ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?

ಹಾಗಾದ್ರೆ ಈ ಪ್ಲಾಸ್ಟಿಕ್ ನೋಟುಗಳು ಭಾರತದಲ್ಲಿ ಯಾವಾಗಿನಿಂದ ಚಲಾವಣೆ ಆಗಲಿವೆ. ಈಗಿರುವ ನೋಟುಗಳನ್ನ ಹೇಗೆ ಹಿಂಪಡೆಯಲಾಗುತ್ತೆ ನೋಡೋಣ ಬನ್ನಿ

Share this Video
  • FB
  • Linkdin
  • Whatsapp

ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಆಗುವ ದಿನಗಳು ಹತ್ತಿರ ಬಂದಿವೆ. ಈಗಿರುವ ನೋಟುಗಳ ಬದಲಾಗಿ ಹೊಸ ನೋಟುಗಳನ್ನ ಚಾಲ್ತಿಗೆ ತರೋದಕ್ಕೆ ಆರ್​.ಬಿ.ಐ ಸಜ್ಜಾಗ್ತಾ ಇದೆ. ಸದ್ಯ ಚಲಾವಣೆಯಲ್ಲಿರೋ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ನೋಟುಗಳು ನಿಮ್ಮ ಕೈ ಸೇರಲಿವೆ. ಹಾಗಾದ್ರೆ 2016ರಲ್ಲಿ ಆದಂತೆ ಮತ್ತೆ ಡಿಮಾನಟೈಸೇಶನ್ ನಡೆಯುತ್ತಾ? ಹೊಸ ಕರೆನ್ಸಿ ಹೇಗಿರುತ್ತೆ? ಅವು ಭಾರತದ ಆರ್ಥಿಕತೆಯನ್ನ ಹೇಗೆ ಸುಧಾರಿಸುತ್ವೆ? ಪ್ಲಾಸ್ಟಿಕ್ ನೋಟುಗಳ ಕರೆನ್ಸಿ ಕ್ರಾಂತಿ ಕುರಿತ ಇನ್​ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

2016ರಲ್ಲಿ ಭಾರತದಲ್ಲಿ ಡಿಮಾನಟೈಸೇಶನ್ ಮಾಡಿದ್ದ ಮುಖ್ಯ ಕಾರಣ , ಖೋಟಾ ನೋಟುಗಳ ಜಾಲ. ಸದ್ಯ ಕಳ್ಳ ನೋಟುಗಳ ದಂಧೆ ಕಡಿಮೆ ಆಗಿದೆಯಾದ್ರೂ ಇದಕ್ಕೆ ಸಂಪೂರ್ಣ ಬ್ರೇಕ್ ಅಂತೂ ಬಿದ್ದಿಲ್ಲ. ಆದ್ರೆ ಪ್ಲಾಸ್ಟಿಕ್ ನೋಟುಗಳು ಎಂಟ್ರಿ ಕೊಟ್ಟಿದ್ದೇ ಆದರೆ ಕಳ್ಳನೋಟು ದಂಧೆಗೆ ಶಾಶ್ವತ ಬೀಗ ಬೀಳಲಿದೆ.

Related Video