Darshan Case: ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ.

ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಆದ್ರೆ ವಿಚಾರಣೆ ವೇಳೆ ಪವಿತ್ರಾ ಕಿಲ ಕಿಲ ಅಂತಿದ್ರೆ, ದರ್ಶನ್ ಮಾತ್ರ ವಿಲ ವಿಲ ಅಂತ ಒದ್ದಾಡ್ತಾ ಇದ್ರು. ಅಷ್ಟಕ್ಕೂ ಇದರ ಹಿಂದೆ ಒಂದು ದೊಡ್ಡ ಮ್ಯಾಟರ್ರೇ ಇದೆ.. ಏನದು ಮ್ಯಾಟರ್..? ದರ್ಶನ್ ಎ-2 ಆರೋಪಿ ಆಗಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್ CCH-59 ನ್ಯಾಯಾಲಯ ವರ್ಗಾವಣೆ ಆಗಿದ್ದು, ಅಲ್ಲಿ ವಿಚಾರಣೆ ಮುಂದುವರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ನಡೆದ ವಿಚಾರಣೆಗೆ ದರ್ಶನ್ , ಪವಿತ್ರಾ ಸೇರಿದಂತೆ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಈ ವೇಳೆ ದರ್ಶನ್ ಫುಲ್ ಟೆನ್ಷನ್​ನಲ್ಲಿ ಇದ್ದಂತೆ ಕಾಣ್ತಾ ಇದ್ರೆ , ಪವಿತ್ರಾ ಮಾತ್ರ ರಿಲ್ಯಾಕ್ಸ್ ಮೂಡ್​ನಲ್ಲಿರುವಂತೆ ಕಾಣ್ತಾ ಇತ್ತು. ಇದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಈ ಹಿಂದೆ ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್ , ಬೇಲ್​ ಗೆ ಅರ್ಜಿ ಸಲ್ಲಿಸಿದ ವೇಳೆ ಕೋರ್ಟ್ ಇನ್ನೂ ಒಂದು ವರ್ಷ ತ್ವರಿತ ವಿಚಾರಣೆ ನಡೆಯಲಿ ಆ ಬಳಿಕ ಬೇಲ್ ವಿಚಾರಣೆ ಅಂದುಬಿಟ್ಟಿತ್ತು.

ಇನ್ನೂ ಒಂದು ವರ್ಷ ಜೈಲು ಕೋಣೆಯಿಂದ ಹೊರಬರೋದಕ್ಕೆ ಆಗೋದಿಲ್ಲ ಅನ್ನೋದು ಗೊತ್ತಾದಾಗಿನಿಂದ ದರ್ಶನ್ ಮಂಕಾಗಿ ಹೋಗಿದ್ದಾರೆ. ಜೈಲಿನಲ್ಲಿ ತನಗೆ ಬೇಕಾದ ಸೌಲತ್ತುಗಳು ಸಿಗ್ತಾ ಇಲ್ಲ ಅಂತ ಒದ್ದಾಡ್ತಾ ಇರೋ ದರ್ಶನ್​ಗೆ ಇನ್ನೂ ಒಂದ್ವರ್ಷ ಇದೇ ಸ್ಥೀತಿಯಲ್ಲಿ ಕಳೀಬೇಕು ಅನ್ನೋದನ್ನ ಒಪ್ಪಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಹೌದು ಪವಿತ್ರಾ ಗೌಡ ಕೂಡ ದರ್ಶನ್ ಇರುವ ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ. ಆದ್ರೆ ಆಕೆ ಇರೋದು ಮಹಿಳಾ ಬ್ಯಾರಕ್​ನಲ್ಲಿ. ಇತ್ತೀಚಿಗೆ ಕೆಲವರು ಪವಿತ್ರಾಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ತಾ ಇದೆ ಅಂತ ಹೇಳಿದ್ರು. ಆಕೆ ಫುಲ್ ಆರಾಮಾಗಿ ಇದ್ದಾಳೆ ಅಂತಲೂ ಹೇಳಿದ್ರು.

ಜೈಲಿನಲ್ಲಿ ಪುರುಷರ ಬ್ಯಾರಕ್​ಗೆ ಹೋಲಿಸಿದ್ರೆ, ಮಹಿಳಾ ಬ್ಯಾರಕ್​ನಲ್ಲಿ ಅಷ್ಟೇನೂ ಕಠಿಣ ನಿಯಮ ಇರೋದಿಲ್ಲ. ಪುರುಷರ ಸೆಲ್​ನಲ್ಲಿ ಮಧ್ಯ, ಸಿಗರೇಟ್, ಗಾಂಜಾ, ಡ್ರಗ್ಸ್ ನಂತಹ ಚಟುವಟಿಕೆ ನಡೆಯುತ್ವೆ ಆದ್ದರಿಂದ ಅಧಿಕಾರಿಗಳು ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿರ್ತಾರೆ. ಜೊತೆಗೆ ಇಂಥಾ ವಿಚಾರಗಳು ಹೊರಬಂದು, ಜೈಲರ್ಸ್ ಕುತ್ತಿಗೆಗೆ ಬರುತ್ವೆ. ಸೋ ಪುರುಷರ ಬ್ಯಾರಕ್​ನ ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿ ನೋಡಿಕೊಳ್ಳಲಾಗುತ್ತೆ. ಅಲ್ಲಿನ ಮ್ಯಾನುವೆಲ್ ಹೊರತು ಪಡಿಸಿ ಇನ್ಯಾವುದೇ ಸೌಲಭ್ಯ ಕೊಡೋದಿಲ್ಲ.

ದರ್ಶನ್​ರಂಥಾ ಸೆಲೆಬ್ರಿಟಿಗಳನ್ನಂತೂ ಬ್ಯಾರಕ್​ನಲ್ಲಿ ಕೂಡಿಹಾಕಿಬಿಡ್ತಾರೆ. ದರ್ಶನ್​ಗೆ ಹೋಲಿಸಿದ್ರೆ ಮಹಿಳಾ ಬ್ಯಾರಕ್​ನಲ್ಲಿ ಪವಿತ್ರಾ ಯಾವ ಕಿರಿ ಕಿರಿ ಇಲ್ಲದೇ ಆರಾಮಾಗಿದ್ದಾರೆ. ಸೋಮವಾರ ಕೋರ್ಟ್​ನಲ್ಲಿ ಅವರ ಮುಖಬಾವ ನೋಡಿದ್ರೇನೇ ದರ್ಶನ್ ಮತ್ತು ಪವಿತ್ರಾ ಯಾವ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನ ಊಹೆ ಮಾಡಬಹುದು. ಹೌದು ಪ್ರಸ್ತುತ ಕೋರ್ಟ್​ನಲ್ಲಿ ಆಗಿರೋ ಹೊಸ ಬೆಳವಣಿಗೆ ಏನು ಅಂದ್ರೆ ಪ್ರತಿ ದಿನ ಈ ಪ್ರಕರಣದ ವಿಚಾರಣೆ ನಡೆಸಲು ಎಸ್ಪಿಪಿ ಮನವಿ ಸಲ್ಲಿಸಿದ್ರು. ಪ್ರತಿ ದಿನ ವಿಚಾರಣೆಗೆ ಸಹಕರಿಸಲು ಪ್ರಾಸಿಕ್ಯೂಷನ್ ಸಿದ್ದವಾಗಿದೆ ಅಂತ ಕೋರ್ಟ್​ಗೆ ತಿಳಿಸಿದ್ರು.

ಈ ಹಿಂದೆ ಸುಪ್ರೀಂ ಕೋರ್ಟ್ ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಸೂಚಿಸಿದೆ, ಸೋ ಪ್ರಕರಣದ ವಿಚಾರಣೆ ಅನಗತ್ಯ ಮುಂದೂಡಿಕೆ ಮಾಡದಂತೆ ಎಸ್ಪಿಪಿ ಮನವಿ ಸಲ್ಲಿಸಿದ್ದಾರೆ. ಇನ್ನೂ ದರ್ಶನ್ ಪರ ವಕೀಲ ಸುನೀನ್, ಸಾಕ್ಷಿ ಒಬ್ಬರ ಕ್ರಾಸ್ ಎಕ್ಸಾಮಿನೇಷನ್ ಗೆ ಸಮಯ ಕೋರಿದ್ದರು. ಆದ್ರೆ ಸಾಕ್ಷಿಯ ಪಾಟೀಸವಾಲ್ ಗೆ ಸಮಯ ನೀಡದಂತೆ ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ರು. ಇನ್ನೂ ಇದನ್ನ ಆಲಿಸಿದ ನ್ಯಾಯಮೂರ್ತಿಗಳು,ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತ್ವರಿತ ವಿಚಾರಣೆಗೆ ಸಹಕರಿಸಿ ಅಂತ ಆರೋಪಿಗಳ ಪರ ವಕೀಲರಿಗೆ ಸೂಚನೆ ಕೊಟ್ರು.

ಇದಕ್ಕೆ ಒಪ್ಪಿಕೊಂಡ ದರ್ಶನ್ ಪರ ವಕೀಲರುಪ್ರಾಸಿಕ್ಯೂಷನ್ ಯಾವ 60 ಪ್ರಮುಖ ಸಾಕ್ಷಿಗಳನ್ನ ವಿಚಾರಣೆಗೆ ಕರೆಯಲು ಮುಂದಾಗಿದೆ ಎಂಬ ಪಟ್ಟಿ ನೀಡಲು ಕೇಳಿಕೊಂಡ್ರು. ವಾರದಲ್ಲಿ ನಾಲ್ಕು ದಿನ ವಿಚಾರಣೆಗೆ ಕೋರ್ಟ್ ಸಮ್ಮತಿ ಕೊಟ್ಟಿದೆ. ಅಗತ್ಯವಿದ್ದಲ್ಲಿ ಐದನೇ ದಿನದ ವಿಚಾರಣೆಗೂ ಸಿದ್ದವಿರಲು ವಕೀಲರಿಗೆ ಸೂಚನೆ ನೀಡಲಿದೆ. ವಾರಕ್ಕೆ ಕನಿಷ್ಠ ಇಬ್ಬರ ಸಾಕ್ಷಿಗಳ‌ ವಿಚಾರಣೆ ತಿಂಗಳಿಗೆ ಕನಿಷ್ಠ 8 ಸಾಕ್ಷಿಗಳ ವಿಚಾರಣೆ ಮುಗಿಸಲು ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಸೂಚನೆ ನೀಡಿದೆ.

ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ಬರಲಿದೆ ಕೇಸ್..!

ಹೌದು ಈ ಬೆಳವಣಿಗೆ ನೋಡ್ತಾ ಇದ್ರೆ ಒಂದು ಕಡೆಗೆ ದರ್ಶನ್ ನಿಟ್ಟುಸಿರು ಬಿಡಬಹುದು. ಯಾಕಂದರೆ ಸುಪ್ರೀಂ ಸೂಚನೆ ಅನುಸಾರ ಇನ್ನೊಂದು ವರ್ಷದಲ್ಲಿ ಈ ಕೇಸ್ ಪ್ರಮುಖ ಹಂತಕ್ಕೆ ಬರಲಿದೆ. ಆಗ ದರ್ಶನ್​ಗೆ ಬೇಲ್ ಸಿಗೋ ಸಾಧ್ಯತೆ ಇರುತ್ತೆ. ಆದ್ರೆ ಕೇಸ್ ಕೊನೆಯ ಹಂತಕ್ಕೆ ಬರೋದ್ರಿಂದ ಜಡ್ಜ್​​ಮೆಂಟ್ ಕೂಡ ಅಷ್ಟೇ ಬೇಗ ಬರುತ್ತೆ. ಸೋ ಒಂದು ವೇಳೆ ದರ್ಶನ್ ವಿರುದ್ದ ತೀರ್ಪು ಬಂದರೆ ಮತ್ತೆ ದರ್ಶನ್ ಜೈಲು ಸೇರಬೇಕಾಗುತ್ತೆ. ಅದ್ರಲ್ಲೂ ಕೋರ್ಟ್ ಶಿಕ್ಷೆ ಕೊಟ್ಟಷ್ಟು ವರ್ಷ ಪರ್ಮನೆಂಟ್ ಆಗಿ ಜೈಲು ಪಾಲಾಗಬೇಕಾಗುತ್ತೆ. ಸೋ ತ್ವರಿತ ವಿಚಾರಣೆ ಒಂದು ಕಡೆಗೆ ದರ್ಶನ್​ಗೆ ರಿಲೀಫ್ ತಂದರೂ, ಇನ್ನೊಂದು ಕಡೆಗೆ ಬೇಗ ತನ್ನ ವಿರುದ್ದ ತೀರ್ಪು ಬರುತ್ತಾ ಅನ್ನೋ ಢವ ಢವ ಕೂಡ ಶುರುವಾಗಿಬಿಟ್ಟಿದೆ..!