Chanakya Niti For Married Life: ಚಾಣಕ್ಯ ನೀತಿಯ ಪ್ರಕಾರ, ಗಂಡ ತನ್ನ ಹೆಂಡತಿಯನ್ನು ಯಾವ 4 ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು? ಕುಟುಂಬದ ಸುರಕ್ಷತೆ ಮತ್ತು ಗೌರವದ ಬಗ್ಗೆ ಚಾಣಕ್ಯರು ನೀಡಿದ ಸಲಹೆಗಳೇನು? 

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ, ಕುಟುಂಬ, ಸಮಾಜ ಮತ್ತು ಸಂಬಂಧಗಳ ಬಗ್ಗೆ ಹಲವಾರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಇಂದಿನ ಕಾಲದಲ್ಲೂ ಚಾಣಕ್ಯರ ನೀತಿಗಳು ನಮಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ದಾರಿದೀಪವಾಗಿವೆ. ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ, ಪತಿಯು ತನ್ನ ಪತ್ನಿಯನ್ನು ಮರೆತೂ ಕೂಡ ಕರೆದುಕೊಂಡು ಹೋಗಬಾರದ ಕೆಲವು ಸ್ಥಳಗಳ ಬಗ್ಗೆ ಹೇಳಿದ್ದಾರೆ. ಹಾಗೆ ಮಾಡಿದರೆ ಅನಾಹುತ ಆಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಆ 4 ಸ್ಥಳಗಳು ಯಾವುವು ಎಂದು ಮುಂದೆ ತಿಳಿಯೋಣ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶತ್ರುಗಳು ಅಥವಾ ವಿರೋಧಿಗಳ ನಡುವೆ

ಚಾಣಕ್ಯರ ಪ್ರಕಾರ, ಶತ್ರುಗಳು ಅಥವಾ ನಿಮ್ಮನ್ನು ವಿರೋಧಿಸುವ ಜನರು ಇರುವ ಜಾಗಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗಬಾರದು. ಯಾಕಂದ್ರೆ, ನಿಮ್ಮ ಜೊತೆ ಪತ್ನಿ ಇರುವುದನ್ನು ನೋಡಿ ವಿರೋಧಿಗಳು ನಿಮ್ಮ ದೌರ್ಬಲ್ಯದ ಲಾಭ ಪಡೆಯಬಹುದು. ಅಂತಹ ಸ್ಥಳಗಳಲ್ಲಿ ಪತ್ನಿಯ ಸುರಕ್ಷತೆಗೂ ಅಪಾಯ ಉಂಟಾಗಬಹುದು. ಹೀಗಾಗಿ ಇಂತಹ ಕಡೆಗಳಿಗೆ ಹೆಂಡತಿಯನ್ನು ಕರೆದೊಯ್ಯಬೇಡಿ.

ರಹಸ್ಯ ಚರ್ಚೆಗಳಲ್ಲಿ

ಗಂಡ ಯಾವುದಾದರೂ ರಹಸ್ಯ ಚರ್ಚೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರೆ, ಅಂತಹ ಜಾಗಕ್ಕೂ ಪತ್ನಿಯನ್ನು ಕರೆದುಕೊಂಡು ಹೋಗಬಾರದು. ಒಂದು ವೇಳೆ ಮನೆಯಲ್ಲೇ ಅಂತಹ ಚರ್ಚೆ ನಡೆಯುತ್ತಿದ್ದರೆ, ಪತ್ನಿಯನ್ನು ಅದರಿಂದ ದೂರ ಇಡಬೇಕು. ಚಾಣಕ್ಯರ ಪ್ರಕಾರ, ಯಾವುದೇ ಯೋಜನೆಯ ಯಶಸ್ಸು ಅದರ ಗೌಪ್ಯತೆಯನ್ನು ಅವಲಂಬಿಸಿರುತ್ತದೆ. ಮಹಿಳೆಯರ ಸ್ವಭಾವ ಚಂಚಲವಾಗಿರುತ್ತದೆ, ಅವರು ಮಾತಿನ ಭರದಲ್ಲಿ ರಹಸ್ಯಗಳನ್ನು ಬೇರೆಯವರಿಗೆ ಹೇಳಿಬಿಡಬಹುದು ಎಂದು ಚಾಣಕ್ಯರು ಹೇಳುತ್ತಾರೆ.

ವಿವಾದ ಅಥವಾ ಜಗಳದ ಸ್ಥಳ

ಈಗಾಗಲೇ ಉದ್ವಿಗ್ನತೆ, ಜಗಳ ಅಥವಾ ವಿವಾದ ನಡೆಯುತ್ತಿರುವ ಸ್ಥಳಕ್ಕೆ ಪತ್ನಿಯನ್ನು ಕರೆದೊಯ್ಯುವುದು ಸರಿಯಲ್ಲ. ಅಂತಹ ಸ್ಥಳಗಳಲ್ಲಿ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಇದರಿಂದ ನಿಮ್ಮ ಜೊತೆಗೆ ನಿಮ್ಮ ಪತ್ನಿಯ ಜೀವಕ್ಕೂ ಅಪಾಯವಾಗಬಹುದು. ನೀವು ಒಬ್ಬರೇ ಇದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳಬಹುದು, ಆದರೆ ಪತ್ನಿ ಜೊತೆಗಿದ್ದರೆ ನೀವು ದುರ್ಬಲರಾಗಬಹುದು. ಹಾಗಾಗಿ ಇಂತಹ ತಪ್ಪು ಮಾಡುವುದನ್ನು ತಪ್ಪಿಸಬೇಕು.

ಅಪಾಯಕಾರಿ ಪ್ರಯಾಣದಲ್ಲಿ

ನೀವು ಜೀವಕ್ಕೆ ಅಪಾಯವಿರುವಂತಹ ಪ್ರಯಾಣಕ್ಕೆ ಹೋಗಬೇಕಿದ್ದರೆ, ಉದಾಹರಣೆಗೆ ಕಾಡು, ಯುದ್ಧಭೂಮಿ, ಅಂತಹ ಕಡೆಗಳಿಗೆ ಪತ್ನಿಯನ್ನು ಮರೆತೂ ಕೂಡ ಕರೆದುಕೊಂಡು ಹೋಗಬೇಡಿ. ಪತ್ನಿಯ ಸಂಪೂರ್ಣ ಜವಾಬ್ದಾರಿ ಗಂಡನ ಮೇಲಿರುತ್ತದೆ. ಇಂತಹ ಸ್ಥಳಗಳಲ್ಲಿ ಪತ್ನಿಯ ಬಗ್ಗೆ ಗಮನ ಹರಿಸುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಅಂತಹ ಪ್ರಯಾಣವನ್ನು ಮುಂದೂಡಿ ಅಥವಾ ಪ್ರಯಾಣ ಅನಿವಾರ್ಯವಾದರೆ ಪತ್ನಿಯನ್ನು ಜೊತೆಗೆ ಕರೆದೊಯ್ಯಬೇಡಿ.

ಗಮನಿಸಿ

ಈ ಲೇಖನದಲ್ಲಿರುವ ಮಾಹಿತಿಯನ್ನು ಧಾರ್ಮಿಕ ಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ನಮ್ಮ ಉದ್ದೇಶವಷ್ಟೇ. ಓದುಗರು ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.