ಇನ್‌ಸ್ಟಾದಲ್ಲಿ ಪರಿಚಯವಾಗಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಯಿತು. ಇಬ್ಬರದ್ದೂ ಒಂದೇ ಊರು. ಹೀಗಾಗಿ ಬೇಗನೆ ಆತ್ಮೀಯರಾಗಿದ್ದಾರೆ. 6 ತಿಂಗಳಿನಿಂದ ಒಟ್ಟಿಗೆ ವಾಸವಿದ್ದಾರೆ. ಇದೀಗ 20ರ ಹರೆಯದ ಯುವತಿಯನ್ನು ಕೊಲೆ ಮಾಡಲಾಗಿದೆ.

ಬೆಂಗಳೂರು (ಜೂ.16) ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಹೊಸದೇನಲ್ಲ. ಇದೇ ವೇಳೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ನಡೆಯುತ್ತಿರುವ ಹತ್ಯೆ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ 20ರ ಯುವಿತಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡದಿದೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಬಳಿಕ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ ನಡುವೆ ಕೆಲ ವಿಚಾರಗಳಲ್ಲಿ ಜಗಳವಾಗಿದೆ. ಪರಿಣಾಮ ಆರೋಪಿ 25ರ ಹರೆಯದ ಶರತ್ ಕತ್ತು ಹಿಸುಕಿ ಯುವತಿ ಅನುಷಾ ಕೊಲೆ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್‌ಸ್ಟಾದಿಂದ ಪರಿಚಯ, ಅಷ್ಟೇ ಬೇಗ ಲೀವ್ ಇನ್ ರಿಲೇಶನ್‌ಶಿಪ್

25ರ ಹರೆಯದ ಶರತ್ ಹಾಗೂ 20ರ ಹರೆಯದ ಅನುಷಾ ಇಬ್ಬರು ಹಾಸನದ ಸಕಲೇಶಪುರ ಮೂಲದವರು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಫ್ರಂ ಸಕಲೇಶಪುರ ಎಂದು ಬಯೋದಲ್ಲಿ ಹಾಕಲಾಗಿತ್ತು. ಅರೇ ನಮ್ಮೂರ ಹುಡುಗಿ ಎಂದು ಶರತ್ ಉತ್ಸಾಹ ಇಮ್ಮಡಿಯಾದರೆ, ಇತ್ತ ನಮ್ಮರ ಹುಡುಗ ಎಂದು ಅನೂಷ ಹಿರಿ ಹಿರಿ ಹಿಗ್ಗಿದ್ದಾಳೆ. ನಮ್ಮೂರು ನಿಮ್ಮೂರು ಒಂದೇ ಊರು, ನಾವಿಬ್ಬರು ಒಂದೇ ಸೂರಲ್ಲಿ ಇರಬೇಕು ಎಂದು ಲೀವ್ ಇನ್ ರಿಲೇಶನ್‌ಶಿಪ್‌ಗೆ ಒಕೆ ಎಂದಿದ್ದಾರೆ. ಮಲ್ಲೇಶ್ವರಂನಲ್ಲಿ ಮನೆ ಮಾಡಿ ಇಬ್ಬರು ಒಟ್ಟಿಗೆ ಇದ್ದರು. ಕಳೆದ 6 ತಿಂಗಳಿನಿಂದ ಜೊತೆಯಾಗಿ ವಾಸಿಸುತ್ತಿದ್ದರು. 

ಶನಿವಾರ ರಾತ್ರಿ ಮಲ್ಲೇಶ್ವರಂನ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡ್ತಿದ್ದ ಶರತ್ ಹಾಗೂ ಲೀವ್ ಇನ್ ಗೆಳತಿ ಅನುಷಾ ನಡುವೆ ಮನಸ್ತಾಪ ತೀವ್ರಗೊಂಡಿದೆ. ಜಗಳ ತೀವ್ರವಾಗುತ್ತಿದ್ದಂತೆ ಶರತ್, ಕತ್ತು ಹಿಸುಕಿ ಅನೂಷ ಹತ್ಯೆ ಮಾಡಿದ್ದಾನೆ. ಶನಿವಾರ ಕೊಲೈಗೆದು ಅಂದು ರಾತ್ರಿ ಇಡೀ ಏನು ಮಾಡಲಿ ಎಂದು ಯೋಚಿಸಿದ್ದಾನೆ. ರಾತ್ರೋರಾತ್ರಿ ಕೋಣೆಯಲ್ಲೇ ಮೃತದೇಹ ಬಿಟ್ಟು ಪರಾರಿಯಾಗಿದ್ದಾನೆ.

ಭಾನುವಾರ ಇಡೀ ಯೋಚನೆ ಮಾಡಿ ಯಾವುದೇ ಐಡಿಯಾ ಹೊಳೆಯಲಿಲ್ಲ. ಹೀಗಾಗಿ ಸೋಮವಾರ ವಕೀಲರೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅನುಷಾ ಮೃತದೇಹ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶರತ್ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಅಷ್ಟೇ ವೇಗದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿ ತನಿಖೆ ತೀವ್ರಗೊಳಿಸಿದ್ದಾರೆ. ಯುವತಿ ಅನೂಷಾ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.