ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಒಂದನೇ ತರಗತಿ ವಿದ್ಯಾರ್ಥಿ ತ್ರಿಲೋಕ್ ಜೈನ್, ಸಂಜೆ ಶಾಲಾ ಆವರಣದಲ್ಲಿ ಆಟವಾಡುವಾಗ ಕುಸಿದುಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಶಿವಮೊಗ್ಗ (ಜೂ.16): ಹೃದಯಾಘಾತ(Heart attack)ದಿಂದ ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಸಾಗರ(Sagar) ತಾಲೂಕಿನ ಹಾಳಸಸಿ ಸರ್ಕಾರಿ ಪ್ರಾಥಮಿಕ ಶಾಲೆ(Halasasi Government Primary School)ಯಲ್ಲಿ ಆವರಣದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನಕಲುಕುವ ಘಟನೆ

ತ್ರಿಲೋಕ್ ಜೈನ್(Trilok jain) ಮೃತ ಬಾಲಕ. ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರನಾದ ತ್ರಿಲೋಕ್, ಹಾಳಸಸಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ರಜೆ ಮುಗಿದು ಇತ್ತೀಚೆಗಷ್ಟೆ ಶಾಲೆ ಪ್ರಾರಂಭವಾಗಿದ್ದ ಖುಷಿಯಲ್ಲಿದ್ದ ಬಾಲಕ. ದಿನವಿಡೀ ಆಟ ಪಾಠದಲ್ಲಿ ಲವಲವಿಕೆಯಿಂದ ಬಾಲಕ ಸಂಜೆ ಶಾಲೆ ಬಿಡುವ ಹೊತ್ತಿನಲ್ಲಿ ಆಟವಾಡುತ್ತಿದ್ದ. ಆಟವಾಡುವಾಗಲೇ ಶಾಲಾ ಆವರಣದಲ್ಲಿ ಏಕಾಏಕಿ ಕುಸಿದುಬಿದ್ದಿದ್ದಾನೆ.

ಘಟನೆ ಬಳಿಕ ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿರುವ ಬಾಲಕ. ಬೆಳಗ್ಗೆ ಕಣ್ಮುಂದೆ ಶಾಲೆಗೆ ಹೋಗಿದ್ದ ಮಗ, ಸಂಜೆ ವೇಳೆಗೆ ಶವವಾಗಿ ಕಂಡು ಪೋಷಕರ ಅಕ್ರಂದನ ಮುಗಿಲುಮುಟ್ಟಿತು.

ಇದನ್ನೂ ಓದಿ: ಹೃದಯಾಘಾತವೇ ಬೇರೆ ಹೃದಯ ಸ್ತಂಭನವೇ ಬೇರೆ; ಹೃದಯ ಸ್ತಂಭನದ ಲಕ್ಷಣಗಳಿವು; ಈಗಲೇ ತಿಳಿದುಕೊಳ್ಳಿ!