- Home
- Entertainment
- Sandalwood
- Cp Yogeshwara Son: 'ಸೈನಿಕ 2' ಮಾಡಲು ರೆಡಿಯಾದ ಶಾಸಕ ಸಿಪಿ ಯೋಗೇಶ್ವರ ಪುತ್ರ ಧ್ಯಾನ್!
Cp Yogeshwara Son: 'ಸೈನಿಕ 2' ಮಾಡಲು ರೆಡಿಯಾದ ಶಾಸಕ ಸಿಪಿ ಯೋಗೇಶ್ವರ ಪುತ್ರ ಧ್ಯಾನ್!
cp yogeshwar son dhyan: ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್ ಹೊಸ ಸಿನಿಮಾದಲ್ಲಿ ನಟಿಸುವ ನಿರ್ಧಾರ ಕೈಗೊಂಡಿದ್ದು, ಎರಡೂ ಸಿನಿಮಾಗಳ ಮುಹೂರ್ತ ಜು.5ರಂದು ನಡೆಯಲಿದೆ.

‘ಸೈನಿಕ’ ಚಿತ್ರದ ಸೀಕ್ವೆಲ್ ‘ಸೈನಿಕ 2’
ಈ ಎರಡು ಸಿನಿಮಾಗಳ ಪೈಕಿ ಯೋಗೇಶ್ವರ್ ನಾಯಕನಾಗಿ ನಟಿಸಿ ಸೂಪರ್‌ಹಿಟ್ ಆಗಿದ್ದ ‘ಸೈನಿಕ’ ಚಿತ್ರದ ಸೀಕ್ವೆಲ್ ‘ಸೈನಿಕ 2’ ಒಂದಾಗಿದೆ. ‘ಸೈನಿಕ’ ಜನಪ್ರಿಯ ಮತ್ತು ಅದೃಷ್ಟದ ಸಿನಿಮಾ ಆಗಿರುವುದರಿಂದ ಈ ಚಿತ್ರದಲ್ಲಿ ತಂದೆ ಮತ್ತು ಪುತ್ರ ಇಬ್ಬರೂ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ಸಿನಿಮಾಕ್ಕೆ ತಯಾರಿ
ಒಂದು ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು, ಇನ್ನೊಂದು ಸಿನಿಮಾದ ಜವಾಬ್ದಾರಿಯನ್ನು ಯುವ ನಿರ್ದೇಶಕರೊಬ್ಬರಿಗೆ ನೀಡಲಾಗಿದೆ. ಧ್ಯಾನ್ ಯೋಗೇಶ್ವರ್ ಅವರ ಫೋಟೋಶೂಟ್ ಕೂಡ ನಡೆದಿದ್ದು, ಅವರು ಈ ಫೋಟ್‌ಶೂಟ್‌ನಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿದೇಶದಲ್ಲಿ ವಿದ್ಯಾಭ್ಯಾಸ
ಧ್ಯಾನ್ ಯೋಗೇಶ್ವರ್ ಅವರು ಸಿ.ಪಿ. ಯೋಗೇಶ್ವರ್ ಮತ್ತು ಶೀಲಾ ಯೋಗೇಶ್ವರ್ ದಂಪತಿ ಪುತ್ರನಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ಕುದುರೆ ಸವಾರಿ, ನಟನೆ, ಡಾನ್ಸ್ ತರಬೇತಿಯಲ್ಲಿ ನಿರತರಾಗಿದ್ದು, ಫಿಟ್‌ನೆಸ್ ಕುರಿತು ಆಸಕ್ತಿ ವಹಿಸಿದ್ದಾರೆ.
ಎರಡು ಕತೆ ಆಯ್ಕೆ
ಸಿ.ಪಿ. ಯೋಗೇಶ್ವರ್ ಅವರು ಬಹಳ ಮುತುವರ್ಜಿ ವಹಿಸಿ ಎರಡು ಕತೆಗಳನ್ನು ಆರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
