11:43 PM (IST) Jul 16

Karnataka News Live 16 July 2026 'ಇದು ನನ್ನ ಕೊನೆಯ ಸಿನಿಮಾ ನಿರ್ಮಾಣ'... ಡಾಲಿ ಧನಂಜಯ ಹೀಗೆ ಹೇಳಿದ್ದೇಕೆ?

ನಿಮಗೆ ನನ್ನ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರು ಬಂದು ಮಾತಾಡಿ, ಬಚ್ಚಿಟ್ಟುಕೊಂಡು ಸಿನಿಮಾ ಮೇಲೆ ಹೊಡೀಬೇಡಿ. ಮದರ್‌ ಪ್ರಾಮಿಸ್‌ ಒಂದೊಳ್ಳೆ ಸಿನಿಮಾ ಅಂತ ಗುರುತಿಸಿಕೊಂಡಿದೆ ಎಂದರು ಡಾಲಿ ಧನಂಜಯ.

Read Full Story
10:58 PM (IST) Jul 16

Karnataka News Live 16 July 2026 ಬೆಂಗಳೂರಿನಲ್ಲಿ ರಾತ್ರೋರಾತ್ರಿ 2500 ಕೆಜಿ ದ್ರಾಕ್ಷಿ ಕದ್ದ ಕಳ್ಳರು, ಕಣ್ಣೀರಿಟ್ಟ ರೈತ!

ಚಿಕ್ಕಬಳ್ಳಾಪುರದ ರೈತ ಬಸವರಾಜ್ ಅವರ ತೋಟದಿಂದ ಕಟಾವಿಗೆ ಸಿದ್ಧವಾಗಿದ್ದ 2.5 ಟನ್ 'ರೆಡ್ ಗ್ಲೋಬ್' ದ್ರಾಕ್ಷಿಯನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಣ್ಣೀರು ಹಾಕುತ್ತಿದ್ದಾರೆ.

Read Full Story
09:24 PM (IST) Jul 16

Karnataka News Live 16 July 2026 Om ನನ್ನ ನೆಚ್ಚಿನ ಸಿನಿಮಾ - ಉಪ್ಪಿ ನಿರ್ದೇಶನ, ಶಿವಣ್ಣ ಅಭಿನಯವನ್ನು ಕೊಂಡಾಡಿದ ಪೃಥ್ವಿರಾಜ್

Om Kannada Movie: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮತ್ತೊಮ್ಮೆ ಕನ್ನಡ ಸಿನಿಮಾಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Read Full Story
07:05 PM (IST) Jul 16

Karnataka News Live 16 July 2026 ಮದ್ವೆಗೆ ಮುಂಚೆ ರಾಧಿಕಾ ಜೊತೆ ಯಶ್​ ಸುತ್ತಾಟ - ಜನರ ಮಾತು ಕೇಳಿ ರೋಸಿಹೋದ್ರಂತೆ ಅಮ್ಮ ಪುಷ್ಪಾ

ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು, ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಗೂ ಮುನ್ನ ಅವರಿಬ್ಬರು ಸುತ್ತಾಡುತ್ತಿದ್ದಾಗ ಜನರು ಆಡುತ್ತಿದ್ದ ಮಾತುಗಳಿಗೆ ತಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Read Full Story
05:41 PM (IST) Jul 16

Karnataka News Live 16 July 2026 Sa Re Ga Ma Pa Kannada Audition 2026 - ಬೆಂಗಳೂರಿನಲ್ಲಿ ಸರೆಗಮಪ ಶೋ ಆಡಿಷನ್‌ ಯಾವಾಗ?

Saregamapa Kannada Show: ಜೀ ಕನ್ನಡ ಸಂಗೀತ ಕಾರ್ಯಕ್ರಮ 'ಸರಿಗಮಪ' ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಡಿಷನ್‌ ಕೂಡ ಆಗಿದೆ. ಹಾಗಿದ್ದರೆ ಯಾವಾಗ? ಎಲ್ಲಿ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
05:40 PM (IST) Jul 16

Karnataka News Live 16 July 2026 ಥೇಟ್ ಶಿವನಂತೆ ಅಕುಲ್ ಬಾಲಾಜಿ ಹೊಸ ಮನೆಗೆ ಎಂಟ್ರಿ ಕೊಟ್ಟ ಶಿವಣ್ಣ - ವಿಡಿಯೋ ವೈರಲ್

ವಿಡಿಯೋದಲ್ಲಿ ಶಿವರಾಜ್‌ಕುಮಾರ್, ಸಾಂಪ್ರದಾಯಿಕ ಕಪ್ಪು ಬಣ್ಣದ ಬಟ್ಟೆ, ಹಣೆಗೆ ತಿಲಕ, ಕಿವಿಯಲ್ಲಿ, ಕೊರಳಲ್ಲಿ ಮತ್ತು ಕೈಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಮನೆಯೊಳಗೆ ಪ್ರವೇಶಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತವೆ.

Read Full Story
05:04 PM (IST) Jul 16

Karnataka News Live 16 July 2026 'RX ಬೈಕ್ ಕಥೆಯೊಂದಿಗೆ ಬರುತ್ತಿದೆ 'ರಾ.. ರಾ.. RX' - ಯತಿರಾಜ್ ಹೊಸ ಕನಸಿಗೆ ಚಾಲನೆ

Ra Ra RX Kannada Movie: ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಯತಿರಾಜ್ ಇದೀಗ ತಮ್ಮ ಹೊಸ ಕನಸಿನ ಸಿನಿಮಾ 'ರಾ.. ರಾ.. RX' ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Read Full Story
05:01 PM (IST) Jul 16

Karnataka News Live 16 July 2026 ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಮುಂದಾದ Yulu, ರಾಜಧಾನಿಯಲ್ಲಿ ಫ್ಲೀಟ್ ಹೆಚ್ಚಿಸಲು ಮುಂದಾದ ಎಲೆಕ್ಟ್ರಿಕ್ ಬೈಕ್!

ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ 'ಯುಲು' ಕ್ವಿಕ್ ಕಾಮರ್ಸ್ ಬೇಡಿಕೆಯಿಂದಾಗಿ ಭಾರಿ ಬೆಳವಣಿಗೆ ಸಾಧಿಸುತ್ತಿದೆ. 2027ರ ವೇಳೆಗೆ ಬೆಂಗಳೂರಿನಲ್ಲಿ ತನ್ನ ವಾಹನಗಳ ಸಂಖ್ಯೆಯನ್ನು 35,000ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ಇತ್ತೀಚೆಗೆ 2 ಬಿಲಿಯನ್ ಕಿ.ಮೀ. ಪ್ರಯಾಣದ ಮೈಲಿಗಲ್ಲು ದಾಟಿದೆ. ಕಂಪನಿಯು ಈಗ ಗೃಹ-ಸೇವೆಗಳ ವಿಭಾಗಕ್ಕೂ ವಿಸ್ತರಿಸುತ್ತಿದೆ.
Read Full Story
04:56 PM (IST) Jul 16

Karnataka News Live 16 July 2026 GBA ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಕೂಡ ವಿಭಜನೆ?

ರಾಜಧಾನಿಯ ಕಾನೂನು ಸುವ್ಯವಸ್ಥೆ ಬಲಪಡಿಸಲು, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಎರಡು ಅಥವಾ ಮೂರು ಭಾಗಗಳಾಗಿ ವಿಭಜಿಸಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಪ್ರಸ್ತಾವನೆಯನ್ನು ಖಚಿತಪಡಿಸಿದ್ದಾರೆ.

Read Full Story
04:38 PM (IST) Jul 16

Karnataka News Live 16 July 2026 ಯಶ್ ಜೊತೆ ಕೆಲಸ ಮಾಡಿದ ನಿರ್ದೇಶಕ ಈಗ ಹೀರೋ... 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ವಿಶೇಷವೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ 'ರಾಜಾಹುಲಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ್ದ ಹೊನ್ನರಾಜ್, ಇದೀಗ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.

Read Full Story
04:32 PM (IST) Jul 16

Karnataka News Live 16 July 2026 ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ - 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ

ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story
04:22 PM (IST) Jul 16

Karnataka News Live 16 July 2026 'ಅತಿಕಾಯ'ದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾದ ಸ್ವಾತಿಷ್ಟ ಕೃಷ್ಣನ್ - ರಗಡ್ ಲುಕ್ ವೈರಲ್

'ಅತಿಕಾಯ' ಚಿತ್ರದಲ್ಲಿ ಅವರು ಇದುವರೆಗೂ ಕಾಣಿಸದ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೋಡಿಯಾಗಿ ಪ್ರತಿಭಾವಂತ ನಟಿ ಸ್ವಾತಿಷ್ಟ ಕೃಷ್ಣನ್ ಅಭಿನಯಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

Read Full Story
04:18 PM (IST) Jul 16

Karnataka News Live 16 July 2026 ಮಂಗಳೂರು - ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ನಕಲಿ ನೋಟುಗಳು ಹಾಗೂ ಮುದ್ರಣ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story
04:14 PM (IST) Jul 16

Karnataka News Live 16 July 2026 ಬಾತ್‌ಟಬ್‌ನಲ್ಲಿ ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ; 19 ವರ್ಷಗಳ ಬಳಿಕ ಅದೇ ಮಗು ಈಗ ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿ!

ಫುಟ್‌ಬಾಲ್ ದಂತಕಥೆ ಮೆಸ್ಸಿ ಮತ್ತು ಉದಯೋನ್ಮುಖ ತಾರೆ ಲ್ಯಾಮಿನ್ ಯಮಾಲ್ 2026ರ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 19 ವರ್ಷಗಳ ಹಿಂದೆ, 2007ರಲ್ಲಿ ನಡೆದ ಒಂದು ಚಾರಿಟಿ ಫೋಟೋಶೂಟ್‌ನಲ್ಲಿ ಮೆಸ್ಸಿ, ಹಸುಗೂಸಾಗಿದ್ದ ಯಮಾಲ್‌ನನ್ನು ಎತ್ತಿಕೊಂಡಿದ್ದ ಅಪರೂಪದ ಚಿತ್ರ ವೈರಲ್‌ ಆಗಿದೆ.

Read Full Story
04:09 PM (IST) Jul 16

Karnataka News Live 16 July 2026 Rukmini Radha Krishna Movie - 'ರುಕ್ಮಿಣಿ ರಾಧಾ ಕೃಷ್ಣ' ಮೂಲಕ ಬೆಳ್ಳಿ ತೆರೆ ಮೇಲೆ ನಟಿ ಮೋಕ್ಷಿತಾ ಪೈ

Rukmini Radha Krishna Kannada Movie: ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರು 'ರುಕ್ಮಿಣಿ ರಾಧಾಕೃಷ್ಣ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಎರಡು ಹಾಡುಗಳು ರಿಲೀಸ್‌ ಆಗಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
03:54 PM (IST) Jul 16

Karnataka News Live 16 July 2026 ಉಡುಪಿ - ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!

ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.

Read Full Story
03:52 PM (IST) Jul 16

Karnataka News Live 16 July 2026 ಕೈಫ್ ಕೊಟ್ಟಿದ್ದು 10ಕ್ಕೆ 4 ಅಂಕ.. ಬೆನ್ನಲ್ಲೇ ಗಂಭೀರ್ ಮೇಲೆ ಮತ್ತೊಬ್ಬ ದಂತಕತೆ ಆಕ್ರೋಶ..!

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರು ಎರಡು ವರ್ಷ ಪೂರೈಸಿದ್ದಾರೆ. ಬೆನ್ನಲ್ಲೇ ಅವರ ಕಾರ್ಯ ಕ್ಷಮತೆ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದಾರೆ. ಮೊಹ್ಮದ್ ಕೈಫ್ 10ಕ್ಕೆ 4 ಅಂಕ ನೀಡಿದ ಬೆನ್ನಲ್ಲೇ ಜಹೀರ್ ಖಾನ್ ಕೂಡ ರೇಟ್ ನೀಡಿದ್ದಾರೆ. ಎಷ್ಟು ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ.

Read Full Story
03:23 PM (IST) Jul 16

Karnataka News Live 16 July 2026 ಇದು ಟಿ20 ಅಲ್ಲ, ರನ್ ಸುನಾಮಿ...! ನಿಕೋಲಸ್ ಪೂರನ್ ಅತಿವೇಗದ ಶತಕ ನೀರಲ್ಲಿ ಹೋಮ; 266 ರನ್ ಚೇಸ್ ಮಾಡಿ ವಿಶ್ವದ ಗಮನ ಸೆಳೆದ ಪಂದ್ಯ!

ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ, ವಾಷಿಂಗ್ಟನ್ ಫ್ರೀಡಂ ತಂಡವು ಎಂಐ ನ್ಯೂಯಾರ್ಕ್‌ ವಿರುದ್ಧ 267 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಸ್ಟೀವ್ ಸ್ಮಿತ್ ಮತ್ತು ಅಂಡ್ರಿಸ್ ಗೌಸ್ ಅವರ ಅಮೋಘ ಶತಕಗಳ ನೆರವಿನಿಂದ ಈ ಐತಿಹಾಸಿಕ ಗೆಲುವು ಸಾಧ್ಯವಾಯಿತು.
Read Full Story
01:26 PM (IST) Jul 16

Karnataka News Live 16 July 2026 ನನಗ್ಯಾರು ಫ್ರೆಂಡ್ಸ್ ಇಲ್ಲ ರೀ ಅಂತಾ ಕಣ್ಣೀರಿಟ್ಟ ಮಹಾನಟಿ ವರ್ಷಾ ಡಿಗ್ರಜೆ; ವಿಡಿಯೋ

ಜೀ ಕನ್ನಡದ ಮಹಾನಟಿ ಖ್ಯಾತಿಯ ನಟಿ ವರ್ಷಾ ಡಿಗ್ರಜೆ, ತಮಗೆ ಸ್ನೇಹಿತರಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟಿದ್ದಾರೆ. ಶಾಲಾ ದಿನಗಳಲ್ಲಿ ತಾನು ಮಾಡಿದ ತರಲೆ ಕೆಲಸಗಳಿಂದಾಗಿ ಯಾರು ತನ್ನೊಂದಿಗೆ ಸ್ನೇಹ ಬೆಳೆಸಲಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

Read Full Story
01:25 PM (IST) Jul 16

Karnataka News Live 16 July 2026 KEA KRIES Recruitment 2026 ರಾಜ್ಯದ ಮೊರಾರ್ಜಿ ಶಾಲೆಗೆ ಶಿಕ್ಷಕರ ನೇಮಕಾತಿ - 1087 ಹುದ್ದೆಗಳ ಬೃಹತ್ ಅವಕಾಶ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) 1,087 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿಯನ್ನು ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story