- Home
- News
- India News
- India Latest News Live: ಬಾಬರ್, ರಿಜ್ವಾನ್, ಶಾಹಿನ್ ಸೇರಿದಂತೆ 12ಕ್ಕೂ ಅಧಿಕ ಪಾಕ್ ಕ್ರಿಕೆಟಿಗರಿಗೆ 100 ಕೋಟಿ ವಂಚಿಸಿ ಎಸ್ಕೇಪ್ ಆದ ಉದ್ಯಮಿ!
India Latest News Live: ಬಾಬರ್, ರಿಜ್ವಾನ್, ಶಾಹಿನ್ ಸೇರಿದಂತೆ 12ಕ್ಕೂ ಅಧಿಕ ಪಾಕ್ ಕ್ರಿಕೆಟಿಗರಿಗೆ 100 ಕೋಟಿ ವಂಚಿಸಿ ಎಸ್ಕೇಪ್ ಆದ ಉದ್ಯಮಿ!

ದಾವೋಸ್: ಭಾರತದ ಜೊತೆಗೆ ಶೀಘ್ರವೇ ನಾವು ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ಪ್ರಧಾನಿ ಮೋದಿ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ನನ್ನ ಆತ್ಮೀಯ ಸ್ನೇಹಿತ. ಶೀಘ್ರವೇ ನಾವು ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ ಕೀರ್ತಿಯ ಗರಿ ತೊಟ್ಟಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ ಹಾಡಿದ್ದಾರೆ. ದಾವೋಸ್ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಮಾತನಾಡುವ ವೇಳೆ, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು 71ನೇ ಸಲ ಬಡಾಯಿ ಕೊಚ್ಚಿಕೊಂಡಿದ್ದಾರೆ.
India Latest News Live 22 January 2026ಬಾಬರ್, ರಿಜ್ವಾನ್, ಶಾಹಿನ್ ಸೇರಿದಂತೆ 12ಕ್ಕೂ ಅಧಿಕ ಪಾಕ್ ಕ್ರಿಕೆಟಿಗರಿಗೆ 100 ಕೋಟಿ ವಂಚಿಸಿ ಎಸ್ಕೇಪ್ ಆದ ಉದ್ಯಮಿ!
India Latest News Live 22 January 2026ಪಿಂಚಣಿಯಿಂದ ಆರೋಗ್ಯ ವಿಮೆವರೆಗೆ.. ನಿವೃತ್ತಿಯ ನಂತರ ಸುನೀತಾ ವಿಲಿಯಮ್ಸ್‌ಗೆ ಪ್ರತಿ ತಿಂಗಳು ಸಿಗೋ ಹಣವೆಷ್ಟು?
India Latest News Live 22 January 2026ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ
ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂವುಗಳನ್ನು ಮಾರುತ್ತಿದ್ದ 11 ವರ್ಷದ ಪುಟ್ಟ ಬಾಲಕಿಯನ್ನು ಕಾಮುಕನೋರ್ವ ಅಪಹರಿಸಿ ಅತ್ಯಾ*ಚಾರವೆಸಗಿ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಂತಹ ದಾರುಣ ಘಟನೆ ನಡೆದಿದೆ.
India Latest News Live 22 January 2026'ಹೌದು ಆರ್‌ಸಿಬಿ ಟೀಮ್ ಖರೀದಿಗೆ ದೊಡ್ಡ ಮೊತ್ತದ ಬಿಡ್ ಮಾಡಿದ್ದೇನೆ..' ಖಚಿತಪಡಿಸಿದ ಬಿಲಿಯನೇರ್!
India Latest News Live 22 January 2026ಡ್ರಾಪ್ ಬೇಡ ಬೈಕೇ ಬೇಕು - ಹೆದ್ದಾರಿಯಲ್ಲಿ ಅಡ್ಡಹಾಕಿ ಬೈಕ್ ನೀಡುವಂತೆ ಪೀಡಿಸಿದ ಮಹಿಳೆ - ಆಮೇಲಾಗಿದ್ದೇನು?
ಹೆದ್ದಾರಿಯಲ್ಲಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿದ ಮಹಿಳೆಯೊಬ್ಬಳು, ತನ್ನ ಸಹೋದರನಿಗೆ ಅಪಘಾತವಾಗಿದೆ ಎಂದು ನಂಬಿಸಿ ಬೈಕ್ ಕೇಳಿದ್ದಾಳೆ. ಆಕೆಯ ವರ್ತನೆಯಿಂದ ಅನುಮಾನಗೊಂಡ ಸವಾರ ಏನು ಮಾಡಿದ್ರು ಬೈಕ್ ನೀಡಿದ್ರಾ ಆಮೇಲೆ ಏನಾಯ್ತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...
India Latest News Live 22 January 2026Greenland crisis - ನ್ಯಾಟೋಗೆ ಒತ್ತಡ ಸೃಷ್ಟಿಸಿದ ಗ್ರೀನ್‌ಲ್ಯಾಂಡ್
ನ್ಯಾಟೋ 32 ಸದಸ್ಯರ ಒಂದು ಮಿಲಿಟರಿ ಮೈತ್ರಿಕೂಟ. ಆರ್ಟಿಕಲ್ 5ರ ಅಡಿ 'ಒಬ್ಬರ ಮೇಲಿನ ದಾಳಿ ಎಲ್ಲರ ಮೇಲಿನ ದಾಳಿ' ಎಂಬ ತತ್ವದ ಮೇಲೆ ಕಾರ್ಯ.. ಒಂದು ವೇಳೆ ಅಮೆರಿಕ ಸದಸ್ಯ ರಾಷ್ಟ್ರವೇ ಡೆನ್ಮಾರ್ಕ್‌ನ ಭಾಗವಾದ ಗ್ರೀನ್‌ಲ್ಯಾಂಡ್ ಮೇಲೆ ದಾಳಿ ನಡೆಸಿದರೆ, ಅದು ಆಂತರಿಕ ಬಿಕ್ಕಟ್ಟು ಸೃಷ್ಟಿಸಬಹುದು.
India Latest News Live 22 January 2026ಮದುವೆಯಾದ ಎರಡೇ ತಿಂಗಳಿಗೆ ಹೆಂಡ್ತಿಯನ್ನು ಕೊಂದು ಪೊಲೀಸರ ಎದುರಲ್ಲೇ ಶೂಟ್ ಮಾಡಿಕೊಂಡ ಸಂಸದನ ಅಳಿಯ!!
ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿ ಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್, ತಮ್ಮ ಪತ್ನಿ ರಾಜೇಶ್ವರಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಕೇವಲ ಎರಡು ತಿಂಗಳಾಗಿದ್ದ ದಂಪತಿಗಳ ಸಾವಿನ ಸುತ್ತ ಅನುಮಾನಗಳು ಮೂಡಿವೆ.
India Latest News Live 22 January 2026ಸಾವಿರಾರು ಕೋಟಿ ವ್ಯವಹಾರದ ಅದಾನಿ Q3 ಆದಾಯ ಕೇವಲ ಇಷ್ಟೇನಾ? ಕುಸಿತ ಕಂಡ ಎನರ್ಜಿ
ಸಾವಿರಾರು ಕೋಟಿ ವ್ಯವಹಾರದ ಅದಾನಿ Q3 ಆದಾಯ ಕೇವಲ ಇಷ್ಟೇನಾ? ಕುಸಿತ ಕಂಡ ಎನರ್ಜಿ, ಮೂರನೈ ತ್ರೈಮಾಸಿಕದಲ್ಲಿ ಅದಾನಿ ಅದಾಯ ಕುಸಿತ ತಂಡಿದೆ. ಅಚ್ಚರಿ ಎಂದರೆ ಸಾವಿರ ಕೋಟಿ ಆದಾಯ ಪಡೆಯುತ್ತಿದ್ದ ಅದಾನಿ ಆದಾಯ ಇಷ್ಟೇನಾ?
India Latest News Live 22 January 2026Viral Video - ಶಾಲಾ ಸಮವಸ್ತ್ರದಲ್ಲಿಯೇ ನದಿಗೆ ಹಾರಿದ ಬಾಲಕಿ- ಬೆಚ್ಚಿಬೀಳೋ ವಿಡಿಯೋ ವೈರಲ್
India Latest News Live 22 January 2026ಹೆಣ್ಮಕ್ಕಳೇ ಡೇಂಜರ್ ಗುರು - ಜೀವ ರಕ್ಷಣೆಗೆ ಬಸ್ನಲ್ಲಿ ಪುರುಷರಿಂದ ಶುರುವಾಯ್ತು ಹೊಸ ಟ್ರೆಂಡ್!
ಸೋಷಿಯಲ್ ಮೀಡಿಯಾ ಲೈಕ್ಸ್‌ಗಾಗಿ ಕೇರಳದ ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ದೀಪಕ್ ಎಂಬ ಅಮಾಯಕನ ಮೇಲೆ ಸುಳ್ಳು ಆರೋಪ ಮಾಡಿ ವಿಡಿಯೋ ವೈರಲ್ ಮಾಡಿದ್ದಳು. ಈ ಅವಮಾನ ತಾಳಲಾರದೆ ದೀಪಕ್ ಸಾವಿನ ಹಾದಿ ಹಿಡಿದ ಬೆನ್ನಲ್ಲೇ ಜೀವ ರಕ್ಷಣೆಗೆ ಹೊಸ ಟ್ರೆಂಡ್ ಶುರುವಾಗಿದೆ.
India Latest News Live 22 January 2026ಅಪ್ಪನ ಹಳೇ ಪೆಟ್ಟಿಗೆಯಲ್ಲಿದ್ದ 'ನಿಧಿ' - 60 ವರ್ಷಗಳ ಬಳಿಕ ಮಗನ ಪಾಲಿಗೆ ಒಲಿದು ಬಂತು ಅದೃಷ್ಟದ 10 ಕೋಟಿ!
ಚಿಲಿಯ ಯುವಕನೊಬ್ಬನಿಗೆ ತನ್ನ ತಂದೆಯ ಹಳೆಯ ಪೆಟ್ಟಿಗೆಯಲ್ಲಿ 60 ವರ್ಷಗಳ ಹಿಂದಿನ ಪಾಸ್‌ಬುಕ್ ಸಿಕ್ಕಿತು. ಕಾನೂನು ಹೋರಾಟದ ನಂತರ, ಅಂದು ಸಣ್ಣ ಮೊತ್ತವಾಗಿದ್ದ ಆ ಉಳಿತಾಯವು ಬಡ್ಡಿ ಮತ್ತು ಹಣದುಬ್ಬರದಿಂದಾಗಿ ಇಂದು 10 ಕೋಟಿ ರೂಪಾಯಿಗಳ ಬೃಹತ್ ನಿಧಿಯಾಗಿ ಪರಿವರ್ತನೆಯಾಗಿದೆ.
India Latest News Live 22 January 2026ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್ ಮುಚ್ಚಾಲ್ ಮೇಲೆ ಮತ್ತೊಂದು ಸೆನ್ಸೇಷನಲ್ ಆರೋಪ, ಎಫ್‌ಐಆರ್ ದಾಖಲು!
ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರೊಂದಿಗಿನ ಮದುವೆ ಮುರಿದುಬಿದ್ದ ನಂತರ ಸುದ್ದಿಯಲ್ಲಿದ್ದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಮೃತಿ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಪಲಾಶ್ ವಿರುದ್ಧ ದೂರು ದಾಖಲಿಸಿದ್ದಾರೆ.
India Latest News Live 22 January 2026ಬಾಂಗ್ಲಾದೇಶ ಅಧಿಕೃತವಾಗಿ ಟಿ20 ವಿಶ್ವಕಪ್ ಬಾಯ್ಕಾಟ್! ಭಾರತಕ್ಕೇನು ನಷ್ಟವಿಲ್ಲ
ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸಲು ಬಾಂಗ್ಲಾದೇಶ ತೀರ್ಮಾನಿಸಿದೆ. ಮುಸ್ತಾಫಿಜುರ್ ರಹಮಾನ್ ಅವರ ಐಪಿಎಲ್ ವಿವಾದದ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ, ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.
India Latest News Live 22 January 2026ಮಗು ನೋಡಿಕೊಳ್ಳಲು ಬಂದ 10 ವರ್ಷದ ಬಾಲಕಿಯ ಉಪವಾಸ ಹಾಕಿ ಪಕ್ಕೆಲುಬು ಮುರಿಯುವಂತೆ ಹೊಡೆದ CRPF ದಂಪತಿ
ಗ್ರೇಟರ್ ನೋಯ್ಡಾದಲ್ಲಿ, ಸಿಆರ್‌ಪಿಎಫ್ ಜವಾನನ ಮನೆಯಲ್ಲಿ ಕೆಲಸಕ್ಕಿದ್ದ 10 ವರ್ಷದ ಬಾಲಕಿಯ ಮೇಲೆ ದಂಪತಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಸರಿಯಾಗಿ ಊಟ ನೀಡದೆ ಉಪವಾಸ ಹಾಕಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಬಾಲಿಯ ಪಕ್ಕೆಲುಬು ಮುರಿದಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ.
India Latest News Live 22 January 2026ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಅಸಹಾಯಕರಾಗಿ ಕುಳಿತ ತಂದೆ
ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಮಕಲುಕುವ ವಿಡಿಯೋ ಇದೀಗ ಹೊರಬಂದಿದೆ. ಮಗನ ಉಳಿಸಲು ಸಾಧ್ಯವಾಗದೆ ಚಡಪಡಿಸುತ್ತಿರುವ ವಿಡಿಯೋ ಘಟನೆಯ ಕರಾಳತೆಯನ್ನು ಬಿಡಿಸಿ ಹೇಳುತ್ತಿದೆ.
India Latest News Live 22 January 202644 ಸೆಕೆಂಡ್‌ನಲ್ಲಿ 72 ರಾಕೆಟ್ ಲಾಂಚ್ ಮಾಡುವ ಘಾತಕ ರಾಕೆಟ್ ಸಿಸ್ಟಮ್‌ಅನ್ನು ಪ್ರಮುಖ ದೇಶಕ್ಕೆ ಮಾರಿದ ಭಾರತ!
ಭಾರತದ ಶಸ್ತ್ರಾಸ್ತ್ರ ರಫ್ತು ದಾಖಲೆಯ ಮಟ್ಟಕ್ಕೆ ಏರಿದ್ದು, ನಾಗ್ಪುರದಿಂದ ಪಿನಾಕಾ ರಾಕೆಟ್ ವ್ಯವಸ್ಥೆಯ ಮೊದಲ ರಫ್ತು ಆದೇಶ ರವಾನೆಯಾಗಿದೆ. 44 ಸೆಕೆಂಡುಗಳಲ್ಲಿ 72 ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ಈ ವ್ಯವಸ್ಥೆಯನ್ನು, ರಾಜತಾಂತ್ರಿಕ ಕಾರಣಗಳಿಗಾಗಿ ಅರ್ಮೇನಿಯಾಗೆ ರಫ್ತು ಮಾಡಲಾಗಿದೆ.
India Latest News Live 22 January 2026ಲಾಟರಿ ಡ್ರಾ ಮೂಲಕ ನಿರ್ಧಾರ, ಬಿಎಂಸಿಗೆ ಜನರಲ್ ಕೆಟಗರಿಯ ಮಹಿಳಾ ಮೇಯರ್!
ಮೀಸಲಾತಿಯ ಪ್ರಕಾರ, ಪುಣೆ, ಧುಲೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ನಾಂದೇಡ್, ನವಿ ಮುಂಬೈ, ಮಾಲೆಗಾಂವ್, ಮೀರಾ ಭಯಂದರ್, ನಾಸಿಕ್ ಮತ್ತು ನಾಗ್ಪುರದಲ್ಲಿ ಮೇಯರ್ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
India Latest News Live 22 January 202612 ಸಾವಿರ ಕೋಟಿಯ IPO ಮೂಲಕ ಷೇರು ಮಾರುಕಟ್ಟೆಗೆ ಬರಲಿರುವ PhonePe, ಮೈಕ್ರೋಸಾಫ್ಟ್‌ನ ಎಲ್ಲಾ ಪಾಲು ಮಾರಾಟ!
ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್‌ಪೇ, ತನ್ನ ಐಪಿಒಗಾಗಿ ಸೆಬಿಯಿಂದ ಅನುಮೋದನೆ ಪಡೆದಿದ್ದು, ಸುಮಾರು ₹12,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಈ 'ಆಫರ್ ಫಾರ್ ಸೇಲ್' (OFS) ಮೂಲಕ, ವಾಲ್‌ಮಾರ್ಟ್ ತನ್ನ ಪಾಲನ್ನು ಕಡಿಮೆ ಮಾಡಲಿದೆ.
India Latest News Live 22 January 2026Breaking - ಜಮ್ಮು ಕಾಶ್ಮೀರದಲ್ಲಿ 200 ಅಡಿ ಕಮರಿಗೆ ಬಿದ್ದ ಸೇನಾ ವಾಹನ, 11 ಸೇನಾ ಸಿಬ್ಬಂದಿ ಸಾವು!
Breaking: 11 Soldiers Dead as Army Vehicle Falls into Gorge in Jammu Kashmir ಒಟ್ಟು 21 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವು ಎತ್ತರದ ಪೋಸ್ಟ್‌ಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ.