News Live 16 June 2026RSS ದಾಖಲೆ ಕೇಳಿದ್ವಿ, ಸುನೀಲ್ ಅಣ್ಣ, ಅಶೋಕಣ್ಣ ಬಾಯಿಗೆ ಬಂದಾಗೆ ಮಾತಾಡ್ತಾರೆ - ಶಾಸಕ ಪ್ರದೀಪ್ ಈಶ್ವರ್
Karnataka News Live 16 June 2026ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ 121 ಕೋಟಿಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ನೈಕಿ ಇಂಡಿಯಾ
ಜಾಗತಿಕ ಕ್ರೀಡಾ ದೈತ್ಯ ನೈಕಿ ಇಂಡಿಯಾ, ಬೆಂಗಳೂರಿನ ಪ್ರತಿಷ್ಠಿತ ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿ 1.25 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದಿದೆ. 5 ವರ್ಷಗಳ ಅವಧಿಯ ಈ ಬೃಹತ್ ಒಪ್ಪಂದದ ಒಟ್ಟು ಮೌಲ್ಯ 121 ಕೋಟಿ ರೂಪಾಯಿಗಳಾಗಿದೆ.
Karnataka News Live 16 June 2026Baby Names - ನಿಮ್ಮ ಮುದ್ದಿನ ಕಂದನಿಗೆ ಕಾರ್ತಿಕೇಯನ ಈ 40 ಹೆಸರುಗಳನ್ನಿಡಿ - ಎಲ್ಲರೂ ಮೆಚ್ಚಿಕೊಳ್ತಾರೆ!
Baby Names: 2026ರಲ್ಲಿ ಟ್ರೆಂಡಿಂಗ್‌ನಲ್ಲಿರುವ, ಶಿವ-ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಂಬಂಧಿಸಿದ ಮಾಡರ್ನ್ ಮತ್ತು ಯೂನಿಕ್ ಹೆಸರುಗಳ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಅರ್ಥಪೂರ್ಣ ಹೆಸರುಗಳ ಲಿಸ್ಟ್.
Karnataka News Live 16 June 2026Cp Yogeshwara Son - 'ಸೈನಿಕ 2' ಮಾಡಲು ರೆಡಿಯಾದ ಶಾಸಕ ಸಿಪಿ ಯೋಗೇಶ್ವರ ಪುತ್ರ ಧ್ಯಾನ್!
cp yogeshwar son dhyan: ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್ ಹೊಸ ಸಿನಿಮಾದಲ್ಲಿ ನಟಿಸುವ ನಿರ್ಧಾರ ಕೈಗೊಂಡಿದ್ದು, ಎರಡೂ ಸಿನಿಮಾಗಳ ಮುಹೂರ್ತ ಜು.5ರಂದು ನಡೆಯಲಿದೆ.
Karnataka News Live 16 June 2026Chanakya Niti - ಪತ್ನಿಯನ್ನು ಈ 4 ಜಾಗಕ್ಕೆ ಅಪ್ಪಿತಪ್ಪಿಯೂ ಕರೆದುಕೊಂಡು ಹೋಗಬೇಡಿ ಅಂತಾರೆ ಚಾಣಕ್ಯ!
Chanakya Niti For Married Life: ಚಾಣಕ್ಯ ನೀತಿಯ ಪ್ರಕಾರ, ಗಂಡ ತನ್ನ ಹೆಂಡತಿಯನ್ನು ಯಾವ 4 ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು? ಕುಟುಂಬದ ಸುರಕ್ಷತೆ ಮತ್ತು ಗೌರವದ ಬಗ್ಗೆ ಚಾಣಕ್ಯರು ನೀಡಿದ ಸಲಹೆಗಳೇನು?
Karnataka News Live 16 June 2026ದಶಕದ ಕನಸಿಗೆ ಜೀವ - ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಬಿಗ್ ಬೂಸ್ಟ್, 3348 ಕೋಟಿ ಟೆಂಡರ್ ಒಪ್ಪಿಕೊಂಡ SNC!
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಮೊದಲ ಪ್ಯಾಕೇಜ್ ಅಡಿಯಲ್ಲಿ ಮಾದಾವರದಿಂದ ಬಳ್ಳಾರಿ ರಸ್ತೆವರೆಗಿನ 21 ಕಿ.ಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಗುತ್ತಿಗೆಯನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗೆ ಬಿಡಿಎ ನೀಡಿದೆ. ಈ ಮಹತ್ವದ ಒಪ್ಪಂದವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ.
Karnataka News Live 16 June 2026ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬಾಂಬ್ ಆತಂಕ - ಬೆಂಗಳೂರಿನ ಬಹುತೇಕ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್!
ಬೆಂಗಳೂರಿನ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆಪ್ರಾದೇಶಿಕ ಸಾರಿಗೆ ಕಚೇರಿಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ತೀವ್ರ ಆತಂಕ ಸೃಷ್ಟಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ, ಇದು ಹುಸಿ ಬೆದರಿಕೆ ಎಂದು ಖಚಿತಪಡಿಸಿದ್ದಾರೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಇಮೇಲ್ ಕಳುಹಿಸಿದವರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.
Karnataka News Live 16 June 2026ರಸ್ತೆ ನಿರ್ಮಾಣ ವೆಚ್ಚಕ್ಕೆ ಐಐಟಿ ರೂರ್ಕಿ ಬಿಗ್ ಬ್ರೇಕ್ - ಕರ್ನಾಟಕದಲ್ಲಿ ಭಾರೀ ಖರ್ಚು ತಗ್ಗಿಸಬಲ್ಲ ‘ಬಯೋ-ಡಾಂಬರು’ ಮ್ಯಾಜಿಕ್!
Karnataka News Live 16 June 2026KSR Bengaluru ಕಾಮಗಾರಿ - 2 ತಿಂಗಳು ರೈಲು ಸಂಚಾರದಲ್ಲಿ ಭಾರಿ ಏರುಪೇರು, 58 ರೈಲು ರದ್ದು! ವಂದೇ ಭಾರತ್ ಕೂಡ ವ್ಯತ್ಯಯ!
ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿಯಿಂದಾಗಿ, ಮುಂದಿನ 2 ತಿಂಗಳ ಕಾಲ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.